You cannot copy content of this page.
. . .

  ಕೊಡಗು ಜಿಲ್ಲೆ ಭಾಗಮಂಡಲ ಸಮೀಪದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಸದ್ದಿಲ್ಲದೆ ಮ್ತತೆ ಅಕ್ರಮವಾಗಿ ಹರಳು ಕಲ್ಲು ಹೊರ ತೆಗೆಯುವ ದಂಧೆ ನಡೆಯುತ್ತಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಪ್ರಕರಣದ ರೂವಾರಿ ಎಂ.ಕೆ. ಸಲೀಂ ಮತ್ತು ಮಡಿಕೇರಿ ತ್ಯಾಗರಾಜ ಕಾಲೋನಿ ನಿವಾಸಿ ಎಂ.ಡಿ. ಶರೀಫ್ ಪೊಲೀಸರ ಅತಿಥಿಗಳಾಗಿದ್ದಾರೆ.

  ಬಂಧಿತರಿಂದ ಒಟ್ಟು 25 ಕೆ.ಜಿ ಹರಳುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಶಾಮೀಲಾಗಿದ್ದು, ತಲೆ ಮರೆಸಿಕೊಂಡಿರುವ ಮಡಿಕೇರಿ ಗೌಡ ಸಮಾಜದ ಬಳಿಯ ನಿವಾಸಿ ಅನಿಲ್, ತ್ಯಾಗರಾಜ ಕಾಲೋನಿ ನಿವಾಸಿ ಮಹಮದ್ ಆಲಿ, ಬೆಟ್ಟಗೇರಿಯ ರಶೀದ್ ರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.

   ಭಾಗಮಂಡಲದ ಪಶ್ವಿಮಘಟ್ಟ ಸಾಲಿನಲ್ಲಿ ಬರುವ ಪಟ್ಟಿಘಾಟ್ ಎಂಬ ದಟ್ಟ ಅರಣ್ಯ ಪ್ರದೇಶದಲ್ಲಿ  ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿಷೇಧವಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಈ ಪಟ್ಟಿಘಾಟ್ ಮೀಸಲು ಅರಣ್ಯದ ಆಯ್ದ ಭಾಗಗಳಲ್ಲಿ ಭಾರೀ ಆಳದ ಸುರಂಗಗಳನ್ನು ಕೊರೆದು ಬೆಲೆ ಬಾಳುವ ಹರಳು ಕಲ್ಲುಗಳನ್ನು ತೆಗೆಯುವ ಕೆಲಸ ಕದ್ದುಮುಚ್ಚಿ ನಡೆಯುತ್ತಿತ್ತು. ನಂತರದ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕಲಾಗಿತ್ತು. ಇದೀಗ ಕಳೆದ 4 ತಿಂಗಳಿಂದ ಮತ್ತೆ ಈ ದಂಧೆ ಆರಂಭವಾಗಿದೆ.

 

%d bloggers like this: