You cannot copy content of this page.
. . .

Category: BREAKING NEWS

ಎಚ್‍.ಡಿ.ಕುಮಾರಸ್ವಾಮಿ ಹೇಳಿಕೆ ದೇಶದ್ರೋಹದಿಂದ ಕೂಡಿದೆ; ಪ್ರಹ್ಲಾದ್‍ ಜೋಶಿ

 ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪೊಲೀಸರನ್ನು ಅನುಮಾನಿಸಿ ನೀಡಿರುವ ಹೇಳಿಕೆಗಳು ದೇಶದ್ರೋಹದಿಂದ ಕೂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.  ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಹೇಳಿಕೆ ನಾಲಾಯಕ್‌ತನದಿಂದ ಕೂಡಿದೆ. ದೇಶದ ಕೆಲ ವಿರೋಧ ಪಕ್ಷಗಳ ಹಾಗೂ ಪಾಕಿಸ್ತಾನದ ಹೇಳಿಕೆಗಳಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ನಾವು ಆಗಾಗ ಹೇಳುತ್ತಿರುತ್ತೇವೆ. ಕುಮಾರಸ್ವಾಮಿ ಹೇಳಿಕೆಯೂ ಅದೇ ರೀತಿ ಇದೆ. ಹಾಗಾಗಿ, ಅವರು ಭಾರತದ […]

ನಾಮಪತ್ರ ಸಲ್ಲಿಸಲು 6 ಗಂಟೆ ಕಾದ ಕೇಜ್ರಿವಾಲ್..!

  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‍ ನಾಮಪತ್ರ ಸಲ್ಲಿಸಲು 6 ಗಂಟೆಗಳ ಕಾಲ ಕಾದ ಘಟನೆ ನಡೆದಿದೆ. ದೆಹಲಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಕೊನೆಯ ದಿನವೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ಆದರೆ ಕೇಜ್ರಿವಾಲ್ ಗಿಂತ ಮೊದಲೇ 44 ಮಂದಿ ಸ್ವತಂತ್ರ ಅಭ್ಯರ್ಥಿಗಳು ಟೋಕನ್ ಪಡೆದಿದ್ದು, ಕೇಜ್ರಿವಾಲ್ ಅವರಿಗೆ 45ನೇ ನಂಬರ್ ಟೋಕನ್ ದೊರಕಿತ್ತು. ಹೀಗಾಗಿ, ಕೇಜ್ರಿವಾಲ್‍ ಕಿರಿಕಿರಿ ಅನುಭವಿಸಿದ್ದಾರೆ.   ಅರವಿಂದ್ ಕೇಜ್ರಿವಾಲ್ ಅವರ ನಾಮಪತ್ರ ಸಲ್ಲಿಸುವುದನ್ನು ತಡೆಯಲು […]

ಶಾಲಾ ಬಸ್ ಗೆ ಕಾರು ಡಿಕ್ಕಿ; ಕಾರು ನಜ್ಜುಗುಜ್ಜು

  ಕೊಡಗು ಜಿಲ್ಲೆ ಐಗೂರು ಬಳಿ ಶಾಲಾ‌ ಬಸ್ ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದ್ದು, ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಮೂವರು ಪವಾಡ ಸದೃಷ ರೀತಿಯಲ್ಲಿ ಪಾರಾಗಿದ್ದಾರೆ.   ಅಪಘಾತಕ್ಕೀಡಾದ ಕಾರು ಸುಮನ್ ಮುದ್ದಯ್ಯ ಎಂಬವರಿಗೆ ಸೇರಿದ್ದಾಗಿದ್ದು, ಕಾರಿನ ಚಾಲಕ ಮದ್ಯಪಾನ ಮಾಡಿದ್ದ ಎಮದು ತಿಳಿದುಬಂದಿದೆ. ಕಾರಿನ ಏರ್‍ ಬ್ಯಾಗ್‍ ಓಪನ್‍ ಆಗಿದ್ದರಿಂದಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಬಚಾವಾಗಿದ್ದಾರೆ.

ಕಿಚ್ಚು ಹಾಯಿಸುವಾಗ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿದ್ದ ವ್ಯಕ್ತಿ ಸಾವು

 ಸಂಕ್ರಾಂತಿ ಹಬ್ಬದಂದು ಕಿಚ್ಚು ಹಾಯಿಸುವಾಗ ಬೆಂಕಿ ಹೊತ್ತಿಕೊಂಡು ಗಾಯಗೊಂಡಿದ್ದ ಮಂಡ್ಯ ತಾಲ್ಲೂಕಿನ ಚಿಕ್ಕಬಳ್ಳಿ ಗ್ರಾಮದ ರವಿ (26) ಭಾನುವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.  ಬೆಂಕಿ ಹೊತ್ತಿಕೊಂಡು ಶೇ. 70ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿದ್ದವು. ಸ್ಥಳೀಯರು ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೂಲಿ ಮಾಡಿಕೊಂಡಿದ್ದ ರವಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.

ವಂಚನೆ ಮಾಡಿದ್ದಕ್ಕೆ 40 ಸಾವಿರ ದಂಡ, 3 ವರ್ಷ ಜೈಲು ಶಿಕ್ಷೆ

 ಮೈಸೂರು: ವಿಶ್ವಾಸ ದ್ರೋಹ ಹಾಗೂ ವಂಚನೆಯ ಪ್ರಕರಣದಲ್ಲಿ ಓರಿಯಂಟಲ್ ಬ್ಯಾಂಕ್ ಆ ಕಾಮರ್ಸ್ ಮಾಜಿ ವ್ಯವಸ್ಥಾಪಕ ವಕೀಲ ಬೆಂಕಿ ಚಿದಾನಂದ್ ಅವರಿಗೆ ಮೈಸೂರಿನ ೧ನೇ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯವು 40,000 ರೂ. ದಂಡದೊಂದಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.  ವಕೀಲನೂ ಆಗಿರುವ ಬೆಂಕಿ ಚಿದಾನಂದ ಲಷ್ಕರ್ ಮೊಹಲ್ಲಾದ ಅಕ್ಬರ್ ರಸ್ತೆಯ ನಿವಾಸಿ ಕೆ. ರಾಘು ಅವರಿಂದ 2012ರಲ್ಲಿ 20 ಸಾವಿರ ರೂ. ಸಾಲವಾಗಿ ಪಡೆದಿದ್ದರು. […]

ದಾವೋಸ್‍ ನಲ್ಲಿ BSY ನ್ಯೂ ಲುಕ್..

  ಸಿಎಂ ಯಡಿಯೂರಪ್ಪ ಸ್ವಿಟ್ಜರ್ಲ್ಯಾಂಡ್‍ ಪ್ರವಾಸ ಕೈಗೊಂಡಿದ್ದಾರೆ. ದಾವೋಸ್‍ ನಲ್ಲಿ ನಡೆಯುತ್ತಿರುವ ವರ್ಲ್ಡ್‍ ಎಕಾನಮಿ ಫೋರಮ್‍ ಸಮಾವೇಶದಲ್ಲಿ ಬಿಎಸ್‍ ವೈ ಪಾಲ್ಗೊಂಡಿದ್ದಾರೆ. ಇದೇ ಸ್ವಲ್ಪ ಬಿಡುವು ಮಾಡಿಕೊಂಡು ಸಿಎಂ ದಾವೋಸ್‍ ನ ರಸ್ತೆಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಈ ವೇಳೆ ಬಿಎಸ್‍ ವೈ ಡಿಫರೆಂಟ್‍ ಲುಕ್‍ ನಲ್ಲಿ ಕಾಣಿಸಿಕೊಂಡರು.

ಬಾಂಬ್ ಪತ್ತೆ ಅಣಕು ಪ್ರದರ್ಶನದಂತಿತ್ತು; ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ

 ಬಾಂಬ್ ಪತ್ತೆ ಅಣಕು ಪ್ರದರ್ಶನದಂತಿತ್ತು ಎಂದು ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.  ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿಣದ ಪೆಟ್ಟಿಗೆ ಪೌಡರ್ ತುಂಬಿದ್ದರು. ಕಟ್‍ ಆಗಿರುವ ವೈರ್ ಇತ್ತು. ಇದನ್ನು ಗಮನಿಸಿದರೆ ಅಣಕು ಪ್ರದರ್ಶನದಂತೆ ಭಾಸವಾಯಿತು ಎಂದರು.  ಸಮ್ಮಿಶ್ರ ಸರ್ಕಾರ ಇದ್ದ ವೇಳೆ  ಮಂಗಳೂರು ಶಾಂತಯುತವಾಗಿಯೇ ಇತ್ತು. ಆದರೆ, ಸಿಎಎ, ಎನ್‍.ಆರ್‍.ಸಿ ಕಾರಣಕ್ಕಾಗಿ ಶಾಂತಿಗೆ ಭಂಗವುಂಟಾಗಿದೆ. ಜ.19ರಿಂದ ಇದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಜನರನ್ನು ಭಯ ಭೀತರನ್ನಾಗಿ ಮಾಡಿ ಪ್ರಗತಿ ಕುಂಠಿತಗೊಳಿಸಬೇಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳೂರು ಬಾಂಬ್ ಪ್ರಕರಣ; ಘಟನೆಗೆ ಕಾರಣರಾದ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ- ಬಿಎಸ್‌ವೈ ಟ್ವೀಟ್

 ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಘಟನೆ ದುರದೃಷ್ಟಕರ. ಈ ಘಟನೆಗೆ ಕಾರಣರಾಗಿರುವ ಶಕ್ತಿಗಳನ್ನು ಮಟ್ಟಹಾಕಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ಟೀಟ್‍ ಮಾಡಿದ್ದಾರೆ.  ಭದ್ರತೆಗೆ ಭಂಗ ತರುವ ಯಾವುದೇ ರೀತಿಯ ಚಟುವಟಿಕೆಗಳನ್ನು ಸಹಿಸುವುದಿಲ್ಲ. ನಾಗರಿಕರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ ಎಂದು ಟ್ಟೀಟ್‍ ಮೂಲಕ ಅಭಯ ನೀಡಿದ್ದಾರೆ.

ಶಾಸಕರ ಅನರ್ಹತೆ ಅಧಿಕಾರ ಸ್ಪೀಕರ್‍ ಗೆ ಬೇಡ; ಸುಪ್ರೀಂ

ಸಂಸದರು ಮತ್ತು ಶಾಸಕರ ಅನರ್ಹತೆಗೊಳಿಸುವ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಆಡಳಿತ ಪಕ್ಷದ ಪರವಾಗಿರುವ ಸ್ಪೀಕರ್ ಅವರ ನಿರ್ಧಾರದಲ್ಲಿ ಪಕ್ಷಪಾತೀತ ನಿಲುವು ಹೇಗಿರುತ್ತದೆ ಎಂಬ ಪ್ರಶ್ನೆಗಳು ಏಳುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಅನರ್ಹತೆಯ ವಿಧಾನವನ್ನು ಹೆಚ್ಚು ನ್ಯಾಯಸಮ್ಮತವಾಗಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂಸದರು ಮತ್ತು ಶಾಸಕರನ್ನು ಅನರ್ಹಗೊಳಿಸುವ ವಿಶೇಷಾಧಿಕಾರವನ್ನ ಸ್ಪೀಕರ್​ಗೆ ನೀಡುವ ಬದಲು ಸ್ವತಂತ್ರ ಹಾಗೂ ಖಾಯಂ ಸಂಸ್ಥೆಯೊಂದಕ್ಕೆ ನೀಡುವುದು ಒಳ್ಳೆಯದು ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.  ಮಣಿಪುರದಲ್ಲಿ ಕಾಂಗ್ರೆಸ್ ಟಿಕೆಟ್​ನಿಂದ ಗೆದ್ದು ಬಳಿಕ […]

ರಾಜ್ಯದ ಇಬ್ಬರು ಮಕ್ಕಳಿಗೆ ಶೌರ್ಯ ಪ್ರಶಸ್ತಿ

ಪ್ರಸಕ್ತ ಸಾಲಿನ ರಾಷ್ಟ್ರೀಯ ಶೌರ್ಯ ಪುರಸ್ಕಾರ ಪಟ್ಟಿ ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ಮಕ್ಕಳಿಗೆ ಪ್ರಶಸ್ತಿ ಘೋಷಣೆಯಾಗಿದೆ.  ಕಳೆದ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ತಲೆದೋರಿದ್ದ ಪ್ರವಾಹ ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ ಗೆ ದಾರಿಸಿ, ಐವರನ್ನು ರಕ್ಷಿಸಿದ್ದ ಬಾಲಕ ವೆಂಕಟೇಶ್ ಗೆ ಶೌರ್ಯ ಪ್ರಶಸ್ತಿ ಸಿಕ್ಕಿದೆ. ವೆಂಕಟೇಶ, ದೇವದುರ್ಗ ತಾಲ್ಲೂಕಿನ ಸಂಕನೂರು ಗ್ರಾಮದವರು. ಇನ್ನು ಕೋಪೋದ್ರಿಕ್ತ ಹಸುವಿನ ದಾಳಿಯಿಂದ ಮನೆಯ ಬಳಿ ನಿಂತಿದ್ದ ಎರಡು ವರ್ಷದ ತಮ್ಮನನ್ನು ರಕ್ಷಿಸಿದ್ದ ಹೊನ್ನಾವರ ತಾಲ್ಲೂಕಿನ ನವಿಲಗೋಣ ಗ್ರಾಮದ ಆರತಿ ಕೂಡಾ ಈ ಪುರಸ್ಕಾರಕ್ಕೆ […]