. . .
53 Views

  ಗುಂಡು ಪಾರ್ಟಿ ಮಾಡೋದು ಮನುಷ್ಯರು ಮಾತ್ರಾನಾ..? ಇಲ್ಲ, ನಾವೂ ಮಾಡ್ತೀವಿ ಅಂತಿವೆ ಕಾಡು ಪ್ರಾಣಿಗಳು..! ಹೌದು, ಕಾಡಿನಲ್ಲಿ ಆನೆಗಳ ನೇತೃತ್ವದಲ್ಲಿ ಆಗಾಗ ಗುಂಡಿನ ಸಮಾರಾಧನೆ ನಡೆಯುತ್ತೆ. ಎಲ್ಲ ಪ್ರಾಣಿಗಳೂ ನಶೆ ಏರಿಸಿಕೊಂಡು ತೂರಾಡುತ್ತವೆ. ನಡೆಯೋಕೂ ಆಗದೇ ಗುಂಡಿಯಲ್ಲಿ, ಕೊಚ್ಚೆಯಲ್ಲಿ ಬಿದ್ದುಕೊಳ್ಳುತ್ತವೆ. ಆಶ್ಚರ್ಯ ಎನಿಸಿದರೂ ಇದು ನಿಜ.

   ಫೆಬ್ರವರಿ ಹಾಗೂ ಮಾರ್ಚ್‍ ತಿಂಗಳಲ್ಲಿ ನೀವು ಆಫ್ರಿಕಾದ ಕಾಡುಗಳಿಗೆ ಭೇಟಿ ಕೊಟ್ಟರೆ ಪ್ರಾಣಿಗಳ ಗುಂಡು ಪಾರ್ಟಿಯನ್ನು ಕಣ್ಣಾರೆ ಕಾಣಬಹುದು. ಬೆಳ್ಳಂಬೆಳಗ್ಗೆಯೇ ಪ್ರಾಣಿಗಳು ಮತ್ತೇರಿಸಿಕೊಂಡಿರುತ್ತವೆ. ಮತ್ತೆ ಗುಂಡಿನ ಸಮಾರಾಧನೆಗೆ ಹಾತೊರೆಯುತ್ತಿರುತ್ತವೆ. ಕೋತಿಗಳು, ಕೊಕ್ಕರೆಗಳು, ಗೊರಿಲ್ಲಾಗಳು, ಜಿಂಕೆಗಳು ಹೀಗೆ ಎಲ್ಲವೂ ಕಿಕ್ಕೇರಿಸಿಕೊಂಡು ಓಲಾಡುತ್ತಿರುತ್ತವೆ.

    ಪ್ರಾಣಿಗಳಿಗೆ ಮದ್ಯ ಹೇಗೆ ಸಿಗುತ್ತೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಹೌದು, ಪ್ರಾಣಿಗಳು ಮನುಷ್ಯರು ಕುಡಿಯೋ ಮದ್ಯವನ್ನು ಸೇವಿಸೋದಿಲ್ಲ. ಬದಲಾಗಿ, ಮತ್ತೇರಿಸಿಕೊಳ್ಳಲು ಅವು ಮರುಲಾ ಅನ್ನೋ ಹಣ್ಣನ್ನು ತಿನ್ನುತ್ತವೆ. ಹಳದಿ ಕಲರ್‍ ಇರುವ ಈ ಹಣ್ಣನ್ನು ತಿಂದರೆ, ವಿಸ್ಕಿ ಕುಡಿದಷ್ಟೇ ಮತ್ತೇರುತ್ತೆ. ತಲೆ ಗಿರಗಿರ ತಿರುಗುತ್ತೆ. ಹಣ್ಣುಗಳನ್ನು ತಿಂದ ಮೇಲೆ ಪ್ರಾಣಿಗಳು ತೂರಾಡಿ ತೂರಾಡಿ ಬೀಳುತ್ತವೆ. ಅಜಾನುಭಾಹು ಆನೆಗಳೂ ಕೂಡಾ ತೂರಾಡುತ್ತವೆ ಅಂದ್ರೆ ನೀವೇ ಊಹೆ ಮಾಡಿಕೊಳ್ಳಿ..

ಮರುಲಾ ಹಣ್ಣುಗಳಂದ್ರೆ ಆನೆಗಳಿಗೆ ಪಂಚ ಪ್ರಾಣ.ಹೀಗಾಗೇ ಇವಕ್ಕೆ ಆನೆ ಮರಗಳು ಅಂತಾನೂ ಕರೀತಾರೆ.  ಸಾಮಾನ್ಯವಾಗಿ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಈ ಮರಗಳಲ್ಲಿ ಹಣ್ಣುಗಳಾಗುತ್ತವೆ. ಇವನ್ನು ತಿನ್ನೋದಕ್ಕೆ ಆನೆಗಳು ಕಿಲೋಮೀಟರ್ ಗಟ್ಟಲೇ ಹುಡುಕುತ್ತಾ ಬರುತ್ತವೆ.. ಮರಗಳು ಎತ್ತರವಾಗಿರುವುದರಿಂದ ಆನೆಗಳು ಸೊಂಡಲಿನಿಂದ ಹಣ್ಣುಗಳನ್ನು ಉದುರಿಸುತ್ತವೆ. ಆಗ ಇತರೆ ಪ್ರಾಣಿಗಳು ಆನೆಗಳ ಜೊತೆ ಸೇರಿ ಗುಂಡಿನ ಸಮಾರಾಧನೆ ಮಾಡುತ್ತವೆ.

ಇತ್ತ ಹಣ್ಣು ಬಿಟ್ಟಾಗಈ ಮರಗಳ ಕೆಳಗೆ ಬುಡಕಟ್ಟು ಜನ ಮದುವೆಗಳನ್ನುಏರ್ಪಡಿಸುತ್ತಾರೆ. ಈ ಮರಗಳ ಕೆಳಗೆ  ಮದುವೆ ಮಾಡಿಸಿದರೆ ಹೆಚ್ಚು ಮಕ್ಕಳಾಗುತ್ತವೆ ಅನ್ನೋ ನಂಬಿಕೆ ಅವರಲ್ಲಿದೆ. ಹೀಗಾಗಿ ಈ ಮರಗಳನ್ನು ಮದುವೆ ಮರಗಳೂ ಅಂತಾನೂ ಹೆಸರುವಾಸಿ.

ಮಾವು, ಗೇರು, ಪಿಸ್ತಾ ಜಾತಿಗೆ ಸೇರಿದ ಈ ಮರುಲಾ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದರಿಂದ  ಆರೋಗ್ಯಕ್ಕೆ ಸಾಕಷ್ಟು ಅನುಕೂಲಗಳಿವೆ. ಕಾಡಿನಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಮರುಲಾಗೆ ಈಗ ಬೇಡಿಕೆ ಹೆಚ್ಚಾಗಿದೆ. ಸೌಂದರ್ಯವರ್ಧಕಗಳಿಗೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಇದರ ಎಣ್ಣೆಯನ್ನು ಮುಖದ ಕಾಂತಿಯನ್ನು ಹೆಚ್ಚಿಸಲು ಉಪಯೋಗಿಸುತ್ತಾರೆ. ಇನ್ನೊಂದೆಡೆ ಮರುಲಾ ಹಣ್ಣನಿಂದ ರಸ ತೆಗೆದು ಅದನ್ನು ಮದ್ಯವಾಗಿ ಮಾರಾಟ ಮಾಡಲಾಗುತ್ತಿದೆ. ಈ ಮರುಲಾ ಮದ್ಯವೆಂದರೆ ಭಾರತೀಯರಿಗೆ ಅಚ್ಚುಮೆಚ್ಚು. ಹೀಗಾಗಿ ಮರುಲಾ ಮದ್ಯ ಭಾರತಕ್ಕೆ ಹೆಚ್ಚು ಆಮದಾಗುತ್ತಿದೆಯಂತೆ.  

 ಜನ ಕೂಡಾ ಬೆಳೆಯಲಾರಂಭಿಸಿದ್ದಾರೆ. ಇನ್ನೊಂದೆಡೆ ಮರುಲಾ ಹಣ್ಣಿನಿಂದ ಮದ್ಯ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ನಮ್ಮ ಭಾರತದಲ್ಲೂ   ಮರುಲಾ ಪೇಯಕ್ಕೆ ಭಾರೀ ಬೇಡಿಕೆ ಇದೆ. ಇನ್ನು ಈ ಹಣ್ಣಿನಿಂದ ಕೆಲವು ಸೌಂದರ್ಯ ವರ್ಧಕಗಳನ್ನೂ ತಯಾರಿಸಿ ಮಾರುಕಟ್ಟೆಗೆ ಬಿಡಲಾಗಿದೆ.

 

Leave a Reply

 

%d bloggers like this: