You cannot copy content of this page.
. . .

ದೀಪಿಕಾ ನನ್ನಂಥವರ ಸಲಹೆ ಪಡೆಯಬೇಕು: ಬಾಬಾ ರಾಮ್‍ ದೇವ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ನನ್ನಂಥವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬೇಕು. ಆಗ ದೀಪಿಕಾ ಪ್ರಮುಖ ವಿಷಯಗಳ ಬಗ್ಗೆ ‘ಒಳನೋಟ’ದಿಂದ ಕೂಡಿದ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಯೋಗಗುರು ಬಾಬಾ ರಾಮ್‍ ದೇವ್ ಹೇಳಿದ್ದಾರೆ.

  ದೀಪಿಕಾ ಪಡುಕೋಣೆ ಇತ್ತೀಚೆಗೆ ಜೆಎನ್‌ಯು ಹಿಂಸಾಚಾರ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಭೇಟಿ ಮಾಡಿದ್ದರು. ಈ ಬಗ್ಗೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಮಾತನಾಡಿದ ಬಾಬಾ ರಾಮ್‍ ದೇವ್‍, ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ದೇಶದ ಸಾಮಾಜಿಕ, ರಾಜಕೀಯ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

  ದೀಪಿಕಾ ಪಡುಕೋಣೆ ದಕ್ಷ ನಟಿ ಎಂಬುದು ಬೇರೆ ಮಾತು. ಆದಾಗ್ಯೂ, ನಮ್ಮ ದೇಶದ ಬಗ್ಗೆ ಹೆಚ್ಚು ತಿಳಿಯುವ ನಿಟ್ಟಿನಲ್ಲಿ ಅವರು ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು. ಅದಾದ ನಂತರವಷ್ಟೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದೂ ರಾಮ್‍ ದೇವ್‍ ಸಲಹೆ ನೀಡಿದ್ದಾರೆ.

Leave a Reply

 

%d bloggers like this: