You cannot copy content of this page.
. . .

-ಬಿ.ಎನ್.ಚಂದ್ರಶೇಖರ್

 ಸಾಂಸ್ಕೃತಿಕ ನಗರಿ ಮೈಸೂರಿನ ಕಾರಂಜಿ ಕೆರೆಯಲ್ಲಿ ಉತ್ಸವದ ವಾತಾವರಣ ರಂಗೇರಿತ್ತು. ಪ್ರಕೃತಿಯ ಮಡಿಲಲ್ಲಿ ಹಕ್ಕಿಗಳ ಚಿಲಿಪಿಲಿ ಗಾನ ಪರಿಸರ ಪ್ರೇಮಿಗಳ ಕಿವಿಗೆ ಇಂಪೆರೆದಿತ್ತು. ಪ್ರಕೃತಿ ಪ್ರಿಯರು ಕೆರೆಯ ಸೊಬಗನ್ನು ಕಣ್ತುಂಬಿಕೊಂಡರು, ಹಲವರು ದೋಣಿ ವಿಹಾರ ಮಾಡಿದರು. ಕಾರಂಜಿ ಕೆರೆಯಲ್ಲಿ ಉತ್ಸವವೇ ಮೈವೆತ್ತಂತಿತ್ತು.

 ೨೦ ವರ್ಷಗಳ ನಂತರ ಹೂಳೆತ್ತಿ ಅಭಿವೃದ್ಧಿಪಡಿಸಲಾದ ಕೆರಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ‘ಕಾರಂಜಿ ಕೆರೆ ಉತ್ಸವದಲ್ಲಿ’ ಪ್ರಕೃತಿ ಪ್ರೇಮಿಗಳು ಮಿಂದೆದ್ದರು. ಜೀವವೈವಿಧ್ಯ ಪುನಶ್ಚೇತನಗೊಂಡಿರುವ ಕಾರಂಜಿಕೆರೆಯಲ್ಲಿ ಯಾವುದೇ ಆಡಂಬರವಿಲ್ಲದೆ ಪರಿಸರಸ್ನೇಹಿಯಾಗಿ ನಡೆಯುತ್ತಿರುವ ಮೊದಲ ದಿನದ ಉತ್ಸವದಲ್ಲಿ ಕಾಲೇಜು ವಿದ್ಯಾರ್ಥಿಗಳು, ಪ್ರವಾಸಿಗರು ಪಾಲ್ಗೊಂಡು ಸಂಭ್ರಮಿಸಿದ ಮನಮೋಹಕ ದೃಶ್ಯ ಕಾರಂಜಿ ಕೆರೆಯಲ್ಲಿ ಕಂಡುಬಂತು.

 

ವಿದೇಶಿಯರ ಕಲರವ

 ಸದ್ದು, ಗದ್ದಲವಿಲ್ಲದೆ ಪ್ರಕೃತಿ ಉದ್ಯಾನದಲ್ಲಿ ಸಾರ್ವಜನಿಕರ ಮುಕ್ತ ಪ್ರವೇಶದೊಂದಿಗೆ ನಡೆಯುತ್ತಿರುವ ಉತ್ಸವದಲ್ಲಿ ವಿದೇಶಿಗರು ಕೂಡಾ ಪಾಲ್ಗೊಂಡು ಮನರಂಜನೆ ಪಡೆದುಕೊಂಡರು. ಪ್ರಕೃತಿಯ ಮಡಿಲಲ್ಲಿ ಜೋಗುಳವಾಡುವಂತೆ ವಿದೇಶಿಗರ ಮಕ್ಕಳು ಜಾರುಗುಪ್ಪೆ, ಜೋಕಾಲಿ ಇನ್ನಿತರ ಆಟದಲ್ಲಿ ತೊಡಗಿಸಿಕೊಂಡು ಸಂತೋಷಗೊಂಡರು.

 ಗಮನಸೆಳೆದ ದೋಣಿ ವಿಹಾರ

 ಉತ್ಸವಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು ಕುಟುಂಬ ಸಮೇತರಾಗಿ ಲೈಫ್ ಜಾಕೇಟ್ ಧರಿಸಿ ದೋಣಿಯಲ್ಲಿ ಕುಳಿತು ಜಾಲೀ ರೈಡ್ ಮಾಡಿದರು.

 ತಂಪಾಗಿ ಕೂಡಿರುವ ವಾತವರಣವು ನಿಶ್ಯಬ್ದವಾಗಿದ್ದು, ವಿಹರಿಸಲು ಅತ್ಯಧ್ಬುತವಾಗಿದೆ. ಸ್ವಚ್ಛತೆಯಿಂದ ಕೂಡಿರುವ ದಾರಿಗಳಲ್ಲಿ ಹೆಜ್ಜೆ ಹಾಕಲು ಸೂಕ್ತವಾಗಿದ್ದು, ಮನಸ್ಸಿಗೆ ಉಲ್ಲಾಸ ಮೂಡಿಸುತ್ತದೆ.
-ಕ್ಯಾಟ್ರಿನ್, ವಿದೇಶಿ ಪ್ರವಾಸಿಗರು

 ಮರ, ಗಿಡಗಳು ಸಮೃದ್ಧಿಯಾಗಿ ಕೂಡಿರುವ ಪರಿಸರ ಸುಂದರವಾದ ಅನುಭವ ನೀಡಿದೆ. ಕುಟುಂಬದ ಸದಸ್ಯರೊಂದಗೆ ಸಮಯ ಕಳೆಯಲು ಉತ್ತಮ ಸ್ಥಳವಾಗಿದೆ.
-ಸ್ಟೀಫನ್, ಜರ್ಮನಿ

 

%d bloggers like this: