. . .

Category: ಶಿಕ್ಷಣ & ಯುವಜನ

85ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ್ ಮೂರ್ತಿ

46 Views85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ್ ಮೂರ್ತಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನುಬಳಿಗಾರ್ ಈ ಘೋಷಣೆ ಮಾಡಿದ್ದಾರೆ. ಈ ಬಾರಿ 2020ರ ಫೆಬ್ರವರಿ 5,6,7 ರಂದು ಕಲಬುರಗಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕಸಾಪ ಕಾರ್ಯಕಾರಿಣಿಯಲ್ಲಿ ಹಲವು ಹೆಸರುಗಳು ಚರ್ಚೆಗೆ ಬಂದಿದ್ದವು. ಆದರೂ ಒಮ್ಮತದಿಂದ  ಎಚ್.ಎಸ್.ವೆಂಕಟೇಶ್ ಮೂರ್ತಿ ಆಯ್ಕೆಯಾಗಿದ್ದಾರೆ ಎಂದು ಮನುಬಳಿಗಾರ್ ತಿಳಿಸಿದ್ದಾರೆ. ಎಚ್.ಎಸ್.ವೆಂಕಟೇಶಮೂರ್ತಿ ಯವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ ಕನ್ನಡ […]

ಮೈಸೂರಲ್ಲಿ ಮೊದಲ ವಿಶೇಷ ಚೇತನರ ಅಧ್ಯಯನ ಕೇಂದ್ರ

24 Views    ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ದೆಹಲಿಯ ಉನ್ನತ ಶಿಕ್ಷಣ ಸಂಸ್ಥೆ ವತಿಯಿಂದ ರಾಜ್ಯದಲ್ಲೇ ಮೊದಲ ಬಾರಿಗೆ ವಿಶೇಷಚೇತನ ವಿದ್ಯಾರ್ಥಿಗಳಿಗಾಗಿ ‘ಅಂಗವೈಕಲ್ಯ ಮತ್ತು ಪುನರ್ವಸತಿ ಅಧ್ಯಯನ ಕೇಂದ್ರ’ವನ್ನು ಮೈಸೂರಿನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.    ಇಂದು (ಬುಧವಾರ) ಮೈಸೂರು ವಿವಿಯ ಕ್ರಾಫಡ್ ಭವನದಲ್ಲಿ ನಡೆದ ಸಿಂಡಿಕೇಟ್ 2ನೇ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ವಿವಿಯ ಧನಸಹಾಯ ಆಯೋಗದ ನಿದೇರ್ಶನದಂತೆ ಡೀನ್‍ ಗಳ ಸಮಿತಿ […]

ಸುವರ್ಣ ರಥ ರೈಲು ಪುನಾರಂಭ; ಮೈಸೂರಿಗೂ ಬರಲಿದೆ ಐಶಾರಾಮಿ ಟ್ರೇನ್..

60 Views    ನಷ್ಟದ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ದಕ್ಷಿಣ ಭಾರತದ ಏಕೈಕ ರೈಲು ಸುವರ್ಣ ರಥ (ಗೋಲ್ಡನ್‍ ಚಾರಿಯೆಟ್‍) ವನ್ನು ಪುನಾರಂಭ ಮಾಡಲು ರೈಲ್ವೆ ಇಲಾಖೆ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ಧಾರ ಮಾಡಿದೆ. ಕರ್ನಾಟಕ, ಕೇರಳ, ಪುದುಚೇರಿ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ 2020ರ ಮಾರ್ಚ್‌ನಿಂದ ಸುವರ್ಣ ರಥ ಓಡಾಟ ನಡೆಸಲಿದೆ. ಸಂತಸದ ಸುದ್ದಿ ಅಂದರೆ ಸುವರ್ಣ ರಥ ಮೈಸೂರಿಗೂ ಆಗಮಿಸಲಿದೆ. ಬಂಡೀಪುರ, ಮೈಸೂರು, ಹಳೇಬಿಡು, ಚಿಕ್ಕಮಗಳೂರು, ಹಂಪಿ, ಬಿಜಾಪುರಗಳಲ್ಲೂ ಸಂಚಾರ ನಡೆಸಲಿದೆ.   ಸುವರ್ಣ ರಥ […]