You cannot copy content of this page.
. . .

  ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿರುವುದು ಎಷ್ಟು ಸತ್ಯವೋ, ಟಿಪ್ಪು ಮತ್ತು ಆತನ ಸೈನಿಕರು ಮಲಬಾರಿಗಳ ಮೇಲೆ ಅತ್ಯಾಚಾರ ಮಾಡಿರುವುದು ಕೂಡಾ ಅಷ್ಟೇ ಸತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಬಹುರೂಪಿ ನಾಟಕೋತ್ಸವ ಉದ್ಘಾಟನೆಗೆ ಅವರು ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಎರಡೂ ಸತ್ಯಗಳನ್ನು ನಾವು ಒಪ್ಪಿಕೊಳ್ಳಲೇಬೇಕಿದೆ. ಒಂದನ್ನು ಹೇಳಿ ಮತ್ತೊಂದನ್ನು ಮರೆಮಾಚುವುದು ಸರಿಯಲ್ಲ ಎಂದರು.

  ಟಿಪ್ಪು ಒಬ್ಬ ಮತಾಂಧ, ಕೊಡವರ ಮೇಲೆ ಆತ ದೌರ್ಜನ್ಯ ಮಾಡಿದ್ದಾನೆ. ಮಂಗಳೂರಿನಲ್ಲಿ ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯ ಮಾಡಿ ನೆತ್ತರು ಹರಿಸಿದ್ದ ಎಂದು ಸಿ.ಟಿ.ರವಿ ಇದೇ ಸಂದರ್ಭದಲ್ಲಿ ಹೇಳಿದರು.

  ಇನ್ನು ಪುಲ್ವಾಮಾ ದಾಳಿ ವಿಚಾರವಾಗಿ ರಾಹುಲ್‍ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,   ಹೆತ್ತ ತಾಯಿಯನ್ನೂ ನಂಬದ ಸ್ಥಿತಿಗೆ ಅವರು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಟೆರರಿಸ್ಟ್ ಗಳನ್ನು ಮಟ್ಟ ಹಾಕಿದರೆ ಅದನ್ನು ನಂಬುವುದಿಲ್ಲ, ಸರ್ಜಿಕಲ್‍ ಸ್ಟ್ರೈಕ್‍ ನಡೆದರೆ ಸೈನಿಕರನ್ನು ನಂಬುವುದಿಲ್ಲ, ಎಲೆಕ್ಷನ್‍ ನಡೆದರೆ ಇವಿಎಂ ನಂಬುವುದಿಲ್ಲ ಎಂದು ಸಿ.ಟಿ.ರವಿ ಕಾಂಗ್ರೆಸ್‍ ವಿರುದ್ಧ ಕಿಡಿಕಾರಿದರು.

Leave a Reply

 

%d bloggers like this: