You cannot copy content of this page.
. . .

ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ದಿಮತ್ತೆ ಅಭಿವೃದ್ಧಿಪಡಿಸಲಾಗುವುದು; ಸಿಜೆಐ ಬೋಬ್ಡೆ

 ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ದಿಮತ್ತೆ ಅಭಿವೃದ್ಧಿಪಡಿಸುವ ಸಾಧ್ಯತೆ ಇದೆ. ಪ್ರಕರಣಗಳ ಅನಗತ್ಯ ವಿಳಂಬ ತಡೆಗಟ್ಟುವುದನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶಕ್ಕಾಗಿ ಮಾತ್ರ. ಕೃತಕ ಬುದ್ದಿಮತ್ತೆ ಮಾನವ ನ್ಯಾಯಾಧೀಶರ ಸ್ಥಾನವನ್ನು ತುಂಬುವುದು ಎಂದಿಗೂ ಅಸಾಧ್ಯ ಎಂಬ ವಿಚಾರವನ್ನೂ ಸ್ಪಷ್ಟಪಡಿಸುತ್ತೇನೆ ಎಂದು ಸುಪ್ರೀಂ ಕೋರ್ಟ್‍ ಮುಖ್ಯ ನ್ಯಾಯಮೂರ್ತಿ ಎಸ್‍.ಎ.ಬೋಬ್ಡೆ ಹೇಳಿದ್ದಾರೆ.

 ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಇದು ನ್ಯಾಯಾಧೀಶರ ವಿವೇಚನೆಯನ್ನೂ ಬದಲಿಸಲು ಸಾಧ್ಯವಿಲ್ಲ. ಕೃತಕ ಬುದ್ದಿಮತ್ತೆಯನ್ನು ತೀರ್ಪುಗಳ ಪುನರಾವರ್ತನೆ, ಯಾಂತ್ರಿಕ ಇನ್ನಿತರ ತಾಂತ್ರಿಕ ವಿಭಾಗಗಳಲ್ಲಿ ಮಾತ್ರ ಸದ್ಬಳಕೆ ಮಾಡಿಕೊಳ್ಳಲಾಗುವುದು. ಈ ಸಾಧ್ಯತೆ ಕುರಿತು ಅನ್ವೇಷಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

 

%d bloggers like this: