. . .
72 Views

   ಈರುಳ್ಳಿ ದರ ಏರಿಕೆ ಬೆನ್ನಲ್ಲೇ ಅಡುಗೆ ಅನಿಲ ದರ ಸತತ ನಾಲ್ಕನೇ ತಿಂಗಳೂ ಏರಿಕೆಯಾಗಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಕರ್ನಾಟಕದಲ್ಲಿ ಕಳೆದ 4 ತಿಂಗಳಿಂದ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‍ ದರ 108 ರೂಪಾಯಿ ಏರಿಕೆಯಾಗಿದೆ. ಡಿಸೆಂಬರ್‍ 1ರಿಂದ 13.30ರೂಪಾಯಿ ಏರಿಕೆಯಾಗಿದ್ದು, ಸದ್ಯ ಬೆಂಗಳೂರು ಮತ್ತು ಮೈಸೂರಿನಲ್ಲಿ LPG ದರ 701 ರೂಪಾಯಿಯಾಗಿದೆ. ಡಿಸೆಂಬರ್‍ 1ರಿಂದಲೇ ಹೊಸ ದರ ಜಾರಿಯಾಗಿದೆ.

  ದೇಶದ ವಿವಿಧ ರಾಜ್ಯಗಳಲ್ಲಿ LPG ದರ 13.20 ರೂಪಾಯಿಯಿಂದ 13.45 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ  ಎಲ್‌ಪಿಜಿಯ ಬೆಲೆ 13.20 ರೂ. ಏರಿಕೆಯಾಗಿದ್ದು, ಇದರೊಂದಿಗೆ ಅಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ ಈಗ 730 ರೂ.ಗೆ ಏರಿದೆ. ಅದೇ ಸಮಯದಲ್ಲಿ, ವಾಣಿಜ್ಯ ಸಿಲಿಂಡರ್‌ನ ಬೆಲೆಯೂ 7.30 ರೂಪಾಯಿ ಏರಿಕೆಯಾಗಿದ್ದು, ಈಗ 19 ಕೆಜಿ ಸಿಲಿಂಡರ್ ಬೆಲೆ 1295.50 ರೂಪಾಯಿ ಆಗಿದೆ. ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ದರ 695 ರೂಪಾಯಿಗೆ ಏರಕೆಯಾಗಿದ್ದು, ಮುಂಬೈನಲ್ಲಿ 665 ರೂಪಾಯಿಗಳಾಗಿವೆ. ಚೆನ್ನೈನಲ್ಲಿ 714 ರೂಪಾಯಿ, ಕೋಲ್ಕತಾದಲ್ಲಿ 725 ರೂಪಾಯಿಯಾಗಿದೆ.

Leave a Reply

 

%d bloggers like this: