You cannot copy content of this page.
. . .

‘ಫ್ರೀ ಕಾಶ್ಮೀರ’ ಭಿತ್ತಿಪತ್ರ ವಿಚಾರ; ವರದಿ ಕೇಳಿದ ರಾಜ್ಯಪಾಲರು

    ಜವಹರಲಾಲ್‍ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ನಿನ್ನೆ ಮೈಸೂರು ವಿವಿಯಲ್ಲಿ ನಡೆದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಎಂಬ ಭಿತ್ತಿಪತ್ರ ರಾರಾಜಿಸಿತ್ತು. ಈ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ವರದಿ ನೀಡುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಮೈಸೂರು ವಿವಿಯಿಂದ ವರದಿ ಕೇಳಿದ್ದಾರೆ.

   ಫ್ರೀ ಕಾಶ್ಮೀರ ಭಿತ್ತಿಪತ್ರವನ್ನು ಪ್ರತಿಭಟನಾಕಾರರಲ್ಲೊಬ್ಬರು ಹಿಡಿದಿದ್ದರು. ಇದು ದೇಶದ್ರೋಹದ ಕೆಲಸ ಎಂಬ ಆರೋಪ ಕೇಳಿಬಂದಿತ್ತು. ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್‍ ಸದಸ್ಯರೊಬ್ಬರು ವಿವಿಯ ಕುಲಪತಿಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಪೊಲೀಸರು ಕಲಂ 124 a ಅಡಿ ಜಯಲಕ್ಷ್ಮಿಪುರಂ ಪೊಲೀಸ್‍ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ರಾಜ್ಯಪಾಲರು ವಿವಿ ಕುಲಪತಿಯಿಂದ ವರದಿ ಕೇಳಿದ್ದಾರೆ. ಸಂಜೆಯೊಳಗೆ ಪ್ರತಿಭಟನೆ ಹಾಗೂ ಫ್ರೀ ಕಾಶ್ಮೀರ ಭಿತ್ತಿಪತ್ರ ಹಿಡಿದಿದ್ದರ ಕುರಿತು ವರದಿ ನೀಡುವಂತೆ ಕೇಳಿದ್ದಾರೆ.

 

 

%d bloggers like this: