You cannot copy content of this page.
. . .

ಕೌಟಿಲ್ಯ ವಿದ್ಯಾಲಯದಲ್ಲಿ ‘ಸಂಕ್ರಾಂತಿ’ ಸಂಭ್ರಮ

 ಮೈಸೂರು: ಕಬ್ಬಿನ ಜಲ್ಲೆ ಅಲಂಕಾರ, ಮಾವಿನ ತೋರಣ, ಗರಿಗರಿ ಸೀರೆಯನ್ನುಟ್ಟು ಪುಟ್ಟ ಮಕ್ಕಳು ಎಳ್ಳು-ಬೆಲ್ಲ ಹಂಚಿದರೆ. ಗಂಡುಮಕ್ಕಳು ಪೈಜಾಮು, ಪಂಚೆ ತೊಟ್ಟು ಹಸುಗಳಿಗೆ ತಿನ್ನಿಸಲು ಹುಲ್ಲು ತಂದರು… ಹೀಗೆ ಕೌಟಿಲ್ಯ ವಿದ್ಯಾಲಯದಲ್ಲಿ ಸಂಕ್ರಾಂತಿ ಸಡಗರ ಮನೆ ಮಾಡಿತ್ತು. ಇಲ್ಲಿ ಮಕ್ಕಳೇ ಹಬ್ಬ ಆಚರಿಸಿ ಸಂಭ್ರಮಿಸಿದರು.

 ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಚಿಣ್ಣರು ಹಳ್ಳಿ ಸೊಗಡನ್ನು ಜೀವಂತಗೊಳಿಸಿದರು. ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ಸಂದೇಶ ಸಾರುವ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಿದರು.

 ಸಂಕ್ರಾಂತಿ ದಿನದಂದೇ ಹುಟ್ಟುಹಬ್ಬ ಆಚರಿಸಿಕೊಂಡ ಶಾಲೆಯ ಮೂರು ಮಕ್ಕಳಿಗೆ ಶಿಕ್ಷಕರೇ ಆರತಿ ಬೆಳಗಿದರು. ನಂತರ ಕರ್ನಾಟಕ ಮಾತ್ರವಲ್ಲದೆ ಪಂಜಾಬ್, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಯ ಬಗೆಯನ್ನು ಆಯಾ ರಾಜ್ಯದ ವೇಷಭೂಷಣ ಧರಿಸಿ, ನೃತ್ಯರೂಪದಲ್ಲಿ ಪರಿಚಯಿಸಿದ್ದು ವಿಶೇಷವಾಗಿತ್ತು.

Leave a Reply

 

%d bloggers like this: