You cannot copy content of this page.
. . .

 ಹುಣಸೂರು: ಕಾಡಾನೆ ದಾಳಿಯಿಂದ ಹಸುವೊಂದು ಸಾವನ್ನಪ್ಪಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹನಗೋಡು ಬಳಿಯ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.

 ಹೆಬ್ಬಾಳ ಗ್ರಾಮದ ವೆಂಕಟೇಶ್‌ಶೆಟ್ಟಿ ಅವರಿಗೆ ಸೇರಿದ ಹಸು ಕಾಡಾನೆ ದಾಳಿಗೆ ಬಲಿಯಾಗಿದೆ. ಹಸುವನ್ನು ಮನೆ ಮುಂದೆ ಕಟ್ಟಿದ್ದ ಸಂದರ್ಭದಲ್ಲಿ ಕಿಕ್ಕೇರಿ ಕಟ್ಟೆ ಭಾಗದ ಕಲ್ಲುಮುಂಟಿ ಭಾಗದಿಂದ ಬಂದಿದ್ದ ಕಾಡಾನೆ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿದೆ.

 ಸ್ಥಳಕ್ಕೆ  ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಆರ್‌ಎಫ್‌ಒ ಹನುಮಂತರಾಜು ಅವರು ಹಸುವಿನ ಮಾಲೀಕರಾದ ವೆಂಕಟೇಶ್ ಶೆಟ್ಟಿ ಅವರಿಗೆ ಅರಣ್ಯ ಇಲಾಖೆ ವತಿಯಿಂದ ೧೦ ಸಾವಿರ ರೂ. ಚೆಕ್ ವಿತರಿಸಿದರು. ಅರಣ್ಯ ಇಲಾಖೆಯ ಅಧಿಕಾರಿ ಸಿದ್ದರಾಜು, ಅರಣ್ಯ ಸಿಬ್ಬಂದಿ ಹಾಜರಿದ್ದರು. ಕಾಡಾನೆ ದಾಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

Leave a Reply

 

%d bloggers like this: