You cannot copy content of this page.
. . .

 ಮೈಸೂರು: ಕಾಲೇಜೊಂದರ ಹಿಂಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ಅಲ್ಲಿದ್ದ ೧.೫೦ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ತಾಲ್ಲೂಕಿನ ಚಿಕ್ಕಳ್ಳಿ ಗ್ರಾಮದ ಬಳಿಯ ಮೈಸೆಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಳ್ಳತನವಾಗಿದೆ.

 ಸೆಕ್ಯುರಿಟಿಯವರು ರಾತ್ರಿ ವೇಳೆ ಕಾಲೇಜಿನ ಎಲ್ಲಾ ವಿಭಾಗಗಳಿಗೆ ಬೀಗ ಹಾಕಿ ಕಾವಲಿದ್ದರು. ಬೆಳಗ್ಗಿನ ಜಾವ ಅವರಿಗೆ ತಿಳಿಯದಂತೆ ಕಳ್ಳತನವಾಗಿದೆ. ಕಳ್ಳರು ಕಾಲೇಜಿನ ಸಿಸಿಟಿವಿ ಜಖಂಗೊಳಿಸಿದ್ದಾರೆ. ಕಾಲೇಜಿನಲ್ಲಿದ್ದ ಬೆಲೆ ಬಾಳುವ ವಸ್ತು, ಗೋಲಕದ ಹಣವನ್ನು ಕಳವು ಮಾಡಿದ್ದಾರೆ. ಇದರ ಜೊತೆಗೆ ಅಲ್ಲಿದ್ದ ೪೫,೫೬೪ ರೂ. ಮೌಲ್ಯದ ದ್ವಿಚಕ್ರ ವಾಹನವನ್ನೂ ಕದ್ದೊಯ್ದಿದ್ದಾರೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

%d bloggers like this: