You cannot copy content of this page.
. . .

 ಮಡಿಕೇರಿ: ಅಪ್ರಾಪ್ತ ಬಾಲಕಿಗೆ ಹೆರಿಗೆ ಮಾಡಿಸಿ ಹಣಕ್ಕಾಗಿ ವೈದ್ಯ ದಂಪತಿ ಮಗುವನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಷಯ ತಿಳಿದು ಪೊಲೀಸ್‍ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ವೈದ್ಯ ದಂಪತಿ ಎಸ್ಕೇಪ್‍ ಆಗಿದ್ದಾರೆ ಎನ್ನಲಾಗಿದೆ.

 ಮಡಿಕೇರಿಯ ಹೊಸ ಬಡಾವಣೆಯ ನಿವಾಸಿಗಳಾದ ಡಾ.ರಾಜೇಶ್ವರಿ ಹಾಗೂ ಡಾ.ನವೀನ್‍ ಆರೋಪಿಗಳು. ಈ ದಂಪತಿ ಹಲವು ವರ್ಷಗಳಿಂದ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಅಪ್ರಾಪ್ತೆಯೊಬ್ಬಳು ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬಂದಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡ ರಾಜೇಶ್ವರಿ ತನ್ನ ಪತಿಯೊಂದಿಗೆ ಸೇರಿಕೊಂಡು ಅಪ್ರಾಪ್ತೆಯನ್ನು ಮಡಿಕೇರಿ ನಗರದ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸಿದ್ದಾರೆ. ನಂತರ ಮಗುವನ್ನು ಅದೇ ಆಸ್ಪತ್ರೆಯಲ್ಲಿ ಗ್ರೂಪ್ ಡಿ. ದರ್ಜೆಯ ನೌಕರರಾಗಿರುವ ಸೆನೆನಾಳ ಮಗನಾದ ರಾಬಿನ್‍ಗೆ 1.50 ಲಕ್ಷ ರೂ.ಗೆ ಮಾರಿದ್ದಾರೆ ಎಂದು ದೂರಲಾಗಿದೆ.

 ಅಲ್ಲದೆ, ರಾಬೀನ್ ಹಾಗೂ ಸರಳಾ ಮೇರಿ ದಂಪತಿಗೆ ಮಗು ಜನಿಸಿದೆ ಎನ್ನುವಂತೆ ನಗರಸಭೆಯಲ್ಲಿ ನಕಲಿ ಜನನ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದಾರೆ. ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಈ ಸಂಬಂಧ ಮಡಿಕೇರಿಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾನೂನು ಬಾಹಿರವಾಗಿ ಮಗುವನ್ನು ಮಾರಾಟ ಮಾಡಿದ್ದ ವೈದ್ಯರು ಹಾಗೂ ಮಗುವನ್ನು ಪಡೆದಿದ್ದ ದಂಪತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

 ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಸೆನೆನಾ ಮನೆಗೆ ತೆರಳಿ ಪರಿಶೀಲಿಸಿದಾಗ 4 ತಿಂಗಳ ಗಂಡು ಮಗು ಪತ್ತೆಯಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ವೈದ್ಯ ದಂಪತಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

 

%d bloggers like this: