You cannot copy content of this page.
. . .

 ಚಾಮರಾಜನಗರ: ಜಮೀನಿನಲ್ಲಿ ಕಳಚಿ ಬಿದ್ದಿದ್ದ ವಿದ್ಯುತ್ ಸಂಚಾರವುಳ್ಳ ತಂತಿಯನ್ನು ತುಳಿದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.

 ಗ್ರಾಮದ ಪುಟ್ಟಬುದ್ಧಿ ಅವರ ಪುತ್ರ ಮಹೇಂದ್ರ ಅ.ಮದನ್ (೨೧) ಮೃತಪಟ್ಟಿದ್ದು, ನಾಗಮಂಗಲದ ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ರಜೆ ಇದ್ದುದರಿಂದ ಊರಿಗೆ ಬಂದಿದ್ದರು.
ಮಧ್ಯಾಹ್ನ ಜಮೀನಿನಿಂದ ತೋಟದಲ್ಲಿರುವ ತಮ್ಮ ಮನೆಗೆ ಊಟ ಮಾಡಲು ಹೋಗುತ್ತಿದ್ದಾಗ ಮಾರ್ಗ ಮಧ್ಯದ ಜಮೀನಿನಲ್ಲಿ ಅಗೋಚರವಾಗಿ ಕಳಚಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

 ತಡವಾದರೂ ಊಟಕ್ಕೆ ಬಾರದಿರುವ ಬಗ್ಗೆ ಅನುಮಾನಗೊಂಡು ಮನೆಯವರು ಬಂದು ನೋಡಿದಾಗ ವಿಷಯ ಗೊತ್ತಾಗಿದೆ. ಘಟನೆಗೆ ಸೆಸ್ಕ್ ಅಧಿಕಾರಿಗಳ ಬೇಜವಾಬ್ದಾರಿ ಕಾರಣವಾಗಿದ್ದು, ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಸ್ಥಳಕ್ಕೆ ಆಗಮಿಸುವವರೆಗೂ ಶವಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು, ಕುಟುಂಬವರ್ಗದವರು ದೂರಿದ್ದಾರೆ. ನಗರ ಪೂರ್ವ ಠಾಣೆ ಇನ್‍ಸ್ಪೆಕ್ಟರ್, ಸೆಸ್ಕ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

 

%d bloggers like this: