You cannot copy content of this page.
. . .

   ಇಂದು ವರ್ಷದ ಮೊದಲ ಚಂದ್ರಗ್ರಹಣ. ಇದನ್ನ ತೋಳ ಚಂದ್ರಗ್ರಹಣ ಅಂತಾನೂ ಕರೆಯುತ್ತಾರೆ. ಈ ಗ್ರಹಣ ಇವತ್ತು ರಾತ್ರಿ 10-37ಕ್ಕೆ ಆರಂಭವಾಗುತ್ತದೆ. ರಾತ್ರಿ 12.40ಕ್ಕೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಲಿದೆ. ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲಿಯೂ ಗ್ರಹಣ ಗೋಚರಿಸಲಿದ್ದು, ಬೆಳಗಿನ ಜಾವ 2.42ಕ್ಕೆ ಗ್ರಹಣ ಮೋಕ್ಷವಾಗಲಿದೆ.

  ಅಂದಹಾಗೆ ತೋಳ ಚಂದ್ರಗ್ರಹಣ ಅಂದರೆ ಏನು..? ತೋಳಕ್ಕೂ ಗ್ರಹಣಕ್ಕೂ ಸಂಬಂಧವೇನು..? ನಿಮಗೂ ಈ ಕುತೂಹಲ ಉಂಟಾಗಿರಬಹುದು. ದಂತ ಕಥೆಗಳ ಪ್ರಕಾರ ಹಾಗೂ ಪುರಾಣಗಳ ಪ್ರಕಾರ ಜನವರಿ ತಿಂಗಳ ಹುಣ್ಣಿಮೆಯಂದು ತೋಳಗಳು ಹೆಚ್ಚಾಗಿ ಊಳಿಡುತ್ತವೆ. ಹೀಗಾಗಿ ಈ ದಿನ ಚಂದ್ರಗ್ರಹಣ ಬಂದರೆ ಅದಕ್ಕೆ ತೋಳ ಚಂದ್ರಗ್ರಹಣವೆಂದು ಕರೆಯುತ್ತಾರೆ.

  ಪಾಪ್‌ ಸಂಸ್ಕೃತಿಯ ಪ್ರಕಾರ ತೋಳ ಚಂದ್ರಗ್ರಹಣದ ಸಂದರ್ಭದಲ್ಲಿ ನಾಯಿಗಳ ವರ್ತನೆಯಲ್ಲಿ ಬದಲಾವಣೆ ಕಂಡುಬರುತ್ತವೆಯಂತೆ. ಹಾಗೆಂದು ಚಂದ್ರಗ್ರಹಣ ಅಪಾಯಕಾರಿ ಎಂದು ನೀವು ತಿಳಿದರೆ ಅದು ಮೌಢ್ಯವಾಗುತ್ತದೆ. ಯಾಕೆಂದರೆ ಚಂದ್ರಗ್ರಹಣ ಸೌರಮಂಡಲದಲ್ಲಿ ನಡೆಯುವ ಸಹಜ ಪ್ರಕ್ರಿಯೆ ಅಷ್ಟೇ.

 

%d bloggers like this: