You cannot copy content of this page.
. . .

 ಮೈಸೂರು: ಗಂಡ ಹೆಂಡಿರ ಜಗಳ ಪತ್ನಿಯ ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

 ನಗರದ ಇಲವಾಲದ ಮಾದಹಳ್ಳಿಯಲ್ಲಿ ಘಟನೆ ನಡೆದಿದ್ದು, ಸುನಿತಾ (೩೮) ಸಾವನ್ನಪ್ಪಿದ ದುರ್ದೈವಿ. ಘಟನೆ ಬಳಿಕ ಆಕೆಯ ಪತಿ ಶ್ರೀನಿವಾಸ್‍ ನಾಪತ್ತೆಯಾಗಿದ್ದಾರೆ. 17 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಈ ದಂಪತಿ, ಸ್ವಂತ ಜಮೀನಿನಲ್ಲಿ ಮನೆ ಮಾಡಿಕೊಂಡಿದ್ದ ಜೀವನ ನಡೆಸುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರತಿದಿನದಂತೆ ನಿನ್ನೆಯೂ (ಶುಕ್ರವಾರ) ಇಬ್ಬರ ನಡುವೆ ಜಗಳವಾಗಿದೆ.

 ಆಟವಾಡುತ್ತಿದ್ದ ಮಕ್ಕಳು ಮನೆಗೆ ವಾಪಸ್ ಬಂದಾಗ ಬಾಗಿಲಿನಲ್ಲೇ ಮಾತನಾಡಿಸಿ ಸುನಿತಾ ಕಳುಹಿಸಿದ್ದರು. ಪತಿ ಶ್ರೀನಿವಾಸ್ ಜೊತೆ ಮನೆಯಲ್ಲೇ ಇದ್ದರು. ಸ್ವಲ್ಪ ಹೊತ್ತಿನಲ್ಲಿ ಸುನಿತಾ ಸಾವನ್ನಪ್ಪಿದ್ದಾರೆ. ಗಂಡನೇ ಕೊಲೆ ಮಾಡಿದ್ದಾನೆಂದು‌ ಸುನಿತಾ ಮನೆಯವರು ದೂರು ನೀಡಿದ್ದಾರೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

%d bloggers like this: