You cannot copy content of this page.
. . .

 ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಪೈಕಿ ಒಬ್ಬರಾದ ಮುಖೇಶ್‍ ಸಿಂಗ್‍ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಹಾರ್ ಜೈಲ್‍ನ ಮೂಲಗಳು ತಿಳಿಸಿವೆ.

 ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ದೆಹಲಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 14 ದಿನಗಳಲ್ಲಿ ಕಾನೂನು ಪರಿಹಾರ ಕಂಡುಕೊಳ್ಳಬಹುದು ಎಂದು ಕೋರ್ಟ್‍ ತಿಳಿಸಿತ್ತು. ನಾಲ್ವರು ಅಪರಾಧಿಗಳಲ್ಲಿ ಇಬ್ಬರು ಅಪರಾಧಿಗಳು (ಮುಖೇಶ್‍, ವಿನಯ್‍) ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿ (ಕ್ಯುರೇಟಿವ್‍ ಅರ್ಜಿ)ಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದ ನಾಲ್ವರು ಅಪರಾಧಿಗಳಿಗೆ ಜ.22ರ ಬೆಳಿಗ್ಗೆ ಗಲ್ಲು ಕಾಯಂ ಆಗಿದೆ. ಈಗ ಮತ್ತೆ ಅಪರಾಧಿ ಒಬ್ಬರು ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದಾರೆ.

Leave a Reply

 

%d bloggers like this: