You cannot copy content of this page.
. . .

ದೀಪಿಕಾಗೆ ಮೈಸೂರ್ ಪಾಕ್ ಬೇಕಂತೆ; ಗಂಡನಿಗೆ ತರದೆ ಮನೆಗೆ ಬರಬೇಡ ಅಂದಳಾ..?

   ಶ್ರೀ ಕೃಷ್ಣದಿಂದ ಒಂದು ಕೆಜಿ ಮೈಸೂರು ಪಾಕ್‌ ಮತ್ತು ಹಾಟ್‍ ಚಿಪ್ಸ್‍ ಇಂದ ಒಂದೂವರೆ ಕೆಜಿ ರುಚಿಯಾದ ಪೊಟ್ಯಾಟೋ ಚಿಪ್ಸ್‌ ತರದೇ ಮನೆಗೆ ಬರಬೇಡ ಹೀಗಂತ ನಟಿ ದೀಪಿಕಾ ಪಡುಕೋಣೆ ತನ್ನ ಗಂಡನಿಗೆ ತಾಕೀತು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಗಂಡ ರಣವೀರ್‍ ಸಿಂಗ್‍ ಪೋಸ್ಟ್‍ ಗೆ ಕಮೆಂಟ್‍ ಮಾಡಿರುವ ದೀಪಿಕಾ, ನನ್ನಿಷ್ಟದ ಮೈಸೂರ್‍ ಪಾಕ್‍ ಹಾಗೂ ಚಿಪ್ಸ್‍ ತರಲೇ ಬೇಕು ಎಂದು ಹೇಳಿದ್ದಾರೆ. ಇದು ಜಾಲತಾಣಿಗರ ಗಮನ ಸೆಳೆದಿದೆ. ಇದಕ್ಕೆ ಹಲವಾರು ಜನ ಕಮೆಂಟ್‍ ಮಾಡಿದ್ದಾರೆ.

     ಪ್ರಸ್ತುತ ’83’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ರಣವೀರ್‍ ಸಿಂಗ್‍ ತೊಡಗಿಕೊಂಡಿದ್ದಾರೆ. ಇದಕ್ಕಾಗಿ ಶನಿವಾರ ಅವರು ಮುಂಬೈನಿಂದ ಚೆನ್ನೈಗೆ ಹೊರಟ್ಟಿದ್ದರು. ಆ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ದೀಪಿಕಾ ಕಮೆಂಟ್‍ ಮಾಡಿದ್ದಾರೆ. ಅದರಲ್ಲಿ ಸಿನಿಮಾ ಸಲುವಾಗಿ ಪ್ರಯಾಣ ಮಾಡುತ್ತಿರುವ ಪತಿಗೆ ದೀಪಿಕಾ ಶುಭಕೋರಿಲ್ಲ. ಬದಲಾಗಿ, ತಮ್ಮ ಇಷ್ಟದ ಮೈಸೂರ್‍ ಪಾಕ್‍ ತರುವಂತೆ ತಾಕೀತು ಮಾಡಿದ್ದಾರೆ.

 

%d bloggers like this: