You cannot copy content of this page.
. . .

 ಕೊಳ್ಳೇಗಾಲ: ಹಳೆಯ ದ್ವೇಷ ಇಟ್ಟುಕೊಂಡು ಗಾಂಜಾ ಮತ್ತಿನಲ್ಲಿ ತನ್ನ ಅಣ್ಣನಿಗೆ ಚಾಕು ಇರಿದು ಕೊಲೆಗೈದ ಘಟನೆ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಜರುಗಿದೆ.

 ಮಧುವನಹಳ್ಳಿ ಗ್ರಾಮದ ಹೊಂಗಶೆಟ್ಟಿ ಬೀದಿಯ ಗುರುಸ್ವಾಮಿ ಎಂಬವರ ಪುತ್ರ ಸಿದ್ದಪ್ಪಸ್ವಾಮಿ ಸಾವನ್ನಪ್ಪಿದ್ದ ವ್ಯಕ್ತಿ. ಮೃತನ ಚಿಕ್ಕಪ್ಪನ ಮಗನಾದ ಬಿಸಲರಾಜು ಎಂಬಾತನು ಚಾಕು ಇರಿದ ಆರೋಪಿ.

 ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ನವೀನ್ ಕುಮಾರ್, ಪಿಎಸ್ಐ ಅಶೋಕ್ ಆಗಮಿಸಿ ವಿಚಾರಣೆ ನಡೆಸಿ ಪರಾರಿಯಾದ ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಮೃತ್ತನ ಪತ್ನಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

 

%d bloggers like this: