You cannot copy content of this page.
. . .

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ ೪ ವರ್ಷ ಜೈಲು

 ಮೈಸೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮೈಸೂರಿನ ಪೋಕ್ಸೊ ವಿಶೇಷ ನ್ಯಾಯಾಲಯವು ೪ ವರ್ಷ ಜೈಲು ಶಿಕ್ಷೆ ಮತ್ತು ೨೫ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

 ಮೂಲತಃ ವಾರಣಾಸಿ ವಾಸಿಯಾದ ಬೆಂಗಳೂರು ನಗರದ ನಿವಾಸಿ ಎಂ.ಮೋಹನ್ (೨೩) ಶಿಕ್ಷೆಗೆ ಗುರಿಯಾದ ವ್ಯಕ್ತಿ.

 ಈತ ಮೈಸೂರಿನ ಬಾಲಕಿಯನ್ನು ಫೇಸ್‌ಬುಕ್ ಮುಖಾಂತರ ಪರಿಚಯ ಮಾಡಿಕೊಂಡು ಪ್ರೀತಿಸುವಂತೆ ಒತ್ತಾಯ ಮಾಡಿ ಒಪ್ಪಿಸಿ, ಮಾಲ್ ಒಂದರಲ್ಲಿ ಆಕೆಯನ್ನು ಭೇಟಿ ಮಾಡುತ್ತಾನೆ. ನಂತರ ಬಾಲಕಿಯ ಮನೆಗೆ ಆಕೆಯ ಪೋಷಕರು ಇಲ್ಲದ ಸಮಯದಲ್ಲಿ ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೇ, ಆಕೆ ಮೊಬೈಲ್ ಒಂದನ್ನು ಕೊಟ್ಟು, ತನ್ನ ಮೊಬೈಲ್‌ಗೆ ಬಾಲಕಿಯ ಅಶ್ಲೀಲ ಚಿತ್ರಗಳನ್ನು ಕಳುಹಿಸುವಂತೆ ಪುಸಲಾಯಿಸಿ ಸಂದೇಶ ಕಳುಹಿಸಿದ್ದಾನೆ. ಆಕೆ ಕಳುಹಿಸಿದ ಅಶ್ಲೀಲ ಚಿತ್ರಗಳನ್ನು ಇಟ್ಟುಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

 ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪೋಕ್ಸೊ ವಿಶೇಷ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು ಆರೋಪಿಗೆ ೪ ವರ್ಷ ಜೈಲು ಶಿಕ್ಷೆ ಮತ್ತು ೨೫ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಸಿ.ಶಿವರುದ್ರಸ್ವಾಮಿ ವಾದ ಮಂಡಿಸಿದ್ದಾರೆ.

 

%d bloggers like this: