You cannot copy content of this page.
. . .

ನಿರ್ದೇಶಕನೊಂದಿಗೆ ಹೀರೋಯಿನ್ ಎಸ್ಕೇಪ್; ಮರ್ಯಾದೆಗೆ ಅಂಜಿ ವಿಷ ಸೇವಿಸಿದ ತಾಯಿ, ಅಜ್ಜಿ!

 ಸಿನಿಮಾ ನಿರ್ದೇಶಕನೊಂದಿಗೆ ಹೀರೋಯಿನ್ ಆದ ಕಾರಣ, ಹೀರೊಯಿನ್ ತಾಯಿ ಮತ್ತು ಅಜ್ಜಿ ಮರ್ಯಾದೆಗೆ ಅಂಜಿ ವಿಷ ಸೇವಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಅಜ್ಜಿ ಸಾವನ್ನಪ್ಪಿದರೆ, ತಾಯಿ ಸ್ಥಿತಿ ಗಂಭೀರವಾಗಿದೆ.

 ಚನ್ನಪಟ್ಟಣದಲ್ಲಿ ಹೀಗೊಂದು ಮನಮಿಡಿಯುವ ಸಿನೆಮಾ ಲವ್ ಸ್ಟೋರಿ ಆಗಿದೆ. ಸಾವನ್ನಪ್ಪಿದ ಅಜ್ಜಿ ಮುಖ ನೋಡಲು ಕೂಡ ಮೊಮ್ಮಗಳು ಬಂದಿಲ್ಲ. ನಟಿ ಹೆಸರು ವಿಜಯಲಕ್ಷ್ಮಿ (ಅಲಿಯಾಸ್ ಲಕ್ಷ್ಮಿ) ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮೆಲ್ಲಹಳ್ಳಿಯವರು. ಈಕೆ ‘ತುಂಗಾಭದ್ರ’ ಸಿನಿಮಾ ನಿರ್ದೇಶಕ ಆಂಜನಪ್ಪ ಜೊತೆ ಪ್ರೀತಿಗೆ ಬಿದ್ದು ಈಗ ಎಸ್ಕೇಪ್‍ ಆಗಿದ್ದಾರೆ.

ಸಿನೆಮಾ ಶೂಟಿಂಗ್‍ ವೇಳೆ ಪ್ರೇಮ

 10 ದಿನಗಳ ಕಾಲ ರಾಯಚೂರಿನಲ್ಲಿ “ತುಂಗಭದ್ರಾ” ಸಿನೆಮಾ ಶೂಟಿಂಗ್ ನಡೆದಿತ್ತು. ಈ ವೇಳೆ ನಿರ್ದೇಶಕ ಆಂಜನಪ್ಪ ಜೊತೆ ಪ್ರೀತಿಯಾಗಿದೆ. ಶಿವರಾಜ್‌ಕುಮಾರ್ ನಟನೆಯ ಆಯುಷ್ಮಾನ್ ಭವ, ಮಯೂರ್ ಪಟೇಲ್ ಅಭಿನಯದ ರಾಜೀವ ಸೇರಿದಂತೆ ಸುಮಾರು 16 ಸಿನೆಮಾಗಳಲ್ಲಿ ವಿಜಯಲಕ್ಷ್ಮಿ ನಟಿಸಿದ್ದಾರೆ. ನಟಿ ಪ್ರೇಮಮಹಲ್, ಜವಾರಿಲವ್, ಪ್ರೊಡಕ್ಷನ್ ನಂ.1 ಚಿತ್ರಗಳ ನಿರ್ಮಾಪಕರ ಬಳಿ ಅಡ್ವಾನ್ಸ್ ಪಡೆದಿದ್ದರು.

 ಡಿ.15ರಂದು ‘ತುಂಗಾಭದ್ರ’ ಸಿನೆಮಾ ನಿರ್ದೇಶಕ ಆಂಜನಪ್ಪ ಜೊತೆ ಓಡಿಹೋಗಿದ್ದಾರೆ. ಡಿ.30ರಂದು ಮತ್ತೆ ಮನೆಗೆ ವಾಪಾಸ್‍ ಆಗಿದ್ದರು. ‘ಆಂಜನಪ್ಪ ಜತೆ ತೆರಳಿ ತಪ್ಪು ಮಾಡಿದೆ, ಇನ್ನೊಂದೂ ಹೀಗೆ ಮಾಡಲ್ಲ’ ಎಂದು ತಾಯಿಗೆ ಕ್ಷಮೆ ಕೇಳಿದ್ದರು. ಹೀಗಿರುವಾಗಲೇ, ಜನವರಿ 3ರಂದು ವಿಜಯಲಕ್ಷ್ಮಿ ಮತ್ತೆ ಓಡಿಹೋಗಿದ್ದಾರೆ.

ಅಡ್ವಾನ್ಸ್‍ಗಾಗಿ ಪೀಡಿಸಿದ ನಿರ್ಮಾಪಕರು

 ಅದಾದ ನಂತರ ಹೀರೋಯಿನ್‍ಗೆ ಈ ಹಿಂದೆ ಅಡ್ವಾನ್ಸ್‍ ನೀಡಿದ್ದ ನಿರ್ಮಾಪಕರು ಮನೆಗೆ ಬಂದು ತಾಯಿಗೆ ಒತ್ತಡ ಹಾಕಿದ್ದಾರೆ. ಒಪ್ಪಂದದಂತೆ ತಮ್ಮ ಮಗಳನ್ನು ಶೂಟಿಂಗ್‌ಗೆ ಕಳುಹಿಸುವಂತೆ ವಿಜಯಲಕ್ಷ್ಮಿ ತಾಯಿಯನ್ನು ಒತ್ತಾಯಿಸಿದ್ದಾರೆ. ಕೊನೆಗೆ ಆಂಜನಪ್ಪನ ಊರು ಕೊಪ್ಪಳ ಜಿಲ್ಲೆ ಹಳ್ಳಿ ಹೊಸೂರಿಗೆ ತೆರಳಿ ಮಗಳ ಬಗ್ಗೆ ಪೋಷಕರು ವಿಚಾರಿಸಿದ್ದಾರೆ. ಅಲ್ಲಿಯೂ ಮಗಳು ಸಿಗದಿದ್ದ ಕಾರಣ ಮನನೊಂದ ತಾಯಿ ಸವಿತಾ, ಅಜ್ಜಿ ಚನ್ನಮ್ಮ, ಇತ್ತ ನಿರ್ಮಾಪಕರ ಹಿಂಸೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ವಿಷ ಸೇವಿಸಿದ್ದಾರೆ.  

 ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಜ್ಜಿ ಸಾವನ್ನಪ್ಪಿದರೆ, ಮಂಡ್ಯ ಮಿಮ್ಸ್‌ನ ICU ವಾರ್ಡ್‌ನಲ್ಲಿ ತಾಯಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಆತ್ಮಹತ್ಯೆಗೂ ಮುನ್ನ ನಮ್ಮ ಸಾವಿಗೆ ಆಂಜನಪ್ಪ ಕಾರಣ ಎಂದು ನಟಿ ತಾಯಿ ಆಡಿಯೋ ಮಾಡಿದ್ದಾರೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

%d bloggers like this: