You cannot copy content of this page.
. . .

ವಿದ್ಯುತ್ ಕಳ್ಳತನ; ಅಪರಾಧಕ್ಕೆ 2 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

 ವಿದ್ಯುತ್‍ ಲೈನ್‍ನಿಂದ ಅನಧಿಕೃತವಾಗಿ ವೈರ್ ನ್ನು ಎಳೆದುಕೊಂಡು ತಮ್ಮ ಜಮೀನಿನ ಪಂಪ್‍ಸೆಟ್‍ಗೆ ಸಂಪರ್ಕ ಕಲ್ಪಿಸಿಕೊಂಡು ವಿದ್ಯುತ್‍ ಕಳ್ಳತನ ಮಾಡುತ್ತಿದ್ದ ವ್ಯಕ್ತಿಗೆ ಹುಣಸೂರಿನ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ಲಕ್ಷ ರೂ. ದಂಡ ವಿಧಿಸಿದೆ.

 ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಎಂ.ಕನ್ನೇನಹಳ್ಳಿ ನಿವಾಸಿಗಳಾದ ಚಿಕ್ಕಮಾದಯ್ಯ ಮತ್ತು ಅವರ ಮಗ ಬಸವರಾಜು (ಇಬ್ಬರಿಗೂ) ಅವರಿಗೆ ದಂಡ ವಿಧಿಸಲಾಗಿದೆ. ಇವರು ತಮ್ಮ ಜಮೀನಿನಲ್ಲಿ ಅನಧಿಕೃತವಾಗಿ ಇಟ್ಟಿಗೆ ತಯಾರಿಸುವ ಘಟಕ ಸ್ಥಾಪಿಸಿಕೊಂಡಿದ್ದರು. ಅದಕ್ಕೆ ಬೇಕಾದ ನೀರಿಗಾಗಿ ಬೋರ್‍ವೆಲ್‍ನಿಂದ ನೀರು ತೆಗೆಯಲು ಹತ್ತಿರದಲ್ಲಿ ಹಾದು ಹೋಗಿದ್ದ ವಿದ್ಯುತ್‍ ಲೈನ್‍ನಿಂದ ಅನಧಿಕೃತವಾಗಿ ವೈರನ್ನು ಎಳೆದುಕೊಂಡು ತಮ್ಮ ಜಮೀನಿನ ಪಂಪ್‍ಸೆಟ್‍ಗೆ ಸಂಪರ್ಕ ಕಲ್ಪಿಸಿಕೊಂಡು ಕಳ್ಳತನ ಮಾಡುತ್ತಿದ್ದರು.

 ಚೆಸ್ಕಾಂನ ಜಾಗೃತ ದಳದವರು 2014 ನವೆಂಬರ್ 11ರಂದು ದಾಳಿ ನಡೆಸಿ, ಎಲೆಕ್ಟ್ರಿಸಿಟಿ ಕಾಯ್ದೆಯಡಿ ಆರೋಪ ಪಟ್ಟಿ ಸಲ್ಲಿಸಿದ್ದರು. ಇವರು ಅಪರಾಧ ಮಾಡಿರುವುದು ಸಾಕ್ಷಿ ವಿಚಾರಣೆಯಿಂದ ಸಾಬೀತಾದ ಮೇರೆಗೆ ಆರೋಪಿಗಳಿಗೆ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ. ತಪ್ಪಿದ್ದಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ.

 ಮೊದಲನೇ ಆರೋಪಿ ಚಿಕ್ಕಮಾದಯ್ಯಗೆ 2.02 ಲಕ್ಷ ರೂ. ಹಾಗೂ ವಿದ್ಯುತ್‍ ಲೈನ್‍ಗೆ ಅಡಚಣೆ ಉಂಟು ಮಾಡಿದ್ದಕ್ಕೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. 2ನೇ ಆರೋಪಿ ಬಸವರಾಜುಗೆ 10 ಸಾವಿರ ರೂ. ಹಾಗೂ ವಿದ್ಯುತ್‍ಗೆ ಅಡಚಣೆ ಉಂಟು ಮಾಡಿದ್ದಕ್ಕೆ 5 ಸಾವಿರ ರೂ. ದಂಡ ವಿಧಿಸಿದೆ.

 

%d bloggers like this: