You cannot copy content of this page.
. . .

ಪೊಲೀಸರ ಬಳಿಯ ಶಸ್ತ್ರಾಸ್ತ್ರಗಳು ಶೋಪೀಸ್‍ ಗಳಲ್ಲ; ಸಂಸದೆ ಮೀನಾಕ್ಷಿ ಲೇಖಿ

  ಪೊಲೀಸರಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟಿರುವ ಶೋಪೀಸ್‍ ಗಳಾಗಿ ಇಟ್ಟುಕೊಳ್ಳುವುದಕ್ಕಲ್ಲ. ಕಾನೂನು ಪ್ರಕಾರ ಅವುಗಳನ್ನು ಬಳಸಬೇಕಾಗುತ್ತದೆ. ಅದನ್ನು ಪೊಲೀಸರು ಮಾಡಿದ್ದಾರೆ ಎಂದು ಸಂಸದೆ ಮೀನಾಕ್ಷಿ ಲೇಖಿ ಹೇಳಿದ್ದಾರೆ. ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆ ವೇಳೆ ಮೀನಾಕ್ಷಿ ಲೇಖಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

   ಸಂಸತ್ತಿನ ಕಲಾಪದಲ್ಲೂ ಹೈದರಾಬಾದ್‍ ಎನ್‍ ಕೌಂಟರ್‍ ಪ್ರಕರಣದ ಬಗ್ಗೆಯೇ ಇವತ್ತು ಚರ್ಚೆ ನಡೆದಿದೆ. ಬಹುತೇಕ ಸಂಸದರು ಪೊಲೀಸರ ಕ್ರಮವನ್ನು ಸ್ವಾಗತಿಸಿದ್ದಾರೆ. ಆದರೆ ಕೆಲ ಸಂಸದರು ಎನ್‍ ಕೌಂಟರ್‍ ಮಾಡುವ ಬದಲು ಇಂತಹ ಪ್ರಕರಣಗಳು ಬೇಗ ವಿಚಾರಣೆ ನಡೆದು, ಶೀಘ್ರ ತೀರ್ಪು ಬರುವಂತಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ತೃಣಮೂಲ ಕಾಂಗ್ರೆಸ್‍ ಸಂಸದ ಸುಗತೋ ರಾಯ್‍, ನಾನು ಎನ್‍ ಕೌಂಟರ್‍ ಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಮೀನಾಕ್ಷಿ ಲೇಖಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

 

%d bloggers like this: