You cannot copy content of this page.
. . .

ಸರ್ಕಾರಿ ಶಾಲೆಯ ಕೊಠಡಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು; ಸುಟ್ಟು ಕರಕಲಾದ ದಾಖಲಾತಿಗಳು

 ನಂಜನಗೂಡು: ಮೂಲಭೂತ ಸೌಲಭ್ಯಗಳಿಲ್ಲದೆ ಹೆಣಗಾಡುತ್ತಿರುವ ಸರ್ಕಾರಿ ಶಾಲೆಯ ಕೊಠಡಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

 ಇಲ್ಲಿನ ರಾಷ್ಟ್ರಪತಿ ರಸ್ತೆಯಲ್ಲಿರುವ ಮುರಿದು ಬೀಳುವ ಸ್ಥಿತಿಯಲ್ಲಿರುವ ನಗರದ ಬಾಲಕರ ಪ್ರೌಢಶಾಲೆ ಕೊಠಡಿಗೆ ರಾತ್ರಿ ಬೆಂಕಿ ಹಚ್ಚಿದ್ದಾರೆ. ಒಂದಿಷ್ಟು ಕಸ-ಕಡ್ಡಿಗಳನ್ನು ಕಿಟಕಿಯ ಮುಖಾಂತರ ಒಳತೂರಿದ ದುಷ್ಕರ್ಮಿಗಳು ನಂತರ ಅದಕ್ಕೆ ಕಡ್ಡಿ ಗೀರಿರಬಹುದು ಎಂದು ಶಂಕಿಸಲಾಗಿದೆ.

 ನಗರದ ಹೃದಯ ಭಾಗದಲ್ಲಿರುವ ವೃತ್ತ ನಿರೀಕ್ಷಕರ ಕಾರ್ಯಾಲಯ ಹಾಗೂ ಪಟ್ಟಣ ಠಾಣೆಗೆ ಹೊಂದಿಕೊಂಡಂತೆ ಇರುವ, ೭೭ ವರ್ಷಗಳ ಹಿಂದಿನ ಸರ್ಕಾರಿ ಬಾಲಕರ ಈ ಶಾಲೆಯ ಕೊಠಡಿಗೇ ಬೆಂಕಿ ಇಟ್ಟ ಕಿಡಿಗೇಡಿಗಳ ಕಿತಾಪತಿಗೆ ಕೊಠಡಿಯಲ್ಲಿ ಮರದ ಪೆಟ್ಟಿಗೆಯೊಳಗಿದ್ದ ಶಾಲಾ ದಾಖಲಾತಿಗಳು ಸುಟ್ಟು ಕರುಕಲಾಗಿವೆ. ಉಳಿದಂತೆ ಹೆಚ್ಚಿನ ಅನಾಹುತವಾಗಿಲ್ಲ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪಂಕಜಾ ತಿಳಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.

Leave a Reply

 

%d bloggers like this: