You cannot copy content of this page.
. . .

  ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಂವಿಧಾನಕ್ಕೆ ನಮಸ್ಕರಿಸಿದ್ದ ಪ್ರಧಾನಿಯವರು ಈಗ ಅದೇ ಸಂವಿಧಾನಕ್ಕೆ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಹಿತಿ ದೇವನೂರ ಮಹಾದೇವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಪ್ರಗತಿಪರ ಜನಾಂದೋಲನಾ ಸಮಿತಿಯಿಂದ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ಕಾಲಿಗೆ ನಮಸ್ಕರಿಸಿದ್ದ ಗೋಡ್ಸೆ, ನಂತರ ಅವರ ಎದೆಗೇ ಗುಂಡು ಹಾರಿಸಿದ್ದ. ಅದೇ ರೀತಿ ಪ್ರಧಾನಿಯೂ ಅತ್ತ ನಮಸ್ಕರಿಸಿ ಇತ್ತ ಗುಂಡು ಹಾರಿಸುತ್ತಿದ್ದಾರೆ ಎಂದು ಹೇಳಿದರು.

  ಸ್ವಾತಂತ್ರ್ಯನಂತರದ ಭಾರತದಲ್ಲಿ ಕಟ್ಟಿದ್ದ ಸಂಸ್ಥೆಗಳನ್ನು ಈಗ ಕೆಡವಿ ಹಾಕಲಾಗುತ್ತಿದೆ. ದೇಶದಲ್ಲಿದ್ದ ಸಾಮರಸ್ಯಕ್ಕೆ ಧಕ್ಕೆ ತರಲಾಗಿದೆ. ಕಟ್ಟುವ ಬದಲಿಗೆ ವಿಭಜನೆಯ ಸಿದ್ಧಾಂತಕ್ಕೆ ಆದ್ಯತೆ ಸಿಗುತ್ತಿದೆ ಎಂದು ದೇವನೂರ ಮಹಾದೇವ ಟೀಕಿಸಿದರು.

 

%d bloggers like this: