You cannot copy content of this page.
. . .

   ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಘಟನೆ ನಡೆದ ಶಂಶಾಬಾದ್‍ ನ ಸ್ಥಳದಲ್ಲೇ ಎನ್‍ ಕೌಂಟರ್‍ ಮಾಡಲಾಗಿದ್ದು, ಸ್ಥಳದಲ್ಲಿ ಸಾವಿರಾರು ಜನ ಸೇರಿದ್ದಾರೆ. ಎನ್‍ ಕೌಂಟರ್‍ ಮಾಡಿದ್ದಕ್ಕೆ ದೇಶಾದ್ಯಂತ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ, ಸ್ಥಳದಲ್ಲಿ ಮಾತ್ರ ಜನ ಸಂಭ್ರಮಿಸುತ್ತಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಹೂಮಳೆ ಸುರಿಸಿದ್ದಾರೆ. ಪೊಲೀಸರನ್ನು ಎತ್ತಿಕೊಂಡು ಕುಣಿದಾಡಿದ್ದಾರೆ. ಪೊಲೀಸರಿಗೆ ಜೈಕಾರ ಕೂಗಿದ್ದಾರೆ. ಕೆಲವರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

 ಹೈದರಾಬಾದ್‍ ಹಾಗೂ ಸುತ್ತಮುತ್ತಲ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸಮಸ್ಯೆಯಾಗಿದೆ.

 

%d bloggers like this: