You cannot copy content of this page.
. . .

Category: SOMETHING ಸ್ಪೆಷಲ್

ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ

ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ 99,300 ಕೋಟಿ ಹಾಗೂ ಕೌಶಲ್ಯ ಅಭಿವೃದ್ಧಿಗೆ 3,000 ಕೋಟಿ ಅನುದಾನ ನೀಡಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಶಿಕ್ಷಣ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ ನಿರ್ಮಲಾ ಸೀತಾರಾಮನ್ ಬಜೆಟ್‍ ನಲ್ಲಿ ಘೋಷಣೆ ಮಾಡಿದ್ದಾರೆ.  ಸಂಸತ್​ನಲ್ಲಿ ಇಂದು ತಮ್ಮ ಎರಡನೇ ವಾರ್ಷಿಕ ಬಜೆಟ್ ಮಂಡಿಸಿ, ಬಜೆಟ್ ಮೇಲಿನ ಭಾಷಣದ ವೇಳೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು. “ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಿದೆ. […]

ನಾನು ಮತ್ತೆ ಬರೆಯುತ್ತೇನೋ ಇಲ್ಲವೋ ಗೊತ್ತಿಲ್ಲ..: ಎಸ್‍.ಎಲ್‍.ಭೈರಪ್ಪ

ನನ್ನ ಬರವಣಿಗೆ ಕಾಲ ಮುಗಿಯಿತು ಅನಿಸುತ್ತಿದೆ. ಮತ್ತೆ ಬರೆಯುತ್ತೀನೋ ಇಲ್ಲವೋ ಗೊತ್ತಿಲ್ಲ ಎಂದು ಹಿರಿಯ ಸಾಹಿತಿ ಡಾ.ಎಸ್‌.ಎಲ್.ಭೈರಪ್ಪ ಹೇಳಿದ್ದಾರೆ. ಹಾಗೆ ಹೇಳುವ ಮೂಲಕ ತನ್ನ ಸಾಹಿತ್ಯ ಓದುಗರಿಗೆ ದೊಡ್ಡ ಆಘಾತ ನೀಡಿದ್ದಾರೆ.   ಧಾರವಾಡದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್  ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿತ್ತು. ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ಭೈರಪ್ಪ ಅವರು, ಸಾಹಿತ್ಯ ಸಂವಾದದಲ್ಲಿ ಭಾಗವಹಿಸಿದ್ದರು. ಈ ವೇಳೆ ಮುಂದಿನ ಕಾದಂಬರಿ ಕುರಿತು ಕೇಳಿಬಂದ ಪ್ರಶ್ನೆಗೆ ಉತ್ತರಿಸುತ್ತಾ, ಉತ್ತರಕಾಂಡ ಕಾದಂಬರಿ ನಂತರ ನಾನು ಏನನ್ನೂ ಬರೆದಿಲ್ಲ. […]

ಆಂಧ್ರದಲ್ಲಿ ಕನ್ನಡ ಶಾಲೆ ಬಂದ್ ಮಾಡಲು ಅಲ್ಲಿನ ಸರ್ಕಾರ ನಿರ್ಧಾರ

 ಕರ್ನಾಟಕ-ಆಂಧ್ರ ಗಡಿಭಾಗದಲ್ಲಿರುವ ಕನ್ನಡ ಮಾಧ್ಯಮ ಶಾಲೆ ಮುಚ್ಚಲು ಆಂಧ್ರಪ್ರದೇಶದ ಜಗನ್‍ ನೇತೃತ್ವದ ಸರ್ಕಾರ ಮುಂದಾಗಿದೆ. ಒಂದು ತಿಂಗಳ ಹಿಂದೆಯೇ ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಮುನ್ಸೂಚನೆ ನೀಡಲಾಗಿತ್ತು. ಆದರೆ  ನಮ್ಮ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು. ಇದೀಗ ಕನ್ನಡ ಮಾಧ್ಯಮ ಶಾಲೆಗಳಿಗೆ ಡಿಕ್ಲರೇಷನ್ ಪತ್ರ ಕಳುಹಿಸಲಾಗಿದೆ. ಆಂಗ್ಲ ಅಥವಾ ತೆಲುಗು ಭಾಷೆಯನ್ನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ಇಷ್ಟಾದರೂ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿಲ್ಲ.  ರಾಜ್ಯದ ಗಡಿಭಾಗದ ಆಂಧ್ರದಲ್ಲಿ ಮಾತೃಭಾಷೆ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. […]

ಬೆವರಿನಿಂದ ಮುಖ ಮಸಾಜ್‍; ತಮ್ಮ ತ್ವಚೆಯ ಕಾಂತಿಯ ರಹಸ್ಯ ಬಿಚ್ಚಿಟ್ಟ ಮೋದಿ

  ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮುಖದ ತ್ವಚೆಯ ಕಾಂತಿಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ನಾನು ದಿನದಲ್ಲಿ ಸಾಕಷ್ಟು ಬಾರಿ ಬೆವರುತ್ತೇನೆ. ಅದರಿಂದ ನಾನು ಮುಖವನ್ನು ಮಸಾಜ್‍ ಮಾಡಿಕೊಳ್ಳುತ್ತೇನೆ. ಬೆವರು ನನ್ನ ಮುಖಕ್ಕೆ ಹೊಳಪು ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ.   ಪ್ರಧಾನಮಂತ್ರಿ ಬಾಲ ಪುರಸ್ಕಾರಕ್ಕೆ ಭಾಜನರಾದ 49 ಮಕ್ಕಳೊಂದಿಗೆ ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಕ್ಕಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಈ ವೇಳೆ ತಮ್ಮ […]

ನೃತ್ಯ ಮಾಡುತ್ತಲೇ ಕುಸಿದುಬಿದ್ದು ವಿದ್ಯಾರ್ಥಿನಿ ಸಾವು

 ನೃತ್ಯಾಭ್ಯಾಸ ಮಾಡುತ್ತಿದ್ದ ವೇಳೆ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಆ ವಿದ್ಯಾರ್ಥಿನಿ ಬಿದ್ದಿದ್ದನ್ನು ಕಂಡರೂ ಶಿಕ್ಷಕ ನಿರ್ಲಕ್ಷ್ಯ ವಹಿಸಿದ್ದಾನೆ. ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.   ಕೋಲಾರ ಜಿಲ್ಲೆಯ ಬೇತಮಂಗಲ ಹೋಬಳಿಯ ಟಿ ಗೊಲ್ಲಹಳ್ಳಿ ಗ್ರಾಮದ ಬಳಿಯಿರುವ ವಿಮಲಾ ಹೃದಯ ಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಪೂಜಿತಾ ಸಾವನ್ನಪ್ಪಿದ ವಿದ್ಯಾರ್ಥಿನಿ. ಶಾಲಾ ವಾರ್ಷಿಕೋತ್ಸವದ ಸಲುವಾಗಿ ನೃತ್ಯಾಭ್ಯಾಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ನಾಳೆ ವಿಮಲ ಹೃದಯ ಸಂಸ್ಥೆಯಲ್ಲಿ ಶಾಲಾ […]

ಸಾಮೂಹಿಕ ನಕಲಿನಿಂದ SSLCಯಲ್ಲಿ ಹಾಸನಕ್ಕೆ ಪ್ರಥಮ ಸ್ಥಾನ.?; ರಹಸ್ಯ ಬಯಲು..!

  ಕಳೆದ ಬಾರಿ SSLC ಪರೀಕ್ಷೆಯಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಇದರ ಹಿಂದಿನ ಗುಟ್ಟನ್ನು ನೊಂದ ಶಿಕ್ಷಕರೊಬ್ಬರು ಬಯಲು ಮಾಡಿದ್ದಾರೆ.  2019ರಲ್ಲಿ SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಹಾಸನ ಜಿಲ್ಲೆ ದಾಖಲೆ ಸೃಷ್ಟಿಸಿತ್ತು. ಜಿಲ್ಲೆಯ ಈ ಸಾಧನೆಯಲ್ಲಿ ತಮ್ಮ ಪತ್ನಿ ಭವಾನಿ ಶ್ರಮ ದೊಡ್ಡದು ಎಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರೇವಣ್ಣ ಕೊಂಡಾಡಿದ್ದರು. ಅಚ್ಚರಿಯೆಂಬಂತೆ ಫಲಿತಾಂಶ ನೀಡಿದ್ದ ಜಿಲ್ಲೆಯ ಈ ಸಾಧನೆಯ ರಹಸ್ಯ ಈಗ ಬಯಲಾಗಿದೆ. ಸಾಮೂಹಿಕ ನಕಲಿಗೆ […]

ಕೆಎಸ್ಒಯು ಕುಲಸಚಿವರಾಗಿ ಪ್ರೊ.ಲಿಂಗರಾಜಗಾಂಧಿ ಅಧಿಕಾರ ಸ್ವೀಕಾರ

 ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಕುಲಸಚಿವರಾಗಿ ಪ್ರೊ.ಲಿಂಗರಾಜಗಾಂಧಿ ಬುಧವಾರ ಅಧಿಕಾರ ಸ್ವೀಕರಿಸಿದರು.  ನಿರ್ಗಮಿತ ಕುಲಸಚಿವ ರಮೇಶ್, ನೂತನ ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ಕೆಎಸ್‌ಒಯು ಕುಲಪತಿ ಪ್ರೊ. ವಿದ್ಯಾಶಂಕರ್ ಹೂಗುಚ್ಛ ನೀಡಿ ಅಭಿನಂದಿಸಿದರು.  ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ.ಲಿಂಗರಾಜಗಾಂಧಿ, ಮೈಸೂರು ವಿವಿ ಕುಲಸಚಿವರಾಗಿ(ಆಡಳಿತ) ಮತ್ತು ಬೆಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವರಾಗಿ, ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಅನುಭವ […]

ರಾಜ್ಯದ ಇಬ್ಬರು ಮಕ್ಕಳಿಗೆ ಶೌರ್ಯ ಪ್ರಶಸ್ತಿ

ಪ್ರಸಕ್ತ ಸಾಲಿನ ರಾಷ್ಟ್ರೀಯ ಶೌರ್ಯ ಪುರಸ್ಕಾರ ಪಟ್ಟಿ ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ಮಕ್ಕಳಿಗೆ ಪ್ರಶಸ್ತಿ ಘೋಷಣೆಯಾಗಿದೆ.  ಕಳೆದ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ತಲೆದೋರಿದ್ದ ಪ್ರವಾಹ ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ ಗೆ ದಾರಿಸಿ, ಐವರನ್ನು ರಕ್ಷಿಸಿದ್ದ ಬಾಲಕ ವೆಂಕಟೇಶ್ ಗೆ ಶೌರ್ಯ ಪ್ರಶಸ್ತಿ ಸಿಕ್ಕಿದೆ. ವೆಂಕಟೇಶ, ದೇವದುರ್ಗ ತಾಲ್ಲೂಕಿನ ಸಂಕನೂರು ಗ್ರಾಮದವರು. ಇನ್ನು ಕೋಪೋದ್ರಿಕ್ತ ಹಸುವಿನ ದಾಳಿಯಿಂದ ಮನೆಯ ಬಳಿ ನಿಂತಿದ್ದ ಎರಡು ವರ್ಷದ ತಮ್ಮನನ್ನು ರಕ್ಷಿಸಿದ್ದ ಹೊನ್ನಾವರ ತಾಲ್ಲೂಕಿನ ನವಿಲಗೋಣ ಗ್ರಾಮದ ಆರತಿ ಕೂಡಾ ಈ ಪುರಸ್ಕಾರಕ್ಕೆ […]

ಶೀಘ್ರದಲ್ಲೇ ಹಾಲಿನ ದರ ಏರಿಕೆ : ಖಚಿತಪಡಿಸಿದ ಕೆಎಂಎಫ್‍ ಅಧ್ಯಕ್ಷ

  ನಂದಿನಿ ಹಾಲಿನ ದರ ಲೀಟರ್‍ ಗೆ 2 ರಿಂದ 3 ರೂಪಾಯಿ ಏರಿಕೆಯಾಗುವುದು ಖಚಿತವಾಗಿದೆ. ಈ ವಿಷಯವನ್ನು ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೇ ದೃಢಪಡಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಹಲವು ದಿನಗಳಿಂದ ನಂದಿನಿ ಹಾಲಿನ ದರ ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವನೆ ಮಹಾಮಂಡಳದ ಮುಂದಿತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಲೀಟರ್‍ ಗೆ 2 ರಿಂದ 3 ರುಪಾಯಿ ಹೆಚ್ಚಳವಾಗಲಿದೆ ಎಂದು ಅವರು […]

ಮದುವೆಯಲ್ಲಿ DUSTBIN ಉಡುಗೊರೆ, ಇಲ್ಲಿ ಮಕ್ಕಳೇ ಸ್ವಚ್ಛತಾ ರಾಯಭಾರಿಗಳು..!

  ಇಲ್ಲಿ ಮಕ್ಕಳೇ ಸ್ವಚ್ಛತೆಯ ರಾಯಭಾರಿಗಳು. ಪ್ರತಿ ಮನೆಯಲ್ಲೂ ಹಸಿ ಕಸ, ಒಣ ಕಸ ಬೇರ್ಪಡಿಸಿ ಇಡಲಾಗುತ್ತದೆ. ಪ್ರತಿದಿನ ಕಸ ವಿಲೇವಾರಿ ನಡೆಯುತ್ತದೆ. ಮದುವೆಯಲ್ಲಿ ಡಸ್ಟ್ಬಿನ್‌ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ! ಇದು ಮಧ್ಯಪ್ರದೇಶದ ಇಂಧೋರ್‌ನ ಚಿತ್ರಣ. ಕಳೆದ ಮೂರು ಬಾರಿಯಿಂದ ಸತತವಾಗಿ ಸ್ವಚ್ಛ ನಗರಿ ಪಟ್ಟ ಪಡೆಯುತ್ತಾ ಬಂದಿರುವ ಮಧ್ಯಪ್ರದೇಶದ ಇಂಧೋರ್ ನಗರದಲ್ಲಿ ನಾವೂ ಊಹಿಸಲೂ ಆಗದ ಸರಳ ವಿಧಾನಗಳನ್ನು ಬಳಸಿಕೊಂಡು ಸ್ವಚ್ಛತೆ ಕಪಾಡಿಕೊಳ್ಳಲಾಗುತ್ತಿದೆ. ಅಲ್ಲಿನ ನಗರಪಾಲಿಕೆಯೊಂದಿಗೆ ಜನರು ಕೈಜೋಡಿಸಿ ತಮ್ಮ ನಗರವನ್ನು ಸ್ವಚ್ಛವಾಗಿರಿಸಿಕೊಂಡಿದ್ದಾರೆ. ಇಂಧೋರ್ ೧೯ -೨೦ […]