You cannot copy content of this page.
. . .

 ಕ್ಷುಲ್ಲಕ ಕಾರಣಕ್ಕೆ ಸ್ಟಾರ್ ಹೋಟೆಲೊಂದರಲ್ಲಿ ಜಗಳವಾಡಿಕೊಂಡಿದ್ದ ಸ್ಯಾಂಡಲ್‍ವುಡ್‍ನ ನಟಿ ಹಾಗೂ ಬಾಲಿವುಡ್‍ ನಿರ್ಮಾಪಕಿಯಿಬ್ಬರ ವೈಷಮ್ಯ ಈಗ ಗಂಭೀರ ಆರೋಪಕ್ಕೆ ಬಂದು ನಿಂತಿದೆ.

 ಹೌದು, ನಟಿ ಸಂಜನಾ ಅವರು ನಿರ್ಮಾಪಕಿ ವಂದನಾ ಜೈನ್ ವಿರುದ್ಧ 200 ಕೋಟಿ ರೂ. ಅಕ್ರಮ ಆಸ್ತಿ ಗಳಿಕೆಯ ಗಂಭೀರ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಕೂಡ ಒತ್ತಾಯಿಸಿದ್ದಾರೆ. ಇಷ್ಟಕ್ಕೂ ಇವರಿಬ್ಬರ ನಡುವಿನ ವೈಷಮ್ಯ ದೊಡ್ಡದಾಗಲು ಕಾರಣವಾದರು ಏನು?

 ಕಳೆದ ಭಾನುವಾರ ಬೆಂಗಳೂರಿನ ಸ್ಟಾರ್ ಹೋಟೆಲೊಂದರಲ್ಲಿ ಸಣ್ಣ ವಿಚಾರಕ್ಕೆ ನಟಿ ಸಂಜನಾ ಹಾಗೂ ನಿರ್ಮಾಪಕಿ ವಂದನಾ ಜೈನ್‍ ಅವರ ನಡುವೆ ಜಗಳವಾಗಿದೆ. ಈ ನಡುವೆ ನಿರ್ಮಾಪಕಿ ಮೇಲೆ ನಟಿ ಗ್ಲಾಸ್‍ನಿಂದ ಒಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಇಬ್ಬರೂ ಕಬ್ಬನ್ ಪಾರ್ಕ್‍ ಠಾಣೆಗೆ ದೂರು ನೀಡಿದ್ದಾರೆ. ನಂತರ ಕೇಸ್‍ನ್ನು ವಾಪಸ್ ತೆಗೆದುಕೊಂಡಿದ್ದಾರೆ. ಇದೇ ವೇಳೆ ನಿರ್ಮಾಪಕಿ ವಿರುದ್ಧ ನಟಿ ಸಂಜನಾ ಅಕ್ರಮ ಆಸ್ತಿ ಆರೋಪ ಹೊರಿಸಿದ್ದಾರೆ. ಈಗ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮೂಲಕ ಕಿತ್ತಾಡುತ್ತಿದ್ದಾರೆ.

‘ದೂರುದಾರರು ನ್ಯಾಯಾಲಯದ ಅನುಮತಿ ಪಡೆದರೆ ಎಫ್‍ಐಆರ್ ದಾಖಲಿಸುತ್ತೇವೆ. ದೂರುದಾರರನ್ನು ಕರೆಸಿ ಹೆಚ್ಚಿನ ವಿಚಾರಣೆ ನಡೆಸಲಾಗುವುದು’ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ಪ್ರತಿಕ್ರಿಯಿಸಿದ್ದಾರೆ.

 

%d bloggers like this: