You cannot copy content of this page.
. . .

ಮಹಿಳೆ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿ

 ಮೈಸೂರು: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ ೧ ಲಕ್ಷ ರೂ. ಮೌಲ್ಯದ ೪೦ ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

 ನಗರದ ರಾಮಕೃಷ್ಣನಗರ ನಿವಾಸಿ ಪಾರ್ವತಿ ಎಂಬವರೇ ದುಷ್ಕರ್ಮಿಗಳ ದಾಳಿಗೊಳಗಾಗಿ ಚಿನ್ನದ ಸರ ಕಳೆದುಕೊಂಡವರು. ಅವರು ಶುಕ್ರವಾರ ಸಂಜೆ ೪ ಗಂಟೆ ವೇಳೆಯಲ್ಲಿ ಮನೆಗೆ ತೆರಳುವ ಸಲುವಾಗಿ ರಾಮಕೃಷ್ಣನಗರದ ರೂಬಿ ಬೇಕರಿಯ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅಪರಿಚಿತ ಬೈಕ್ ಸವಾರನೊಬ್ಬ ಎದುರಾಗಿದ್ದಾನೆ. ಕೂಡಲೇ ಪಾರ್ವತಿ ಅವರ ಮೇಲೆ ದಾಳಿ ನಡೆಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

 

%d bloggers like this: