ಗಂಜಾಂನಲ್ಲಿ ಈಗ ಕುರುಹಿಗಾಗಿ ಬೆರಳೆಣಿಕೆಯ ಅಂಜೂರದ ಗಿಡಗಳು ಸಿಗಬಹುದು. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಇಲ್ಲಿ 150ಕ್ಕೂ ಹೆಚ್ಚು ಅಂಜೂರದ ತೋಟಗಳಿದ್ದವು. ಒಮ್ಮೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗಂಜಾಂ ಗ್ರಾಮದ ಮೂಲಕ ಸಂಚರಿಸುತ್ತಿದ್ದಾಗ ಅಂಜೂರದ ರುಚಿ ನೋಡಿ, ಅದಕ್ಕೆ ಮಾರುಹೋಗಿದ್ದರು. ಅನಂತರ ಅವರು ಗಂಜಾಂ ಅಂಜೂರ ಬೆಳೆಯಲು ಪ್ರೋತ್ಸಾಹ ನೀಡಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸಕ್ತಿಯ ಫಲವಾಗಿ ದಿವಾನ್ ಮಿರ್ಜಾ ಇಸ್ಮಾಯಿಲ್ ಅಂಜೂರ ಬೆಳಗಾರರಿಗೆ ತಲಾ 5 ಗುಂಟೆ ಜಮೀನು ನೀಡಿ, ನೀರಾವರಿ ಸೌಲಭ್ಯವನ್ನೂ ಒದಗಿಸಿದ್ದರು.