You cannot copy content of this page.
. . .

ನಾವು ‘ಭಾವನಾತ್ಮಕ ಏಕೀಕರಣ’ಕ್ಕಾಗಿ ಪ್ರಯತ್ನಿಸಬೇಕೆಂದು ಸಂವಿಧಾನ ಹೇಳಿದೆ; ಮೋಹನ್ ಭಾಗವತ್

ನಾವು ‘ಭಾವನಾತ್ಮಕ ಏಕೀಕರಣ’ವನ್ನು ತರಲು ಪ್ರಯತ್ನಿಸಬೇಕೆಂದು ಸಂವಿಧಾನ ಹೇಳಿದೆ ಎಂದು ಆರ್‍ಎಸ್‍ಎಸ್‍ ಮುಖ್ಯಸ್ಥ ಮೋಹನ್ ಭಾಗವತ್‍ ಹೇಳಿದ್ದಾರೆ.

 ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಭಾವನೆ ಅಂದರೆ ಏನು? ಆ ಭಾವನೆ, ಈ ದೇಶವು ನಮಗೆ ಸೇರಿದೆ. ನಾವು ನಮ್ಮ ಮಹಾನ್ ಪೂರ್ವಜರ ವಂಶಸ್ಥರು. ನಮ್ಮ ವೈವಿಧ್ಯತೆಯ ಹೊರತಾಗಿಯೂ ನಾವು ಒಟ್ಟಿಗೆ ಬದುಕಬೇಕು. ಇದನ್ನೇ ನಾವು ಹಿಂದುತ್ವ ಎಂದು ಕರೆಯುತ್ತೇವೆ ಎಂದಿದ್ದಾರೆ.

 ಭಾರತ ಹಿಂದೂಗಳಿಗೆ ಸೇರಿದೆ. ಇಲ್ಲಿ ನೆಲೆಸಿರುವ 130 ಕೋಟಿ ಜನರು ಹಿಂದೂಗಳು ಎಂದು ಆರ್‍ಎಸ್‍ಎಸ್‍ನ ಕಾರ್ಯಕರ್ತರು ಹೇಳುವುದು, ನಾವು ಇತರೆ ಧರ್ಮ, ಭಾಷೆ ಅಥವಾ ಜಾತಿಯನ್ನು ಬದಲಾಯಿಸಲು ಬಯಸುತ್ತೇವೆಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 ಸಂವಿಧಾನವನ್ನು ಹೊರತುಪಡಿಸಿ ಬೇರೆ ಯಾವುದೇ ಶಕ್ತಿ ಕೇಂದ್ರವನ್ನು ನಾವು ಬಯಸುವುದಿಲ್ಲ. ಏಕೆಂದರೆ ನಾವು ಸಂವಿಧಾನವನ್ನು ಅದನ್ನು ನಂಬುತ್ತೇವೆ ಎಂದಿದ್ದಾರೆ.

 

%d bloggers like this: