You cannot copy content of this page.
. . .

 ಮದ್ಯಸೇವನೆಗೆ ಹಣ ನೀಡದ್ದಕ್ಕೆ ಕೋಪಗೊಂಡು ತಂದೆಯನ್ನೇ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

 ಸೋಮವಾರಪೇಟೆಯ ಗೋಣಿಮರೂರಿನಲ್ಲಿ ಈ ಘಟನೆ ನಡೆದಿದೆ. ಜೇನುಕುರುಬರ ಕರಿಯಪ್ಪ (46) ಹತ್ಯೆಯಾದ ದುರ್ದೈವಿ. ಮಗ ಲೋಕೇಶ್ ಎಂಬಾತನಿಂದ ಕುಕೃತ್ಯ ಆಗಿದೆ. ಲೋಕೇಶ್‍ ಮದ್ಯ ಸೇವನೆಗೆ ತಂದೆ ಬಳಿ ಹಣ ಕೇಳಿದ್ದಾನೆ. ತಂದೆ ಹಣ ನೀಡದ್ದಕ್ಕೆ ಕೋಪಗೊಂಡು ಕೊಲೆ ಮಾಡಿದ್ದಾನೆ. ತಾಯಿ ಲೀಲಾ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

%d bloggers like this: