You cannot copy content of this page.
. . .

ಭಾರತ-ವಿಂಡೀಸ್ ಪಂದ್ಯ; ಮೈದಾನಕ್ಕೆ ನುಗ್ಗಿದ ನಾಯಿ

 ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ನಾಯಿಯೊಂದು ಮೈದಾನದೊಳಗೆ ನುಗ್ಗಿದ ಪರಿಣಾಮ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯಕ್ಕೆ ಕೆಲವು ನಿಮಿಷಗಳ ಕಾಲ ಅಡ್ಡಿಯುಂಟಾಯಿತು.

 ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಬ್ಯಾಟಿಂಗ್ ವೇಳೆ ಕೀಮೊ ಪಾಲ್ ಬೌಲಿಂಗ್ ಮಾಡಲು ಸಿದ್ಧತೆ ನಡೆಸಿದ್ದಾಗ ನಾಯಿ ಮೈದಾನದೊಳಗೆ ಪ್ರವೇಶಿಸಿ ಪಂದ್ಯಕ್ಕೆ ಅಡ್ಡಿಪಡಿಸಿತು. ನಾಯಿ ಮೈದಾನದೊಳಗೆ ನುಗ್ಗುತ್ತಿದ್ದಂತೆ ಮೈದಾನದ ಸಿಬ್ಬಂದಿ ನಾಯಿ ಹಿಡಿಯಲು ಪ್ರಯತ್ನಿಸಿದರು. ಈ ನಡುವೆ ವೆಸ್ಟ್ ಇಂಡೀಸ್ ಆಟಗಾರ ಕೂಡ ನಾಯಿ ಬೆನ್ನತ್ತಿದರು. ಇದರಿಂದ ಕೆಲಕಾಲ ಅಭಿಮಾನಿಗಳಿಗೆ ಕ್ರಿಕೆಟ್ ಹೊರತಾದ ಮನರಂಜನೆ ಸಿಕ್ಕಿತು.

 

%d bloggers like this: