You cannot copy content of this page.
. . .

FIR ದಾಖಲಿಸಿಕೊಂಡ ಕವಿತೆ 7 ಭಾಷೆಯಲ್ಲಿ ಅನುವಾದಗೊಂಡು ವೈರಲ್!

 ದೇಶಾದ್ಯಂತ ವಿವಾದ ಸೃಷ್ಟಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ)ಯನ್ನು ಪ್ರಶ್ನಿಸಿ ‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಶೀರ್ಷಿಕೆಯಡಿ ರೂಪುಗೊಂಡು ಎಫ್‍ಐಆರ್ ದಾಖಲಿಸಿಕೊಂಡಿದ್ದ ಕವಿತೆ ಈಗ 7 ಭಾಷೆಗಳಲ್ಲಿ ಅನುವಾದಗೊಂಡು ಲಕ್ಷ ಲಕ್ಷ ಜನರನ್ನು ತಲುಪಿ ಅಚ್ಚರಿ ಮೂಡಿಸಿದೆ.

 ಕವಿ ಸಿರಾಜ್‍ ಬಿಸರಳ್ಳಿ ಅವರು ಬರೆದಿರುವ ಕವಿತೆ ಇದಾಗಿದೆ. ಈ ಕವಿತೆಯಲ್ಲಿ ಸರ್ವಾಧಿಕಾರ ಧೋರಣೆಯ ರಾಜಕೀಯ ಧೋರಣೆ ವಿಢಂಬನೆಯನ್ನು ಕಾಣಬಹುದು. ಜ.9, 10ರಂದು ಆನೆಗೊಂದಿ ಉತ್ಸವದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಿರಾಜ್ ಬಿಸರಳ್ಳಿ ‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಕವಿತೆ ವಾಚಿಸಿದ್ದರು. ದೇಶವಿರೋಧಿ ಕವಿತೆ ವಾಚಿಸಿದ್ದಾರೆ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿ ಬಿಜೆಪಿ ಕಾರ್ಯಕರ್ತರು ಕವಿತೆ ವಿರುದ್ಧ ದೂರು ನೀಡಿದ್ದರು.

 ಎಫ್‍ಐಆರ್ ದಾಖಲಿಸಿಕೊಂಡ ಕವಿತೆ ಈಗ ಹೋರಾಟದ ರೂಪಕವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ ಎಂಬ ಧ್ವನಿ ಕೇಳಿ ಬರುತ್ತಿದೆ. ಹೀಗಾಗಿ, ಕನ್ನಡದ ಮೂಲ ಕವಿತೆಯೊಂದು ತುಳು, ಕೊಂಕಣಿ, ಇಂಗ್ಲಿಷ್, ಹಿಂದಿ,‌ ಉರ್ದು, ತೆಲುಗು ಭಾಷೆಗಳಿಗೆ ಅನುವಾದಗೊಂಡು ಸಾಮಾಜಿಕ ಮಾಧ್ಯಮದ ಮೂಲಕ ಎಲ್ಲೆಡೆ ವೈರಲ್‍ ಆಗುತ್ತಿದೆ.

ನಿನ್ನ ದಾಖಲೆ ಯಾವಾಗ ನೀಡುತ್ತಿ?

ಆಧಾರು, ರೇಷನ್ ಕಾರ್ಡಗಳ ಕ್ಯೂನಲ್ಲಿ

ಥಂಬಿನ, ಸರ್ವರಿನ ಮಂಗನಾಟದಲ್ಲಿ

ಬದುಕ ಕಳೆದುಕೊಳ್ಳು ತ್ತಿರುವವರ ದಾಖಲೆ

ಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ?

ನಾಡಿನ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ನೇಣಿಗೇರಿದವರ ,

ಹೆಸರೂ ಬೇಡವೆಂದು ಹುತಾತ್ಮರಾದವರ

ಇತಿಹಾಸದ ಹಾಳೆಗಳ ಹರಿಯುತ್ತಿರುವವನೇ

ನಿನ್ನ ದಾಖಲೆ ಯಾವಾಗ ನೀಡುತ್ತಿ.?

ತಾಜ್ ಮಹಲ್, ಚಾರ್ ಮಿನಾರು ಗುಂಬಜಗಳಿಗೆ

ಕೆಂಪು ಕೋಟೆ ಕುತುಬ್ ಮಿನಾರುಗಳಿಗೆ ಸಾಕ್ಷಿ ಕೇಳುತ್ತಿರುವವನೇ

ನಿನ್ನ ದಾಖಲೆ ಯಾವಾಗ ನೀಡುತ್ತಿ?

ಬ್ರಿಟಿಷರ ಬೂಟು ನೆಕ್ಕಿದ ತಲೆಹಿಡುಕರ

ಧರ್ಮ ದ್ವೇಷದ ಅಮಲಿನಲ್ಲಿ ರಕ್ತ ಕುಡಿಯುತ್ತಿರುವ

ಗೊಬೆಲ್ ಸಂತತಿಯವನೇ

ನಿನ್ನ ದಾಖಲೆ ಯಾವಾಗ ನೀಡುತ್ತಿ?

ಪಕೋಡ ಮಾರಿ ಬದುಕಿದವನು

ಚಾ ಮಾರಿ ಬದುಕಿದವನು ನನ್ನೂರಿನಲ್ಲಿ

ಮನುಷ್ಯತ್ವ ಮಾರಿಕೊಂಡಿಲ್ಲ

ಸ್ವಾಭಿಮಾನ ಮಾರಿಕೊಂಡಿಲ್ಲ, ಸುಳ್ಳಿನ ಕಂತೆಗಳ ಕತೆ ಕಟ್ಟಿಲ್ಲ

ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?

ಮುಳ್ಳು ಚುಚ್ಚಿ, ಹರಿದು, ಸಿಡಿದು ಹೋದ

ಟ್ಯೂಬುಗಳ, ಟೈಯರುಗಳ ತಿದ್ದಿ ತೀಡಿ ಗಾಳಿ ತುಂಬಿದ

ಪಂಚರ್ ನವನು ತನ್ನತನವನ್ನು ಮಾರಿಕೊಳ್ಳಲಿಲ್ಲ

ನೀನು ದೇಶವನ್ನೇ ಮಾರಿಬಿಟ್ಟೆಯಲ್ಲ

ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?

ದೇಶವನ್ನೇ ಯಾಮಾರಿಸಿದ ನಿನಗೆ

ನಕಲಿ ದಾಖಲೆಗಳು ದೊಡ್ಡದಲ್ಲ ಬಿಡು

ಕನಿಷ್ಠ ಮನುಷ್ಯತ್ವವೂ ನಿನಗಿದೆ

ಎನ್ನುವ ದಾಖಲೆ ಯಾವಾಗ ನೀಡುತ್ತಿ ?

ಸಿರಾಜ್ ಬಿಸರಳ್ಳಿಯವರ ಕವಿತೆಯನ್ನು ಗುರು ಸೂಳ್ಯ ತುಳುವಿಗೆ ಅನುವಾದಿಸಿದ್ದಾರೆ

ಆಧಾರ್ ಕಾರ್ಡ್ ದ, ರೇಷನ್ ಕಾರ್ಡ್ ದ ಲೈನ್ ಡ್

ಥಂಭ್ ಒತ್ತುನ, ಸರ್ವರ್ ಹಾಳಾಪಿನ ಮರ್ಲಾಟೊಡ್

ಬದ್ಕ್ ಇಜ್ಜಾಂದಾಪಿನಕ್ಲೆನ ಕಾಕಜಿ ಕೇನೊಂದುಲ್ಲತ

ನಿನ್ನ ಕಾಕಜಿ ಏಪ ತೂಪಾವ ?

ದೇಸೊದ ಸ್ವಸಂತ್ರಗ್ ಬೋಡಾದ್

ತೆಲ್ತೊಂದೇ ಗಲ್ಲ್ ಗ್ ಬೂರ್ನಕ್ಲೆನ,

ಪುದರ್ ಗೊತ್ತಾಯೆರ್ಲಾ ಬುಡಂದೆ ಮಣ್ಣಾಯಿನಕ್ಲೆನ

ಇತಿಹಾಸೊದ ಒಂಜೊಂಜಿ ಕಾಕಜಿನ್ಲಾ ಪರಿತೊಂದುಲತಾ

ನಿನ್ನ ಕಾಕಜಿ ಏಪ ತೂಪಾವ ?

ತಾಜ್ ಮಹಲ್, ಚಾರ್ ಮಿನಾರ್ ಗುಂಬಜ್ ಲೆಗ್

ಕೆಂಪು ಕೋಟೆ, ಕುತುಬ್ ಮಿನಾರುಲೆಗ್

ಸಾಕ್ಷಿ ಕೇನೊಂದುಲ್ಲತಾ..!

ನಿನ್ನ ಕಾಕಜಿ ಏಪ ತೂಪಾವ ?

ಪೊಣ್ಣು ಜೋಕುಲೆನ್ಲ ಅಡ ದೀದ್

ಪರಂಗಿದಕ್ಲೆನ ಬೂಟ್ಸು ನಕ್ಕಿನ,

ಧರ್ಮದ ಪುದರ್ ಡ್ ನೆತ್ತೆರ್ ಪರೊಂದುಪ್ಪುನ

ಗೊಬೆಲ್ ಕುಲತಾಯೆ ಆಯಿನ ಈ

ನಿನ್ನ ಕಾಕಜಿ ಏಪ ತೂಪಾವ ?

ಎಂಕ್ಲೆನ ಊರುಡು

ನೀರುಳ್ಳಿ ಬಜೆ ಮಾರೊಂದು

ಚಾತ ಅಂಗಡಿ ದೀದ್  ಬದುಕುನ ಏರ್ಲಾ

ಮನುಷ್ಯತ್ವ ಮಾರೊಂದಿಜೆರ್,

ಸ್ವಾಭಿಮಾನ ಮಾರೊಂದಿಜೆರ್,

ಸುಳ್ಳು ಕತೆ ಪಂಡ್ದ್ ನಂಬಾದಿಜೆರ್.

ಪನ್, ಏಪ ತೂಪಾವ ನಿನ್ನ ಕಾಕಜಿನ್ ?

ಆಣಿ ಕಂತ್ ದ್ ಪರಿನ ಟ್ಯೂಬುಗು, ಟಯರ್ ಗ್

ಜೋಪಾನಡ್ ಪಂಚರ್ ಪಾಡುನಕಲು ಏರ್ಲಾ

ಅಕ್ಲೆನಕ್ಲೆನ್ ಮಾರೋಂದಿಜೆರ್,

ಊರುಗೂರುನೇ ಮಾರೊಂದುಲ್ಲತಾ

ಈ ಏಪ ತೂಪಾವ ನಿನ್ನ ಕಾಕಜಿನ್ ?

ಊರ್ದಕ್ಲೆನ್ ಪೂರಾ ಮಂಗ ಮಲ್ತಿನ ನಿಕ್ಕ್

ಡುಬ್ಲಿಕೇಟ್ ದಾಖಲೆ ಮಲ್ಪುನ ದಾಲ

ಮಲ್ಲ ವಿಷಯ ಅತ್ತ್ ಬುಡು,

ಒಂಚೂರೇ ಚೂರು ಮಾನವೀಯತೆ ಆಂಡಲಾ

ಉಂಡು ಪನ್ಪಿನ ಕಾಕಜಿ ಏಪ ತೂಪಾವ ?

ವಿಲ್ಸನ್ ಕಟೀಲ್ ಅವರು ಸಿರಾಜ್ ಬಿಸರಳ್ಳಿಯವರ ಕವಿತೆಯನ್ನು ಕೊಂಕಣಿ ಭಾಷೆಗೆ ಅನುವಾದಿಸಿದ್ದಾರೆ

ತುಜೊ ದಾಖ್ಲೊ ಕೆನ್ನಾ ದಿತಾಯ್ ಗಾ?

ಆಧಾರ್, ರೇಶನ್ ಕಾರ್ಡಾಂಚ್ಯಾ ಸಾಲಿಂನಿ

ಥಂಬ್, ಸರ್ವರಾಚ್ಯಾ ಮಾಂಕ್ಡಾಖೆಳಾಂನಿ

ಜಿವಿತ್ ಹೊಗ್ಡಾವ್ನ್ ಘೆತಲ್ಯಾಂಚೊ ದಾಖ್ಲೊ ವಿಚಾರ್ತಲ್ಯಾ,

ತುಜೊ ದಾಖ್ಲೊ ಕೆನ್ನಾ ದಿತಾಯ್ ಗಾ?

ದೆಶಾಚ್ಯೆ ಸುಟ್ಕೆಖಾತಿರ್ ಹಾಸೊನ್ ಹಾಸೊನ್ ಫಾಶಿಕ್ ಚಡ್‍ಲ್ಲ್ಯಾಂಚಿಂ

ನಾಂವ್ ನಾಕಾ ಮ್ಹಣೊನ್ ಉಸ್ವಾಸ್ ದಾನ್ ದಿಲ್ಲ್ಯಾಂಚಿಂ

ಇತಿಹಾಸಾಚಿಂ ಪಾನಾಂ ಪಿಂಜ್ತಲ್ಯಾ,

ತುಜೊ ದಾಖ್ಲೊ ಕೆನ್ನಾ ದಿತಾಯ್ ಗಾ?

ತಾಜ್ ಮಹಲ್, ಚಾರ್ ಮಿನಾರ್, ಗುಂಬಜಾಂಕ್

ರೆಡ್ ಫೋರ್ಟ್, ಕುತುಬ್ ಮಿನಾರಾಕ್

ಸಾಕ್ಸ್ ವಿಚರ್ತಲ್ಯಾ,

ತುಜೊ ದಾಖ್ಲೊ ಕೆನ್ನಾ ದಿತಾಯ್ ಗಾ?

ಬ್ರಿಟಿಶಾಂಚೆ ಮೊಚೆ ಲೆಂವ್ ಲ್ಲ್ಯಾ

ಧರ್ಮ್-ದ್ವೇಶಾಂಚ್ಯೆ ನಶೆಂತ್ ರಗತ್ ಘೊಟ್ತಲ್ಯಾ

ಗೊಬೆಲ್ ಸಂತತೆಚ್ಯಾ,

ತುಜೊ ದಾಖ್ಲೊ ಕೆನ್ನಾ ದಿತಾಯ್ ಗಾ?

ಪಕೋಡಾ, ಚಾಯ್ ವಿಕುನ್, ಮ್ಹಜ್ಯಾ ಗಾಂವಾಂತ್

ಸಾರ‍್ತಲಿಂ ಆಸಾತ್ ಜಿಣಿ

ಮನ್ಶಾಪಣ್, ಸ್ವಾಭಿಮಾನ್ ವಿಕುಂಕ್ ನಾ ತಾಣಿಂ

ಗುಂತುಂಕ್ ನಾ ತಾಣಿಂ, ಫಟಿಂಚಿ ಸಾಂಕಳ್ ಕಾಣಿ

ಸಾಂಗ್, ತುಜೊ ದಾಖ್ಲೊ ಕೆನ್ನಾ ದಿತಾಯ್ ಗಾ?

ಖಿಳೆ ತೊಪುನ್, ಪಿಂಜುನ್, ಫುಟೊನ್ ಗೆಲ್ಲ್ಯಾ

ಟ್ಯೂಬಾಂಕ್, ಟಯರಾಂಕ್ ವಾರೆಂ ಭರ್ ಲ್ಲ್ಯಾ

ಪಂಚರ್ ವಾಲ್ಯಾನ್ ವಿಕುಂಕ್ ನಾ ಆಪ್ಲೆಂಪಣ್

ಪುಣ್, ತುವೆಂ ದೆಶಾಕ್ ಚ್ ವಿಕ್ಲೆಂಯ್ ನೆ

ಸಾಂಗ್, ತುಜೊ ದಾಖ್ಲೊ ಕೆನ್ನಾ ದಿತಾಯ್ ಗಾ?

ಅಖ್ಖ್ಯಾ ದೆಶಾಕ್ ಸೂಂಬೆ ಕೆಲ್ಲ್ಯಾ ತುಕಾ

ನಕ್ಲಿ ದಾಖ್ಲೆ ರಚ್ಚಿ ವ್ಹಡ್ ಗಜಾಲ್ ನ್ಹಯ್, ಸೊಡ್

ಉಣ್ಯಾರ್ ಉಣೆಂ ತುಜೆಥಂಯ್ ಮನ್ಶಾಪಣ್ ಪುಣೀ ಆಸಾ

ಮ್ಹಣ್ಚ್ಯಾಕ್ ದಾಖ್ಲೊ ಕೆನ್ನಾ ದಿತಾಯ್ ಗಾ?

ಕನ್ನಡ್ ಮೂಳ್: ಸಿರಾಜ್ ಬಿಸರಳ್ಳಿ

ಕೊಂಕ್ಣೆಕ್ ವಿಲ್ಸನ್ ಕಟೀಲ್

 ಸಿರಾಜ್ ಬಿಸರಳ್ಳಿ ಕವಿತೆಯನ್ನು ಎಸ್.ಎಸ್.ಅಲಿ ಅವರು ತೆಲುಗು ಭಾಷೆಗೆ ಅನುವಾದ ಮಾಡಿದ್ದಾರೆ.

ఇది ఒక కన్నడ కవిత రాసిన రిపోర్టర్ సిరాజ్ బిసరహళ్లి పైన కర్ణాటక కొప్పల్ జిల్లా గంగావతి పోలీసు స్టేషన్లో కేసు నమోదు చేశారు.

కవిత్వం : సిరాజ్ బిసరహళ్లి

తెలుగు అనువాదం ఎస్.ఎస్.అలీ

ఎప్పుడు చూపుతావు ?

ఆధార్ రేషన్ కార్డుల వరుసలో నిలిచి

వేలిముద్ర కి, సర్వర్ల కోతి ఆటలో

బతుకులు పోగొట్టుకునేవాళ్ళ

పత్రములు అడిగేవాడివి

నీ సాక్షాధారాలు పత్రము ఎప్పుడు  చూపుతావు ?

దేశ స్వాతంత్రానికి చిరునవ్వుతో

ఉరికెక్కిన, చరిత్రలో పేరు వద్దని

వీరమరణం పొందిన వాళ్ళ

చరిత్ర కాగితాలు చింపేసినవాడివి

నీ సాక్షాధారాలు పత్రము ఎప్పుడు  చూపుతావు ?

తాజ్ మహల్ చార్మినార్ గుమ్మిజులు

ఎర్రకోట కుతుబ్మినార్లా

సాక్షాధారాలు అడిగేవాడివి

నీ సాక్షాధారాలు ఎప్పుడూ చూపుతావు ?

తెల్లవాళ్ళ బూట్లు నాకిన తలమాసినవాళ్ళు

ధర్మ ద్వేషాల మత్తులో రక్తం తాగుతున్న

గోబెల్స్ వంశస్థులవాడివి

నీ సాక్షాధారాలు పత్రాలు ఎప్పుడు చూపుతావు ?

పకోడాలు అమ్మి, టీ అమ్ముకుంటూ

బతికినవాడు మా ఊరిలో

మానవత్వం అమ్ముకోలేదు

స్వాభిమానము అమ్ముకోలేదు

పచ్చి అబద్ధాల కట్టలు కట్టలేదు

చెప్పు …..

నీ సాక్ష్యాధారాల పత్రము ఎప్పుడు చూపుతావు ?

ముళ్ళు గుచ్చుకొని, చినిగి పోయి,

పగిలిపోయిన ట్యూబుల టయర్ లకి

బాగు చేసి గాలి నింపిన పంచర్ వాళ్ళు

నిజాయితీ అమ్ముకోలేదు

నీవు దేశాన్ని అమ్మినవాడివి

చెప్పు…..

నీ సాక్షాధారాలు పత్రము ఎప్పుడు  చూపుతావు ?

దేశాన్ని మోసం చేసిన నీకు

నకలీ సాక్షాధారముల పత్రాలు పెద్దవి కావు

కనీసం మానవత్వం నీకు ఉందని

నీ సాక్ష్యాధారాల పత్రాలు ఎప్పుడు చూపుతావు ?

ಕವಿತೆ ಇಂಗ್ಲಿಷ್ ಗೆ ತರ್ಜುಮೆಯಾಗಿದೆ.

When will you show your Papers

In the queue of Aadhar and ration cards

With thumb impressions and foolery of servers

They are losing their livelihood

You, asking their documents

When will you show your papers?

Hey you, tearing the pages of history

Of those who sacrificed their lives to free the nation

Of those martyred who wanted whose names went unknown

When will you show your papers

You, demanding the papers of the Taj

Of the Char Minar, of the Gumbaz

Of the Qutub Minar and of the Red Fort,

When will you show your papers

The pimps who boot-licked the British

Now drinking the intoxicated blood of religious hatred

You, the descendant of the Gobel,

When will you show your papers

In my town, those selling Pakoda and Tea

To make a living, haven’t sold their humanity

Haven’t sold their Self-esteem, haven’t sold falsified stories

Tell me, when will you show your papers

Who pumped the thorn-pricked, burst tires

And brought them on roads,

Never sold his Self

But you, who sold the nation

When will you show your papers

For you, who deceived the countrymen,

Duping the papers is no big a deal

But, when will you show the papers

Of humanity in you, if at all there is.

ಉರ್ದು ಅನುವಾದ. Zeeshan Aaqil Siddiqui ಅವರು ಕವನವನ್ನು ಉರ್ದು ಭಾಷೆಗೆ ಅನುವಾದಿಸಿಕೊಟ್ಟಿದ್ದಾರೆ.

اپنے کاغذ کب بتائےگا؟

آدھار،راشن کارڈ کی لائن میں

انگھوٹا، سرور کے کھیل میں

زندگی کھولنے والوں کے کاغذات پوچھنے والے

تو اپنے کاغذ کب دکھائےگا؟؟

وطن کی آزادی کے خاطر، ہنستے ہنستے پھانسی پر چڑ جانے والوں کے

بے نام ہی شہید ہوجانے والے

تو اپنے کاغذ کب دکھائےگا؟؟

انگریز کے جوتے چاٹنے والے

نفرتوں کے نشے میں خون چوسنے والے

گبیل کی اولاد

تو اپنے کاغذ کب دکھائےگا؟؟

پکوڑا بیچ کر جانے والا

میرے گاؤں کا چائے بیچنے والا

انسانیت نہیں بیچا

عزتِ نفس نہیں بیچا

جھوٹ کی کہانی نہیں رچا

بتا، تو اپنے کاغذ کب دکھائےگا؟؟

کانٹوں سے پھٹے، پھوٹے، ٹیوب ٹائر کو

درست کرکے ہوا بھرنے والا،

پنچر والا اپنی خودی نہیں بیچا۔

تونے وطن کو ہی بیچ دیا

بتا, تو اپنے کاغذ کب دکھائےگا؟؟

دیش کو ہی دھوکہ دیا تو نے،

نقلی کاغذ بنانا کوئی بڑی بات نہیں،

کم از کم انسانیت تجھ میں ہے،

یہ کہنے والے کاغذ کب دکھائےگا؟؟*

ಕಾದಂಬಿನಿ ಅವರು ಸಿರಾಜ್ ಬಿಸರಳ್ಳಿ ಅವರ ಕವಿತೆಯನ್ನು ಹಿಂದಿಗೆ ಅನುವಾದಿಸಿದ್ದಾರೆ.

सिराज बिसरल्ली जी की कविता :

——————-

तुम् अपने कागज़ कब दिखावोगे?

**

आधार और राशन के लाइन में

थम्म् और सर्वर के बंदर के खेल में 

उलझ कर जिंदगी काटनेवालों से

कागज माँग ने लगे हो तुम,

अपना कागज़ कब दिखावोगे?  

मुल्क़ की आज़ादी के खातिर

मुस्कुराते हुए फांसी के फंदे पर

लटके थे कोई

नाम और शोहरत नकार कर

शहीद हुए थे लोग कईं

उनके इतिहास के

पन्नों को फाड़ने लगे हो तुम 

अपना कागज़ कब दिखावोगे? 

ताज महल, गुंबजें और चार मीनार,  

लाल किले और कुतुब मीनार-

की गवाही माँग ने लगे हो तुम,

अपना कागज़ कब दिखावोगे?

अंग्रेजों के जूतों के तलवे चाटने वाले

धर्म की नफ़रत के नशे में खून पीनेवाले

गोबेल के संतान के हो तुम

अपना कागज़ कब दिखावोगे?

जो पकोड़े बेच कर जीता है

जो चाय बेच कर जीता है

मेरे गाँव में कभी भी

इन्सानियत को नहीं भेचा है

आत्मसम्मान को नहीं बेचा है

झूठों की गठरी को नहीं बांधा है

कह दो तुम,

अपना कागज़ कब दिखावोगे?

कांटे चुभने से चटके, फटे-फूटे ट्यूबों को

ठीकठाक करके हवा भर ने वाले

पंक्चर के आदमीं ने

कभी अपनापन को नहीं बेचा है

तुमने तो देश को ही बेच डाला है न

कह दो तुम

अपना कागज़ कब दे दोगे?

सारे देश को उल्लू बनाने वाले से

नकली कागज़ बनवाना नहीं है मुश्किल, 

रत्तीभर इन्सानियत बची है तो तुम्हारे अंदर

उसके कागज़ तुम कब दे दोगे?

– सिराज बिसरल्ली

 

%d bloggers like this: