You cannot copy content of this page.
. . .

ಐಪಿಎಲ್ ಹರಾಜು; ಕನ್ನಡಿಗ ಉತ್ತಪ್ಪಗೆ ಗರಿಷ್ಠ ಬೆಲೆ

 ಡಿಸೆಂಬರ್‍ ನಡೆಯಲಿರುವ ೧೩ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ ರಾಬಿನ್ ಉತ್ತಪ್ಪ ದೇಶೀಯ ಕ್ರಿಕೆಟಿಗರ ಪೈಕಿ ಅತೀ ಹೆಚ್ಚು ೧.೫ ಕೋಟಿ ರೂ. ಮೂಲಬೆಲೆ ಪಡೆದಿದ್ದಾರೆ.

 ಕೋಲ್ಕತಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ೩೩೨ ಆಟಗಾರರ ಪಟ್ಟಿ ಇದ್ದು, ವಿದೇಶದ ೭ ಆಟಗಾರರ ಮೂಲ ಬೆಲೆ ಗರಿಷ್ಠ ೨ ಕೋಟಿ ರೂ. ಆಗಿದೆ. ಎಂಟು ಫ್ರಾಂಚೈಸಿಗಳು ತನ್ನ ಆಟಗಾರರನ್ನು ಬಿಡುಗಡೆ ಮಾಡಿದ ಬಳಿಕ ಈ ಬಾರಿಯ ಹರಾಜು ಪ್ರಕ್ರಿಯೆಗೆ ಒಟ್ಟು ೯೯೭ ಆಟಗಾರರ ಹಸರು ನೋಂದಣಿಯಾಗಿತ್ತು. ಆದರೆ, ಹರಾಜು ಪ್ರಕ್ರಿಯೆಗೆ ಅಂತಿಮವಾಗಿ ೩೩೨ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

 ಶುಕ್ರವಾರ ಅಂತಿಮ ಪಟಿ ಪ್ರಕಟಿಸಲಾಗಿದ್ದು, ಪ್ಯಾಟ್ ಕಮಿನ್ಸ್, ಜೋಶ್ ಹೇಜ್ಲೆವುಡ್, ಕ್ರಿಸ್ ಲೀನ್, ಮಿಚೆಲ್ ಮಾರ್ಷ್, ಗ್ಲೇನ್ ಮ್ಯಾಕ್ಸ್‌ವೆಲ್, ಡೇಲ್ ಸ್ಟೇಯ್ನ್ ಹಾಗೂ ಏಂಜೆಲೊ ಮ್ಯಾಥ್ಯೂಸ್ ಮೂಲ ಬೆಲೆ ೨ ಕೋಟಿ ರೂ. ಆಗಿದೆ.

ರಾಬಿನ್ ಉತ್ತಪ್ಪ ಮೂಲ ಬೆಲೆ ೧.೫ ಕೋಟಿ ರೂ. ಆಗಿದ್ದು, ಪಿಯೂಷ್ ಚಾವ್ಲಾ, ಯೂಸಫ್ ಪಠಾಣ್ ಹಾಗೂ ಜಯದೇವ್ ಉನದ್ಕತ್ ಅವರ ಮೂಲ ಬೆಲೆ ೧ ಕೋಟಿ ರೂ. ನಿಗದಿಯಾಗಿದೆ. ಭಾರತದಿಂದ ಒಟ್ಟು ೧೮೬ ಆಟಗಾರರು ಹಾಗೂ ೧೪೩ ಸಾಗರೋತ್ತರ ಆಟಗಾರರು ಜತೆಗೆ ಮೂರು ಅಸೋಸಿಯೇಟ್ ರಾಷ್ಟ್ರಗಳ ಮೂವರು ಆಟಗಾರರು ಹರಾಜಿನಲ್ಲಿ ಇರಲಿದ್ದಾರೆ.  

 

%d bloggers like this: