You cannot copy content of this page.
. . .

     ಕಾರ್ಮಿಕನೊಬ್ಬನನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಂಚಹಳ್ಳಿಯಲ್ಲಿ ಸೆರೆ ಹಿಡಿಯಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಒಂದು ವಾರದಿಂದ ಕಾಡಾನೆಯನ್ನು ಸೆರೆಹಿಡಿಯಲು ಸತತ ಕಾರ್ಯಾಚರಣೆ ನಡೆಸುತ್ತಿದ್ದರು.

 ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಬಲರಾಮ,ಗೋಪಾಲಸ್ವಾಮಿ,ಕೃಷ್ಣ, ಗಣೇಶ್ ಎಂಬ ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಸೆರೆಯಾದ ಆನೆಯನ್ನು ದುಬಾರೆ ಆನೆ ಶಿಬಿರಕ್ಕೆ ರವಾನಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 21 ರಂದು ಕುಟ್ಟದಲ್ಲಿ ಹಾಡಹಗಲೇ ಕಾರ್ಮಿಕನೊಬ್ಬನನ್ನು ಆನೆ ಬಲಿ ಪಡೆದಿತ್ತು. ಆದರೆ ಕಾರ್ಮಿಕನನ್ನು ಕೊಂದ ಆನೆ ಹಾಗೂ ಸೆರೆ ಸಿಕ್ಕ ಆನೆ ಒಂದೇನಾ ಎಂಬುದರ ಬಗ್ಗೆ ಅನುಮಾನವಿದೆ.

 

%d bloggers like this: