You cannot copy content of this page.
. . .

ವ್ಯಕ್ತಿ ಗಮನ ಬೇರೆಡೆ ಸೆಳೆದು ನಗದು ದೋಚಿದ ಕಳ್ಳರು

 ಮೈಸೂರು: ‘ನಿಮ್ಮ ಹಣ ಬಿದ್ದಿದೆ’ ಎಂದು ಹೇಳಿ ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ನಾಲ್ವರು ಕಳ್ಳರು ವ್ಯಕ್ತಿ ಬಳಿ ೫೦ ಸಾವಿರ ರೂ. ಇದ್ದ ಬ್ಯಾಗ್‌ನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

 ನಗರದ ಚಂದ್ರು ಹಣ ಕಳೆದುಕೊಂಡವರು. ಅವರು ಸೋಮವಾರ ಸಂಜೆ ಸರಸ್ವತಿಪುರಂನ ಎಸ್‌ಬಿಐ ಬ್ಯಾಂಕ್‌ನಲ್ಲಿ ೫೦ ಸಾವಿರ ರೂ. ಹಣವನ್ನು ಡ್ರಾ ಮಾಡಿಕೊಂಡು ತಮ್ಮ ಬಳಿ ಇದ್ದ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದಾರೆ. ನಂತರ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ಇಬ್ಬರು ವ್ಯಕ್ತಿಗಳು ನಿಮ್ಮ ಶರ್ಟ್ ಹಿಂದೆ ಗಲೀಜಾಗಿದೆ ಎಂದು ಹೇಳಿದ್ದಾರೆ. ಅವರ ಮಾತನ್ನು ನಂಬಿದ ಚಂದ್ರು, ಬೈಕ್‌ನಿಂದ ಕೆಳಗಿಳಿದು ಹಣವಿದ್ದ ಬ್ಯಾಗ್‌ನ್ನು ಬೈಕ್ ಮೇಲೆ ಇಟ್ಟು ಶರ್ಟ್ ಬಿಚ್ಚಿ ಒರೆಸಿಕೊಳ್ಳುತ್ತಿದ್ದ ವೇಳೆ ಮತ್ತಿಬ್ಬರು ಬಂದು ರಸ್ತೆಯಲ್ಲಿ ನಿಮ್ಮ ಹಣ ಬಿದ್ದಿದೆ ಎಂದು ಹೇಳಿದರು.

 ಸ್ವಲ್ಪ ದೂರದಲ್ಲಿ ಬಿದ್ದಿದ್ದ ಹಣವನ್ನು ಎತ್ತಿಕೊಂಡು ವಾಪಸ್ ಬಂದು ನೋಡಿದಾಗ ಬೈಕ್ ಮೇಲೆ ಇಟ್ಟಿದ್ದ ಹಣ ಮತ್ತು ದಾಖಲಾತಿಗಳಿದ್ದ ಬ್ಯಾಗ್‌ನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದರು. ಈ ಸಂಬಂಧ ವಿವಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

%d bloggers like this: