You cannot copy content of this page.
. . .

ನಿರ್ಭಯಾ ಪ್ರಕರಣ; ಇಬ್ಬರು ಅಪರಾಧಿಗಳ ‘ಪರಿಹಾರಾತ್ಮಕ ಅರ್ಜಿ’ ವಜಾಗೊಳಿಸಿದ ಸುಪ್ರೀಂ ಕೋರ್ಟ್

 ನಿರ್ಭಯಾ ಸಾಮೂಹಿಕ ಅತ್ಯಾಚಾರ, ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಲ್ಲಿ ಇಬ್ಬರು ಅಪರಾಧಿಗಳು (ಮುಖೇಶ್‍, ವಿನಯ್‍) ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿ (ಕ್ಯುರೇಟಿವ್‍ ಅರ್ಜಿ)ಯನ್ನು ಸುಪ್ರೀಂ ಕೋರ್ಟ್‍ ವಜಾಗೊಳಿಸಿದೆ. ಇದರಿಂದ ನಾಲ್ವರು ಅಪರಾಧಿಗಳಿಗೆ ಜ.22ರ ಬೆಳಿಗ್ಗೆ ಗಲ್ಲು ಕಾಯಂ ಆಗಿದೆ.

 ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ದೆಹಲಿ ಕೋರ್ಟ್‍ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 14 ದಿನಗಳಲ್ಲಿ ಕಾನೂನು ಪರಿಹಾರ ಕಂಡುಕೊಳ್ಳಬಹುದು ಎಂದು ಕೋರ್ಟ್‍ ತಿಳಿಸಿತ್ತು. ಈ ನಡುವೆ ಅಪರಾಧಿಗಳ ಪರ ವಕಾಲತ್ತು ವಹಿಸಿದ್ದ ವಕೀಲರು, ಸುಪ್ರೀಂ ಕೋರ್ಟ್‍ಗೆ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದ್ದರು. ಅದನ್ನು ಸುಪ್ರೀಂ ಕೋರ್ಟ್‍ ವಜಾಮಾಡಿದೆ. ಜ.22ರಂದು ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದು.

  

Leave a Reply

 

%d bloggers like this: