You cannot copy content of this page.
. . .

ಹೈದರಾಬಾದ್‍ ಎನ್‍ ಕೌಂಟರ್; ಸೋಮವಾರದವರೆಗೆ ಶವಸಂಸ್ಕಾರಕ್ಕೆ ತಡೆ

   ಶುಕ್ರವಾರ ಎನ್‍ ಕೌಂಟರ್‍ ಗೆ ಬಲಿಯಾಗಿದ್ದ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳ ಶವಸಂಸ್ಕಾರಕ್ಕೆ ತೆಲಂಗಾಣ ಹೈಕೋರ್ಟ್ ತಡೆ ನೀಡಿದೆ. ಡಿಸೆಂಬರ್ 9ರವರೆಗೆ ಶವಗಳನ್ನು ಸುರಕ್ಷಿತವಾಗಿಡುವಂತೆ ಪೊಲೀಸರಿಗೆ ಆದೇಶ ನೀಡಿದೆ.

    ಶುಕ್ರವಾರ ಮುಂಜಾನೆ ಘಟನೆ ನಡೆದ ಚಟ್ಟಾಪಲ್ಲಿ ಪ್ರದೇಶಕ್ಕೆ ಸ್ಥಳ ಮಹಜರು ನಡೆಸಲು ನಾಲ್ವರು ಆರೋಪಿಗಳನ್ನು ಕರೆದೊಯ್ದಿದ್ದ ಎನ್‍ ಕೌಂಟರ್‍ ನಡೆದಿತ್ತು. ಈ ಎನ್ ಕೌಂಟರ್ ಸಂಬಂಧ ದಾಖಲಾದ ಅರ್ಜಿಯ ತುರ್ತು ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್  ದ್ವಿಸದಸ್ಯ ಪೀಠ, ಶವಗಳ ಮರಣೋತ್ತರ ಪರೀಕ್ಷೆಯ ವೀಡಿಯೋ ಮಾಡಿ ಅದನ್ನು ಶನಿವಾರ ಸಂಜೆಯೊಳಗೆ ರಿಜಿಸ್ಟ್ರಾರ್ ಗೆ ಸಲ್ಲಿಸಬೇಕೆಂದು ಸೂಚಿಸಿದೆ. ಈ ಸಂಬಂಧ ಸೋಮವಾರ ಬೆಳಗ್ಗೆ 10.30ಕ್ಕೆ ಹೈಕೋರ್ಟ್ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.

 

%d bloggers like this: