. . .

Category: Uncategorized

ಆಯಾರಾಮ್.. ಗಯಾರಾಮ್..; ಪಕ್ಷಾಂತರ ನಿಷೇಧ ಕಾಯ್ದೆ ಬಂದಿದ್ದು ಹೇಗೆ..?

93 Views  ಆಯಾ ರಾಮ್‍.. ಗಯಾ ರಾಮ್‍… ಈ ಮಾತನ್ನು ಆಗಾಗ ನಾವು ಕೇಳುತ್ತಲೇ ಇರುತ್ತೇವೆ. ಅಂದಹಾಗೆ ಈ ಮಾತು ಬಳಕೆಗೆ ಬಂದಿದ್ದು 1967ರಲ್ಲಿ. ಆ ಸಮಯದಲ್ಲಿ ಹರ್ಯಾಣದಲ್ಲಿ ಶಾಸಕರಾಗಿದ್ದ ಗಯಾ ಲಾಲ್‍ ಎಂಬುವವರ ಚಂಚಲ ನಿರ್ಧಾರದಿಂದಾಗಿ ಈ ಮಾತು ಇಂದಿಗೂ ಬಳಕೆಯಾಗುತ್ತಾ ಬಂದಿದೆ. ಜೊತೆಗೆ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬರುವುದಕ್ಕೆ ಬುನಾದಿ ಹಾಕಿದ್ದೂ ಇದೇ ವಿಷಯ. ಶಾಸಕರಾಗಿದ್ದ ಗಯಾ ಲಾಲ್‍, ಒಂದೇ ದಿನದಲ್ಲಿ 3 ಪಕ್ಷಗಳನ್ನು ಬದಲಾಯಿಸಿದ್ದರು. ಇದರಿಂದಾಗಿ ಹರ್ಯಾಣದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. […]

ಮೂರೂವರೆ ವರ್ಷ ಬಿಎಸ್‍ವೈ ಸಿಎಂ; ಗೌಡರ ಅಚ್ಚರಿ ಹೇಳಿಕೆ

60 Views   ಯಡಿಯೂರಪ್ಪ ಅವರು ಮೂರೂವರೆ ವರ್ಷ ಸಿಎಂ ಆಗಿ ಮುಂದುವರೆಯಲಿದ್ದು, ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಸ್ಥಾನವೇ ಖಾಯಂ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಅನರ್ಹತೆ ವಿಚಾರ ಸಂಬಂಧ ಸುಪ್ರೀಂ ಕೋರ್ಟ್‍ ತೀರ್ಪು ನೀಡಿದ ನಂತರ ಸುದ್ದಿಗೋಷ್ಠಿ ನಡೆಸಿದ ದೇವೇಗೌಡರು, ಈ ಹೇಳಿಕೆ ನೀಡಿದ್ದಾರೆ.   ಉಪಚುನಾವಣೆಯಲ್ಲಿ ಜೆಡಿಎಸ್‍ ಸ್ವತಂತ್ರವಾಗಿ ಸ್ಪರ್ಧಿಸುತ್ತದೆ. ಕಾಂಗ್ರೆಸ್‍ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಇದೇ ಮಾತನ್ನೇ ಹೇಳಿದ್ದಾರೆ.

ಅನರ್ಹತೆ ಎಂಬುದೇ ಕಳಂಕ – ರಮೇಶ್ ಕುಮಾರ್

77 Views   ಅನರ್ಹತೆ ಎಂಬುದೇ ಕಳಂಕ. ಅನರ್ಹರನ್ನು ಆಯ್ಕೆ ಮಾಡುವುದು ಬಿಡುವುದು ಮತದಾರರಿಗೆ ಬಿಟ್ಟ ವಿಚಾರ ಎಂದು ಮಾಜಿ ಸ್ಪೀಕರ್‍ ರಮೇಶ್‍ ಕುಮಾರ್‍ ಹೇಳಿದ್ದಾರೆ. ಸುಪ್ರೀಂ ಕೋರ್ಟ್‍ ತೀರ್ಪಿಗೆ ಪ್ರತಿಕ್ರಿಯೆ ನೀಡಿದ ಅವರು, ತೀರ್ಪು ನನಗೆ ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.    ನಾನು ಕಾನೂನಿನ ಅಡಿಯಲ್ಲಿಯೇ ಈ ವಿಧಾನಸಭೆ ಅವಧಿ ಮುಗಿಯುವವರೆಗೆ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಆದೇಶ ನೀಡಿದ್ದೆ. ಅನರ್ಹರು ಏನೇ ಆರೋಪ ಮಾಡಿದರೂ ಅದಕ್ಕೆ ನಾನು ಮನ್ನಣೆ ಕೊಡುವುದಿಲ್ಲ. ನಾನು ಯಾವುದೇ ಪಕ್ಷದ ಪರವಾಗಿ […]

ಯಾವ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ ಹೇರುತ್ತಾರೆ..?

56 Viewsಸದ್ಯ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಯಾವ ಪಕ್ಷಕ್ಕೂ ಬಹುಮತ ಇಲ್ಲ. ಅತಿದೊಡ್ಡ ಪಕ್ಷ ಬಿಜೆಪಿ ಸರ್ಕಾರ ರಚನೆಯಿಂದ ಹಿಂದೆ ಸರಿದಿದೆ. ಎರಡನೇ ಅತಿದೊಡ್ಡ ಪಕ್ಷಕ್ಕೆ ರಾಜ್ಯಪಾಲರು ನೀಡಿದ್ದ ಅವಧಿಯಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಯಾರಿಗೂ ಸರ್ಕಾರ ರಚನೆಯ ಶಕ್ತಿ ಇಲ್ಲ ಎಂದು ನಿರ್ಧರಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿದೆ. ಒಂದು ವೇಳೆ ಬಹುಮತಕ್ಕೆ ಬೇಕಾದ ಸಂಖ್ಯೆಯ ಶಾಸಕರ ಒಪ್ಪಿಗೆ ಪತ್ರವನ್ನು ರಾಜ್ಯಪಾಲರಿಗೆ ನೀಡಿದರೆ ಮತ್ತೆ ಸರ್ಕಾರ ರಚನೆಗೆ ರಾಜ್ಯಪಾಲರು ಒಪ್ಪಿಗೆ […]

‘ಮಹಾ’ಸಂಗ್ರಾಮ; ಈಗ NCPಯಿಂದ 50:50 ಅಸ್ತ್ರ..

42 Viewsಶಿವಸೇನೆ 50:50 ಸೂತ್ರ ಪಾಲಿಸುವಂತೆ ಬಿಜೆಪಿ ಮೇಲೆ ಒತ್ತಡ ಹೇರಿತ್ತು. ಅದು ಸಾಧ್ಯವಾಗದಿದ್ದಾಗ ಮೈತ್ರಿ ಕಡಿದುಕೊಂಡು ಎನ್‍ಸಿಪಿ ಹಾಗೂ ಕಾಂಗ್ರೆಸ್‍ ಜೊತೆ ಸೇರಿ ಸರ್ಕಾರ ರಚಿಸೋಕೆ ಶಿವಸೇನೆ ಕಸರತ್ತು ಮಾಡುತ್ತಿದೆ. ಆದರೆ ಇದೇ ಅವಕಾಶ ಬಳಸಿಕೊಂಡಿರುವ ಎನ್‍ಸಿಪಿ ಕೂಡಾ 50:50 ಸೂತ್ರ ಮುಂದಿಟ್ಟಿದೆ. ನಮಗೂ ಎರಡೂವರೆ ವರ್ಷ ಸಿಎಂ ಸ್ಥಾನ ನೀಡಿದರೆ ಮಾತ್ರ ಮೈತ್ರಿ ಎಂದು ಎನ್‍ಸಿಪಿ ನಾಯಕ ಶರದ್‍ ಪವಾರ್‍ ಬೇಡಿಕೆ ಇಟ್ಟಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‍ ಕೂಡಾ 11 ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ.

ಜಾರ್ಖಂಡ್‍ನಲ್ಲೂ ಮೈತ್ರಿಗೆ ಕುತ್ತು; ಬಿಜೆಪಿ ಸಖ್ಯ ಬಿಟ್ಟ ಎಲ್‍ಜೆಪಿ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಜಾರ್ಖಂಡ್ ರಾಜಕೀಯದ ಮೇಲೂ ಪ್ರಭಾವ ಬೀರಿದೆ. ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್ಜೆಪಿ, ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಖ್ಯ ತೊರೆದಿದೆ. ಒಟ್ಟು 82 ಕ್ಷೇತ್ರಗಳ ಜಾರ್ಖಂಡ್ ವಿಧಾನಸಭೆಯಲ್ಲಿ 50 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಲ್ಜೆಪಿ ಮಹತ್ವದ ತೀರ್ಮಾನ ಕೈಗೊಂಡಿದೆ.
ಕೇಂದ್ರ ಸರ್ಕಾರದಲ್ಲಿ ಎಲ್ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಮಂತ್ರಿಯಾಗಿದ್ದಾರೆ. ಹೀಗಿದ್ದರೂ ಜಾರ್ಖಂಡ್ ರಾಜ್ಯದಲ್ಲಿ ಎಲ್ಜೆಪಿ ಪಕ್ಷ ಈ ತೀರ್ಮಾನ ಕೈಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಜಾರ್ಖಂಡ್ನಲ್ಲಿ ಬಿಜೆಪಿ, ಎಲ್ಜೆಪಿ ಹಾಗೂ ಜೆಡಿಎ ನೇತೃತ್ವದ ಸಮ್ಮಿಶ್ರ ಸರ್ಕಾರವಿದೆ. ಈಗಾಗಲೇ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೂಡಾ ಮೈತ್ರಿಕೂಟದಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸುವ ತೀರ್ಮಾನ ಕೈಗೊಂಡಿದೆ. ಜಾರ್ಖಂಡ್ನಲ್ಲಿ ನವೆಂಬರ್ 30 ರಿಂದ ಡಿಸೆಂಬರ್ 20ರವರೆಗೆ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಮಹಾ‘ರಾಷ್ಟ್ರಪತಿ’ ಆಡಳಿತ: ರಾಮನಾಥ್ ಕೋವಿಂದ್ ಅಂಕಿತ

42 Views     ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಷ್ಟ್ರಪತಿ ರಾಮನಾಥ್‍ ಕೋವಿಂದ್ ಅಂಕಿತ ಹಾಕಿದ್ದಾರೆ. ಶಿವಸೇನೆ ಬಿಜೆಪಿ ಸಖ್ಯ ತೊರೆದಿದ್ದರಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಅತಿದೊಡ್ಡ ಪಕ್ಷವಾದ ಬಿಜೆಪಿ ಸರ್ಕಾರ ರಚನೆಯಿಂದ ಹಿಂದೆ ಸರಿದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮೊದಲು ಶಿವಸೇನೆ, ಅನಂತರ ಎನ್‍ಸಿಪಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸುವಂತೆ ಗಡವು ನೀಡಿದ್ದರು. ಎನ್‍ಸಿಪಿ ಮಂಗಳವಾರ ರಾತ್ರಿ 8.30ರವರೆಗೆ ಹಕ್ಕು ಮಂಡನೆಗೆ ಅವಕಾಶವಿತ್ತು. ಈ ಬೆನ್ನಲ್ಲೇ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ಕೂಡಲೇ […]

ಈ ನ್ಯೂಯಾರ್ಕ್ ಸಿಟಿಗೆ ರಸ್ತೆಯೂ ಇಲ್ಲ, ನೀರೂ ಇಲ್ಲ..!

46 Views     ವಿಶ್ವದ ಶ್ರೀಮಂತ ದೇಶಗಳಲ್ಲಿ ಅಮೆರಿಕ ಕೂಡಾ ಒಂದು. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಗಳಿಸಿರೋ ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್ ಸಿಟಿಗೆ ರಸ್ತೆಯೇ ಸರಿ ಇಲ್ಲ. ಇಲ್ಲಿನ ಜನಕ್ಕೆ ಕುಡಿಯೋಕೆ ನೀರೂ ಸಿಗುತ್ತಿಲ್ಲ ಅಂದ್ರೆ ನಂಬೋಕೆ ಆಗುತ್ತಾ..? ಸಾಧ್ಯಾನೇ ಇಲ್ಲ ಬಿಡಿ. ಹಾಗಂತ ನಾವು ಹೇಳೋಕೆ ಹೊರಟಿರೋದು ಅಮೆರಿಕದ ನ್ಯೂಯಾರ್ಕ್ ಬಗ್ಗೆ ಅಲ್ಲ. ಮಂಡ್ಯದ ನ್ಯೂಯಾರ್ಕ್ ಬಗ್ಗೆ..    ಹೌದು, ಮಂಡ್ಯ ಜಿಲ್ಲೆ ಮದ್ದೂರು ಬಳಿ ಒಂದು ನ್ಯೂಯಾರ್ಕ್ ಇದೆ. ಮದ್ದೂರು-ಕೆಎಂ ದೊಡ್ಡಿ ಮಾರ್ಗದಲ್ಲಿ […]

ಹುಟ್ಟುತ್ತಲೇ ಅನಾಥವಾಗುವ ಆಕ್ಟೋಪಸ್‍ಗಳು..!

40 Views   ಹುಟ್ಟೋಕೆ ಮುಂಚೆಯೇ ತಂದೆ ತೀರಿಕೊಳ್ಳುತ್ತಾನೆ.. ಹುಟ್ಟಿದ ತಕ್ಷಣವೇ ತಾಯಿ ಸಾವನ್ನಪ್ಪುತ್ತಾಳೆ.. ಮನುಷ್ಯರಲ್ಲಿ ಇಂತಹ ಪರಿಸ್ಥಿತಿ ಎದುರಾದರೆ, ಎಲ್ಲರೂ ಮಗುವಿನ ಭವಿಷ್ಯದ ಬಗ್ಗೆಯೇ ಮರುಕಪಡುತ್ತಾರೆ.. ಆದ್ರೆ ಇಲ್ಲಿ ದಿನಾ ಅನಾಥವಾಗುವ ಆಕ್ಟೋಪಸ್‍ ಮರಿಗಳನ್ನು ನೋಡಿ ದುಃಖಪಡುವವರೇ ಇಲ್ಲ. ಯಾಕಂದ್ರೆ, ಕಣ್ಣು ತೆರೆಯೋಕೆ ಮುಂಚೆಯೇ ಎಲ್ಲಾ ಆಕ್ಟೋಪಸ್‍ಗಳೂ ಅನಾಥವಾಗಿರುತ್ತವೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುತ್ತವೆ.       ತಾಯಿಯ ಪ್ರೀತಿ, ವಾತ್ಸಲ್ಯಕ್ಕೆ ಯಾರೂ ಬೆಲೆ ಕಟ್ಟೋದಕ್ಕೆ ಆಗೋದಿಲ್ಲ ಬಿಡಿ. ಅದರಲ್ಲೂ ಈ ಆಕ್ಟೋಪಸ್‍ಗಳ ತಾಯಿ ವಾತ್ಸಲ್ಯ ಇದೆಯಲ್ಲ, ಅದು […]

ಗೂಗಲ್‍ಗೇ ಗೊತ್ತಿಲ್ಲ ಕರ್ನಾಟಕದ ಈ ಗೂಗಲ್‍..!

84 Views     ಗೂಗಲ್‍.. ಈ ಹೆಸರು ಪ್ರಪಂಚದ ಮೂಲೆಮೂಲೆಗೂ ಗೊತ್ತು.. ಗೂಗಲ್‍ ಅನ್ನೋ INTERNET ಫೇಮಸ್‍ ಸರ್ಚ್‍ ಎಂಜಿನ್‍ ಕಾರ್ಯರೂಪಕ್ಕೆ ಬಂದಿದ್ದು 1997 ಸೆಪ್ಟೆಂಬರ್‍ 15ರಂದು.. ಕೇವಲ 2 ದಶಕಗಳ ಹಿಂದೆ ಬಂದ ಗೂಗಲ್‍ ಬಹುತೇಕ ಎಲ್ಲರಿಗೂ ಗೊತ್ತಿದೆ.. ಆದರೆ 12ನೇ ಶತಮಾನದಲ್ಲಿ ಹುಟ್ಟಿದ ಗೂಗಲ್‍ ಮಾತ್ರ ಹೆಚ್ಚು ಜನಕ್ಕೆ ಗೊತ್ತಿಲ್ಲ..    ಇಂಟರ್‍ ನೆಟ್‍ ಹಾಗೂ ಗೂಗಲ್‍ ಅನ್ನೋ ಸರ್ಚ್‍ ಎಂಜಿನ್‍ ಇಡೀ ಪ್ರಪಂಚವನ್ನು ಪುಟ್ಟ ಹಳ್ಳಿಯನ್ನಾಗಿ ಮಾಡಿಬಿಟ್ಟಿದೆ. ಆದರೆ ಇದೇ ಈ ಗೂಗಲ್‍ ಅನ್ನೋ […]