You cannot copy content of this page.
. . .

Category: ವಿಜ್ಞಾನ ಮತ್ತು ತಂತ್ರಜ್ಞಾನ

ಇನ್ಮುಂದೆ ಯಾವುದೇ ಎಟಿಎಂನಲ್ಲೂ ಹಣ ಜಮೆ ಮಾಡಬಹುದು..!

   ಈಗ ನಮ್ಮ ಬ್ಯಾಂಕ್‍ ಖಾತೆಗೆ ನಗದು ಜಮೆ ಮಾಡಬೇಕೆಂದರೆ ಯಾವ ಬ್ಯಾಂಕ್‍ ನಲ್ಲಿ ಖಾತೆ ಹೊಂದಿದ್ದೇವೆಯೋ ಅದೇ ಬ್ಯಾಂಕ್‍ ಗೆ ಸೇರಿದ ಹಣ ಪಾವತಿ ಯಂತ್ರವನ್ನು ಹುಡುಕಿಕೊಂಡು ಹೋಗಬೇಕು. ಆದರೆ ಇನ್ಮುಂದೆ ಆ ಸಂಕಷ್ಟ ಇರುವುದಿಲ್ಲ. ಯಾವುದೇ ಬ್ಯಾಂಕಿನ ಹಣ ಜಮೆ ಮಾಡುವ ಯಂತ್ರದಲ್ಲೂ ಹಣ ಜಮೆ ಮಾಡೋದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಸಮೀಪದ ಯಾವುದೇ ಬ್ಯಾಂಕ್‌ ಶಾಖೆಗಳು ಅಥವಾ ಎಟಿಎಂಗಳಲ್ಲಿರುವ ಹಣ ಜಮೆ ಮಾಡುವ ಯಂತ್ರಗಳಲ್ಲಿ ಯಾವುದೇ ಬ್ಯಾಂಕಿನ ಗ್ರಾಹಕರಾದರೂ ಹಣ ಕಟ್ಟುವ ಅವಕಾಶ ಇದು. […]

ಮದುವೆಯಲ್ಲಿ DUSTBIN ಉಡುಗೊರೆ, ಇಲ್ಲಿ ಮಕ್ಕಳೇ ಸ್ವಚ್ಛತಾ ರಾಯಭಾರಿಗಳು..!

  ಇಲ್ಲಿ ಮಕ್ಕಳೇ ಸ್ವಚ್ಛತೆಯ ರಾಯಭಾರಿಗಳು. ಪ್ರತಿ ಮನೆಯಲ್ಲೂ ಹಸಿ ಕಸ, ಒಣ ಕಸ ಬೇರ್ಪಡಿಸಿ ಇಡಲಾಗುತ್ತದೆ. ಪ್ರತಿದಿನ ಕಸ ವಿಲೇವಾರಿ ನಡೆಯುತ್ತದೆ. ಮದುವೆಯಲ್ಲಿ ಡಸ್ಟ್ಬಿನ್‌ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ! ಇದು ಮಧ್ಯಪ್ರದೇಶದ ಇಂಧೋರ್‌ನ ಚಿತ್ರಣ. ಕಳೆದ ಮೂರು ಬಾರಿಯಿಂದ ಸತತವಾಗಿ ಸ್ವಚ್ಛ ನಗರಿ ಪಟ್ಟ ಪಡೆಯುತ್ತಾ ಬಂದಿರುವ ಮಧ್ಯಪ್ರದೇಶದ ಇಂಧೋರ್ ನಗರದಲ್ಲಿ ನಾವೂ ಊಹಿಸಲೂ ಆಗದ ಸರಳ ವಿಧಾನಗಳನ್ನು ಬಳಸಿಕೊಂಡು ಸ್ವಚ್ಛತೆ ಕಪಾಡಿಕೊಳ್ಳಲಾಗುತ್ತಿದೆ. ಅಲ್ಲಿನ ನಗರಪಾಲಿಕೆಯೊಂದಿಗೆ ಜನರು ಕೈಜೋಡಿಸಿ ತಮ್ಮ ನಗರವನ್ನು ಸ್ವಚ್ಛವಾಗಿರಿಸಿಕೊಂಡಿದ್ದಾರೆ. ಇಂಧೋರ್ ೧೯ -೨೦ […]

ಇಂದು ತೋಳ ಚಂದ್ರಗ್ರಹಣ; ತೋಳಕ್ಕೂ ಗ್ರಹಣಕ್ಕೂ ಏನು ಸಂಬಂಧ..?

   ಇಂದು ವರ್ಷದ ಮೊದಲ ಚಂದ್ರಗ್ರಹಣ. ಇದನ್ನ ತೋಳ ಚಂದ್ರಗ್ರಹಣ ಅಂತಾನೂ ಕರೆಯುತ್ತಾರೆ. ಈ ಗ್ರಹಣ ಇವತ್ತು ರಾತ್ರಿ 10-37ಕ್ಕೆ ಆರಂಭವಾಗುತ್ತದೆ. ರಾತ್ರಿ 12.40ಕ್ಕೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಲಿದೆ. ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲಿಯೂ ಗ್ರಹಣ ಗೋಚರಿಸಲಿದ್ದು, ಬೆಳಗಿನ ಜಾವ 2.42ಕ್ಕೆ ಗ್ರಹಣ ಮೋಕ್ಷವಾಗಲಿದೆ.   ಅಂದಹಾಗೆ ತೋಳ ಚಂದ್ರಗ್ರಹಣ ಅಂದರೆ ಏನು..? ತೋಳಕ್ಕೂ ಗ್ರಹಣಕ್ಕೂ ಸಂಬಂಧವೇನು..? ನಿಮಗೂ ಈ ಕುತೂಹಲ ಉಂಟಾಗಿರಬಹುದು. ದಂತ ಕಥೆಗಳ ಪ್ರಕಾರ ಹಾಗೂ ಪುರಾಣಗಳ ಪ್ರಕಾರ ಜನವರಿ ತಿಂಗಳ […]

ಸ್ವಚ್ಛತೆಗೆ ಇಂಧೋರ್ ಜನರ 7 ಹವ್ಯಾಸಗಳು, 4 ಸೂತ್ರಗಳು..!

  ಕಳೆದ 3 ವರ್ಷಗಳಿಂದ ಇಂಧೋರ್‍ ನಗರ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಯಾಕಂದ್ರೆ ಇಂಧೋರ್ ಸ್ವಚ್ಛವಾಗಿಟ್ಟುಕೊಳ್ಳಲು ಅಲ್ಲಿನ ಜನರು 7 ಪ್ರಮುಖ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಜೊತೆಗೆ 4 ಸೂತ್ರಗಳನ್ನು ಅನುಸರಿಸಿಕೊಂಡಿದ್ದಾರೆ. ಇದನ್ನು ಮೈಸೂರಿನ ಜನರೂ ಅನುಸರಿಸಿದರೆ ನಮ್ಮ ನಗರವೂ ಸ್ವಚ್ಛವಾಗುವುದರಲ್ಲಿ ಅನುಮಾನವಿಲ್ಲ. 1. ಪ್ರತಿದಿನ ನಡೆಯುತ್ತದೆ ಕಸ ವಿಲೇವಾರಿ:   ಮುಂಚೆ ನಗರಪಾಲಿಕೆ ರಸ್ತೆಯಲ್ಲಿ ಕಸದ ಬುಟ್ಟಿಗಳನ್ನಿಟ್ಟು ಅದರಲ್ಲಿ ಕಸ ಹಾಕಲು ಜನರಿಗೆ ಹೇಳಿತ್ತು. ಆ ಪ್ರಯತ್ನ ಫಲಕಾರಿಯಾಗದ ಕಾರಣ ಜನರು ತಮ್ಮ […]

4 ತಿಂಗಳಾದ್ರೂ ಕೆಡಲ್ಲ ಟೊಮ್ಯಾಟೋ; ಮೈಸೂರಿನ ಸಂಸ್ಥೆಯಿಂದ ಅದ್ಭುತ ಟೆಕ್ನಾಲಜಿ

    ಟೊಮ್ಯಾಟೋ ಬೆಳೆಗಾರರು ಯಾವಾಗಲೂ ಬೆಲೆ ಕುಸಿತದಿಂದ ಕಂಗಾಲಾಗುತ್ತಾ ಕುಳಿತಿರುತ್ತಾರೆ. ಸೂಕ್ತ ಬೆಲೆ ಸಿಗದೇ ಟೊಮ್ಯೊಟೊವನ್ನು ಬೀದಿಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುತ್ತಾರೆ. ರೈತರ ಈ ಸಮಸ್ಯೆಗೆ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CFTRI) ಪರಿಹಾರ ಕಂಡುಹಿಡಿದಿದೆ. ಅತಿ ಕಡಿಮೆ ವೆಚ್ಚದಲ್ಲಿ ಟೊಮ್ಯಾಟೊವನ್ನು 4 ತಿಂಗಳಿಗೂ ಹೆಚ್ಚು ಕಾಲ ಕೆಡದಂತೆ ಸಂಗ್ರಹಿಸಿಡುವ ತಂತ್ರಜ್ಞಾನ ಇದಾಗಿದೆ. ಇದು ಮೈಸೂರಿಗೆ ಹೆಮ್ಮೆ ತರುವಂತಹ ಮತ್ತೊಂದು ಅದ್ಭುತ ಸಾಧನೆ.   ಇದಕ್ಕೆ ಕೋಲ್ಡ್‍ ಸ್ಟೋರೇಜ್‍ ಅವಶ್ಯಕತೆ ಇಲ್ಲ, ಯಾವುದೇ ದುಬಾರಿ […]

ಮಲ್ಟಿಸ್ಪೆಕ್ಟ್ರಲ್‍ ನಲ್ಲಿ ಅಚ್ಚಾಗಲಿವೆ ತಾಳೆಗರಿಗಳು..!

  ಮೈಸೂರು ನಗರದ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿರುವ ಅಪೂರ್ವ ಗ್ರಂಥಗಳು ಕೆಲವೇ ವರ್ಷಗಳಲ್ಲಿ ಜನಸಾಮಾನ್ಯರಿಗೂ ಓದಲು ಸಿಗಲಿದೆ! ಹೌದು, ಇದಕ್ಕಾಗಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಬುಧವಾರ ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ಸಂಸದ ಪ್ರತಾಪ್ ಸಿಂಹ, ತಾರಾ ಪ್ರಕಾಶನದ ಸಂಸ್ಥಾಪಕ ಡಾ.ಮುಕುಂದ್ ಹಾಗೂ ಡಾ.ಚೇತನ್ ಆಗಮಿಸಿ ಹಳೆಯ ತಾಳೆಗರಿಗಳನ್ನು ಹಾಗೂ ಅದರಲ್ಲಿರುವ ವಿಚಾರಗಳನ್ನು ಸಂರಕ್ಷಿಸಲು ಹೊಸ ತಂತ್ರಜ್ಞಾನಗಳನ್ನು ಬಳಸುವ ಬಗ್ಗೆ ಚರ್ಚೆ ನಡೆಸಿದರು. ಮಾಸಿದ ತಾಳೆಗರಿಗಳ ಅಕ್ಷರಕ್ಕೆ ಹೊಸ ರೂಪ!: ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಸಾಕಷ್ಟು ಪುರಾತನ […]

ಗಗನಯಾನಿಗಳಿಗೆ ಮೈಸೂರಿನಲ್ಲಿ ಸಿದ್ಧವಾಗ್ತಿದೆ ಆಹಾರ..!

ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. 2022ರೊಳಗೆ ಗಗನಯಾನ ನಡೆಯಲಿದ್ದು, ಈಗಾಗಲೇ ಇದಕ್ಕಾಗಿ ನಾಲ್ವರು ಗಗನಯಾನಿಗಳನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತದೆ. 5 ರಿಂದ 7 ದಿನಗಳ ಕಾಲ ಗಗನಯಾನ ನಡೆಸಲಿರುವ ಗಗನಯಾತ್ರಿಗಳಿಗೆ ಮೈಸೂರಿನಲ್ಲಿ ಆಹಾರ ತಯಾರಿಸಲಾಗುತ್ತದೆ ಎಂಬುದು ಹೆಮ್ಮೆಯ ಸಂಗತಿ.  ಹೌದು, ಮೈಸೂರಿನಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‍ ಎಲ್‍) ಗಗನಯಾನಿಗಳಿಗಾಗಿ ಆಹಾರ ಪದಾರ್ಥಗಳು ಮತ್ತು ಆಹಾರ ಹೀಟರ್‌ಗಳನ್ನು ಸಿದ್ಧಪಡಿಸುತ್ತಿದೆ ಎಂದು ತಿಳಿದು ಬಂದಿದೆ. ಎಗ್ ರೋಲ್ಸ್, […]

ಜನವರಿ 10ಕ್ಕೆ ವರ್ಷದ ಮೊದಲ ಚಂದ್ರಗ್ರಹಣ

  ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದ್ದ ನಾವು ಇದೀಗ 2020ನೇ ವರ್ಷದ ಮೊದಲ ಚಂದ್ರಗ್ರಹಣ ವೀಕ್ಷಣೆಗೆ ಸಿದ‍್ಧವಾಗಬೇಕಿದೆ. 21ನೇ ಶತಮಾನದ 3ನೇ ದಶಕದ ಮೊದಲ ಚಂದ್ರಗ್ರಹಣ ವೀಕ್ಷಣೆಗೆ ಕ್ಷಣಗಣನೆ ಶುರುವಾಗಿದೆ. ಜ.10ರಂದು ಚಂದ್ರಗ್ರಹಣ ಸಂಭವಿಸಲಿದ್ದು,  ಸುಮಾರು 4 ಗಂಟೆ 5 ನಿಮಿಷದ ಕಾಲ ಇರಲಿದೆ. ಭಾರತದಲ್ಲೂ ಈ ಚಂದ್ರಗ್ರಹಣ ಗೋಚರಿಸಲಿದ್ದು, ಇದಕ್ಕೆ ‘ತೋಳ ಚಂದ್ರಗ್ರಹಣ’ ಎಂದೂ ಕರೆಯಲಾಗುತ್ತದೆ.   ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಉಂಟಾಗುವ ಈ ವಿದ್ಯಮಾನ, ವೀಕ್ಷಣೆಗೆ ಅತ್ಯಾಕರ್ಷಕವಾಗಿರುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು […]

ಮಂಡ್ಯದಲ್ಲಿ ಕನಸಿನ ಮನೆ ಲಿಫ್ಟ್ ಮಾಡಿ ಸ್ಥಳಾಂತರಕ್ಕೆ ಸಜ್ಜು..

 ಕನಸಿನ ಮನೆಯನ್ನು ಉಳಿಸಿಕೊಳ್ಳಲು ಮಂಡ್ಯದ ವ್ಯಕ್ತಿಯೊಬ್ಬರು ಮನೆಯನ್ನು ಲಿಫ್ಟ್‍ ಮಾಡಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ 20 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರೆ.    ಕೋಣನಹಳ್ಳಿಯ ಮಲ್ಲಿಕಾರ್ಜುನ್ 5 ವರ್ಷದ ಹಿಂದೆ ವಿ.ಸಿ.ಫಾರಂ ಮಾರ್ಗದಲ್ಲಿ 36 ಚದರ ಅಡಿಯಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಆದರೆ ಇತ್ತೀಚೆಗೆ ಆರಂಭವಾದ ಬೈಪಾಸ್ ರಸ್ತೆ ಕಾಮಗಾರಿಯಿಂದಾಗಿ ಮನೆಯ ಅರ್ಧ ಭಾಗವನ್ನೇ ಒಡೆಯಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಇಷ್ಟಪಟ್ಟು ಕಟ್ಟಿದ ಮನೆ ಒಡೆಯಲು ಮನಸ್ಸಿಲ್ಲದೆ ಮಾಲೀಕ ಮಲ್ಲಿಕಾರ್ಜುನ್, ಲಿಫ್ಟಿಂಗ್ ವಿಧಾನದ ಮೂಲಕ ಮನೆಯನ್ನು ಸ‍್ಥಳಾಂತರಿಸಲು […]

ನಿಂಬೆಹಣ್ಣು, ಆಲೂಗೆಡ್ಡೆಯಿಂದ ವಿದ್ಯುತ್ ಉತ್ಪಾದನೆ..!

 ಮೈಸೂರು: ಅಡುಗೆಗೆ ಬಳಕೆಯಾಗುತ್ತಿದ್ದ ಆಹಾರ ಪದಾರ್ಥಗಳು ವಿದ್ಯುತ್‍ ಉತ್ಪಾದನೆಗೆ ಬಳಕೆಯಾಗುವುದನ್ನು ಎಲ್ಲಾದರೂ ನೋಡಿದ್ದೀರಾ? ಈ ಮಾತು ಕೇಳಿ ನಿಮಗೆ ಅಚ್ಚರಿಯಾಗದೇ ಇರದು. ಹೌದು, ಇಂಥದ್ದೊಂದು ವಿಶೇಷ ಸಂಶೋಧನೆಯನ್ನು ವಿದ್ಯಾರ್ಥಿಗಳು ಮಾದರಿ ರೂಪದಲ್ಲಿ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.  ಮಕ್ಕಳು ನಿಂಬೆಹಣ್ಣು, ಆಲೂಗೆಡ್ಡೆಯನ್ನು ಬಳಸಿ ವಿದ್ಯುತ್‍ ಉತ್ಪಾದಿಸಿ ಅದಕ್ಕೆ ‘ವಿದ್ಯುತ್‍ ಕೋಶ’ ಎಂದು ಹೆಸರಿಟ್ಟಿದ್ದಾರೆ. ಇದರೊಂದಿಗೆ ಕಾಲಚಕ್ರವನ್ನು ಕೊಡೆಯ ರೂಪದಲ್ಲಿ ಚಿತ್ರಣ, ದೇಹದ ಅಂಗಾಂಗ ಮಾದರಿ ರೂಪಿಸುವ ಮೂಲಕ ವಿಜ್ಞಾನ ಲೋಕವನ್ನೇ ಅನಾವರಣಗೊಳಿಸಿದ್ದಾರೆ.  ಮೈಸೂರು ತಾಲ್ಲೂಕಿನ ಹಡಜನ ಸರ್ಕಾರಿ ಪ್ರಾಥಮಿಕ […]