You cannot copy content of this page.
. . .

 ಕರ್ನಾಟಕದಲ್ಲಿ ಹೂಡಿಕೆ ಸಂಬಂಧ ಸ್ವಿಜರ್ಲೆಂಡ್‍ ಉದ್ಯಮಿಗಳ ಜೊತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇಂದಿನಿಂದ (ಭಾನುವಾರ) 6 ದಿನಗಳ ಕಾಲ ಸಿಎಂ ವಿದೇಶ ಪ್ರವಾಸ ಕೈಗೊಂಡಿದ್ದು, ಅವರಿಗೆ ಸಚಿವ ಜಗದೀಶ್‍ ಶೆಟ್ಟರ್‍ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಾಥ್‍ ನೀಡಲಿದ್ದಾರೆ.

 ಸ್ವಿಜರ್ಲೆಂಡ್‍ನ ದಾವೋಸ್‍ನಲ್ಲಿ ನಡೆಯುವ ವಿಶ್ವ ಅರ್ಥಿಕ ಒಕ್ಕೂಟದ ಶೃಂಗಸಭೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಕರ್ನಾಟಕದಲ್ಲಿ ಹೊಡಿಕೆ ಸಂಬಂಧ ಪೂರ್ವಭಾವಿ ಸಮಾವೇಶ ಹಾಗೂ ಸ್ವಿಜರ್ಲೆಂಡ್ ಉದ್ಯಮಿಗಳ ಜೊತೆ ಸಭೆಗಳಲ್ಲಿ ಭಾಗವಹಿಸಿ ಚರ್ಚಿಸಲಿದ್ದಾರೆ. ಶೃಂಗಸಭೆ ಸಮಾವೇಶದಲ್ಲಿ ಕರ್ನಾಟಕದ ಮಳಿಗೆಗೆ ಚಾಲನೆ ನೀಡಲಿದ್ದಾರೆ.

ವಿದೇಶ ಪ್ರವಾಸದಿಂದ ಮರಳಿದ ನಂತರ ಸಂಪುಟ ವಿಸ್ತರಣೆ

 ಸಂಪುಟ ವಿಸ್ತರಣೆ ಬಗ್ಗೆ ಅಮಿತ್ ಶಾ ಅವರ ಬಳಿ ಅರ್ಧಗಂಟೆ ಮಾತುಕತೆ ನಡೆಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಶ್ವ ಆರ್ಥಿಕ ಶೃಂಗಸಭೆಯಿಂದ ವಾಪಸ್ಬಂದ ಕೂಡಲೇ ಬಗ್ಗೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.

 

%d bloggers like this: