You cannot copy content of this page.
. . .

ವರ್ಷದ ಮೊದಲ ದಿನವೇ ಶಾಕ್; LPG ಬೆಲೆ 19 ರೂ. ಹೆಚ್ಚಳ

  ಅಡುಗೆ ಅನಿಲ (LPG) ಬೆಲೆ ಸತತ ಐದನೇ ತಿಂಗಳೂ ಏರಿಕೆಯಾಗಿದೆ. ಹೊಸ ವರ್ಷದ ದಿನವೇ ಕೇಂದ್ರ ಸರ್ಕಾರ ಗ್ರಾಹಕರಿಗೆ ಶಾಕ್‍ ನೀಡಿದೆ. 14.2 ಕೆಜಿ ತೂಕದ ಮನೆ ಬಳಕೆಯ LPG ಗೆ 19 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದಲೇ ಹೊಸ ದರ ಏರಿಕೆಯಾಗಲಿದೆ.

 ಕಳೆದ ತಿಂಗಳ ಮೈಸೂರಿನಲ್ಲಿ ಅಡುಗೆ ಅನಿಲದ ಬೆಲೆ 701 ರೂಪಾಯಿ ಇತ್ತು. ಈಗ 19 ರೂಪಾಯಿ ಹೆಚ್ಚಳವಾಗಿದೆ. ಹೀಗಾಗಿ ಮೈಸೂರಿನಲ್ಲಿ ಇಂದಿನಿಂದ ಅಡುಗೆ ಅನಿಲದ ಬೆಲೆ 720 ರೂಪಾಯಿಯಾಗಲಿದೆ ಎಂದು ತಿಳಿದುಬಂದಿದೆ. ಐದು ತಿಂಗಳಿಂದೀಚೆಗೆ 130 ರೂಪಾಯಿ ಏರಿಕೆಯಾದಂತಾಗಿದೆ. 2019ರ ಮೇ-ಜೂನ್‍ ತಿಂಗಳಲ್ಲಿ ಅತಿ ಹೆಚ್ಚು ಹೆಚ್ಚಳವಾಗಿತ್ತು. ನಂತರ ಸೆಪ್ಟೆಂಬರ್‍ ತಿಂಗಳ ಅಡುಗೆ ಅನಿಲದ ದರ 590 ರೂಪಾಯಿಗೆ ಇಳಿದಿತ್ತು. ಆದರೆ, ನಂತರದ ಐದು ತಿಂಗಳಲ್ಲಿ ನಿರಂತರವಾಗಿ ಏರಿಕೆಯಾಗುತ್ತಾ ಬಂದಿದೆ.

  ಸದ್ಯದ ದರದ ಪ್ರಕಾರ ದೆಹಲಿಯಲ್ಲಿ 714 ರೂಪಾಯಿ, ಕೋಲ್ಕತ್ತಾದಲ್ಲಿ 747 ರೂಪಾಯಿ, ಮುಂಬೈನಲ್ಲಿ 684 ರೂಪಾಯಿ ಹಾಗೂ ಚೆನ್ನೈನಲ್ಲಿ 734 ರೂಪಾಯಿಯಾಗಲಿದೆ.

 

%d bloggers like this: