You cannot copy content of this page.
. . .

  ಎರಡು ದಿನದ ಹಿಂದೆ ನೂತನ ಮೈಸೂರು ಪಾಲಿಕೆ ಉಪಮೇಯರ್‍ ಶ್ರೀಧರ್‍ ಅವರಿಗೆ ಮೊಬೈಲ್‍ ಕರೆಯೊಂದು ಬಂದಿತ್ತು.. ಕರೆ ಆಧರಿಸಿ ಶ್ರೀಧರ್‍ ಅವರು ಖಾಸಗಿ ಹೋಟೆಲ್‍ ಗೆ ಹೋದಾಗ ಅಚ್ಚರಿ ಕಾದಿತ್ತು. ಅವರು ಅಲ್ಲಿಗೆ ಹೋಗುತ್ತಿದ್ದಂತೆ ಕೆಲವರು ಅವರನ್ನು ಕೇಕ್‍ ಮುಂದೆ ತಂದು ನಿಲ್ಲಿಸಲು ಏನಾಗುತ್ತಿದೆ ಅಂತ ಸುತ್ತಲೂ ನೋಡುವಷ್ಟರಲ್ಲಿ ಅಲ್ಲಿ ಚಾಲೆಂಜಿಂಗ್‍ ಸ್ಟಾರ್‍ ದರ್ಶನ್‍ ಪ್ರತ್ಯಕ್ಷರಾಗಿದ್ದರು. ಶ್ರೀಧರ್‍ ಉಪಮೇಯರ್‍ ಆದ ಖುಷಿಗಾಗಿ ದರ್ಶನ್‍ ಅವರೇ ಸ್ವತಃ ಸರ್ಪ್ರೈಜ್ ದರ್ಶನ ಕೊಟ್ಟಿದ್ದರು.

    ನಟ ದರ್ಶನ್‌ ಮತ್ತು ಶ್ರೀಧರ್‌ ಇಬ್ಬರೂ ಬಾಲ್ಯದ ಸ್ನೇಹಿತರು. ಒಟ್ಟಿಗೆ ತಿರುಗಾಡಿದವರು. ಮನೆಯವರ ಕಣ್ತಪ್ಪಿಸಿ ಥಿಯೇಟರ್‌ನಲ್ಲಿ ಸಿನಿಮಾ ನೋಡಿದವರು. ಇದೀಗ ದರ್ಶನ್‍ ದೊಡ್ಡ ಸ್ಟಾರ್‍ ಆಗಿದ್ದಾರೆ. ಆದರೂ ಬಾಲ್ಯದ ಸ್ನೇಹಿತನನ್ನು ಮರೆತಿಲ್ಲ. ಶ್ರೀಧರ್‍ ಉಪಮೇಯರ್‍ ಆಗಿರುವುದನ್ನು ತಿಳಿದು, ಅವರನ್ನು ಹೋಟೆಲ್‍ ಗೆ ಕರೆದು ಕೇಕ್‍ ಕತ್ತರಿಸಿ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಅದ್ಧೂರಿ ಔತಣಕೂಟವನ್ನೂ ಏರ್ಪಡಿಸಿದ್ದಾರೆ.

 

%d bloggers like this: