You cannot copy content of this page.
. . .

Category: ವಾಣಿಜ್ಯ

ಕೃಷಿ ಕ್ಷೇತ್ರಕ್ಕೆ 16 ಅಂಶಗಳ ಕಾರ್ಯಕ್ರಮ

 ಈ ಬಾರಿ ಕೇಂದ್ರ ಬಜೆಟ್‍ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿ ಕ್ಷೇತ್ರದ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಈ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ 16 ಅಂಶಗಳ ಯೋಜನೆ ಪ್ರಕಟಿಸಲಾಗಿದೆ. ಆ ಕಾರ್ಯಕ್ರಮಗಳ ವಿವರ ಹೀಗಿದೆ.  1) ಮಾದರಿ ಕೃಷಿ ಕಾನೂನುಗಳನ್ನು ಅಳವಡಿಸಲು ರಾಜ್ಯಗಳಿಗೆ ಉತ್ತೇಜನ 2) ಅತೀವ ಜಲಕ್ಷಾಮ ಇರುವ 100 ಜಿಲ್ಲೆಗಳ ಸಂಕಷ್ಟ ನೀಗಿಸಲು ಸಮಗ್ರ ಕ್ರಮ 3) ಸೌರ ವಿದ್ಯುತ್ ಬಳಕೆಗೆ ಉತ್ತೇಜಿಸಲು ಪ್ರಧಾನಿ ಕುಸುಮ್ ಯೋಜನೆ […]

ಪರಿಶಿಷ್ಟ ಜಾತಿ, ವರ್ಗಕ್ಕೆ 1.38 ಲಕ್ಷ ಕೋಟಿ ರೂಪಾಯಿ

  ಕೇಂದ್ರ ಬಜೆಟ್​ 2020ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಬಲೀಕರಣಕ್ಕಾಗಿ 1.38 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ.  ನಿರ್ಮಲಾ ಸೀತಾರಾಮನ್‍ ಸಂಸತ್​ನಲ್ಲಿ ಇಂದು ತಮ್ಮ ಎರಡನೇ ವಾರ್ಷಿಕ ಬಜೆಟ್ ಮಂಡಿಸಿ, ಬಜೆಟ್ ​ಮೇಲಿನ ಭಾಷಣದ ವೇಳೆ ಎಸ್​ಸಿ​-ಎಸ್​ಟಿ ಸಮಾಜದ ಅಭಿವೃದ್ಧಿಯ ಕುರಿತು ಸಮಗ್ರ ವಿವರಣೆ ನೀಡಿದರು. “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಸಬ್​ ಕಾ ಸಾಥ್ ಸಬ್ ಕಾ ವಿಕಾಸ್ ಸಬ್​ ಕಾ ವಿಶ್ವಾಸ್​’ ಎಂಬ ಘೋಷ ವಾಕ್ಯದ ಅಡಿಯಲ್ಲಿ ಸಮಾಜದ ಎಲ್ಲಾ ವರ್ಗದ […]

ಮಹಿಳಾ ಕಲ್ಯಾಣಕ್ಕಾಗಿ 28,600 ಕೋಟಿ ರೂಪಾಯಿ

 ಬಜೆಟ್​ ಮಂಡನೆಯ ಆರಂಭದಲ್ಲೇ ಯುವಜನರ ಉದ್ಯೋಗ, ಮಹಿಳೆಯರ ಸಬಲೀಕರಣ, ಮಕ್ಕಳ ಕಲ್ಯಾಣಕ್ಕೆ ಆದ್ಯತೆ ನೀಡಿರುವುದಾಗಿ ಘೋಷಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಕಲ್ಯಾಣಕ್ಕಾಗಿ 28,600 ಕೋಟಿ ರೂ. ಮೀಸಲಿಟ್ಟಿದ್ದಾರೆ.  ಈ ಬಾರಿಯ ಕೇಂದ್ರದ ಬಜೆಟ್‍ ​ನಲ್ಲಿ ಮಹಿಳಾ ಕಲ್ಯಾಣ ಇಲಾಖೆಗೆ 28,600 ಕೋಟಿ ರೂ. ಮೀಸಲಿಡಲಾಗಿದೆ. ಗರ್ಭಿಣಿಯರ ಸಾವನ್ನು ತಡೆಗಟ್ಟಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಹೊಸ ಟಾಸ್ಕ್​ಫೋರ್ಸ್​ ರಚಿಸಲಾಗುವುದು. ಅಂಗನವಾಡಿಗಳ ಮೂಲಕ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಿಸಲಾಗುವುದು ಎಂದು ಬಜೆಟ್​ನಲ್ಲಿ ಹಣಕಾಸು ಸಚಿವೆ ಸೀತಾರಾಮನ್‍ […]

ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ

ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ 99,300 ಕೋಟಿ ಹಾಗೂ ಕೌಶಲ್ಯ ಅಭಿವೃದ್ಧಿಗೆ 3,000 ಕೋಟಿ ಅನುದಾನ ನೀಡಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಶಿಕ್ಷಣ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ ನಿರ್ಮಲಾ ಸೀತಾರಾಮನ್ ಬಜೆಟ್‍ ನಲ್ಲಿ ಘೋಷಣೆ ಮಾಡಿದ್ದಾರೆ.  ಸಂಸತ್​ನಲ್ಲಿ ಇಂದು ತಮ್ಮ ಎರಡನೇ ವಾರ್ಷಿಕ ಬಜೆಟ್ ಮಂಡಿಸಿ, ಬಜೆಟ್ ಮೇಲಿನ ಭಾಷಣದ ವೇಳೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು. “ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಿದೆ. […]

ಮೂಲ ಸೌಕರ್ಯಕ್ಕೆ 103 ಲಕ್ಷ ಕೋಟಿ ರೂಪಾಯಿ ಅನುದಾನ

ಮೂಲ ಸೌಕರ್ಯ ಅಭಿವೃದ್ಧಿ; 103 ಲಕ್ಷ ಕೋಟಿ ರೂಪಾಯಿ ಆರೋಗ್ಯ ಕ್ಷೇತ್ರ – 69000 ಕೋಟಿ ರೂಪಾಯಿ ಮಹಿಳೆಯರ ಕಲ್ಯಾಣ – 28,600 ಕೋಟಿ ರೂಪಾಯಿ ಶಿಕ್ಷಣ ಕ್ಷೇತ್ರ ; 99,30 ಕೋಟಿ ರೂಪಾಯಿ ಹಿರಿಯ ನಾಗರಿಕರು, ದಿವ್ಯಾಂಗರು; 9500 ಕೋಟಿ ರೂಪಾಯಿ ಅಂತರ್ಜಲ ಮಟ್ಟ ಹೆಚ್ಚಳ; 11,500 ಕೋಟಿ ರೂಪಾಯಿ 2021ರಲ್ಲಿ ಶೇಕಡ 10ರ ದರದಲ್ಲಿ ಜಿಡಿಪಿ ಏರಿಕೆಯಾಗುವ ವಿಶ್ವಾಸ ಮಕ್ಕಳ ಪೌಷ್ಠಿಕತೆ : 35,500 ಕೋಟಿ ರೂಪಾಯಿ ಸಾರಿಗೆ ವಲಯ; 1.7 ಲಕ್ಷ ಕೋಟಿ […]

ಆದಾಯ ತೆರಿಗೆಯಲ್ಲಿ ಹಲವು ಬದಲಾವಣೆ

  ಕೇಂದ್ರ ಸರ್ಕಾರ ಆದಾಯ ತೆರಿಗೆದಾರರಿಗೆ ಸಿಹಿ ಸುದ್ದಿ ನೀಡಿದೆ. ಇದುವರೆಗೆ 2.5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇರಲಿಲ್ಲ. 2.5 ಲಕ್ಷ ರೂಪಾಯಿಯಿಂದ ಶೇ.10ರಷ್ಟು ತೆರಿಗೆ ಪಾವತಿಸಬೇಕಿತ್ತು. ಆದರೆ ಈಗ 2.5 ಲಕ್ಷದಿಂದ 5 ಲಕ್ಷದವರೆಗಿನ ಆದಾಯಕ್ಕೆ ಶೇ.5 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆ ವಿವರ ಈ ರೀತಿ ಇದೆ: 0 ಯಿಂದ 2.5 ಲಕ್ಷ ರೂಪಾಯಿಗೆ ಯಾವುದೇ ತೆರಿಗೆ ಇಲ್ಲ 2.5 ಲಕ್ಷ ದಿಂದ 5 ಲಕ್ಷ ರೂಪಾಯಿವರೆಗೆ ಶೇ.5ರಷ್ಟು ತೆರಿಗೆ 5 ಲಕ್ಷದಿಂದ […]

ಮೋದಿ ಸರ್ಕಾರದ 2020 ಲೆಕ್ಕಾಚಾರ

ಮೋದಿ ಸರ್ಕಾರದ 2020 ಲೆಕ್ಕಾಚಾರ ಇವತ್ತು ಕೇಂದ್ರ ಬಜೆಟ್‍ ಮಂಡನೆ ಮಾಡಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಜೆಟ್‌ ಬಗ್ಗೆ ಜನರಲ್ಲಿ ಕುತೂಹಲ ಮನೆಮಾಡಿದೆ. ಬಜೆಟ್‌ನ ಅಪ್‌ಡೇಟ್ಸ್‌ ಇಲ್ಲಿ.. ನಿರ್ಮಲಾ ಸೀತಾರಾಮನ್ ಭಾಷಣದ HIGHLIGHTS: ವೈಯಕ್ತಿಕ ಆದಾಯ ತೆರಿಗೆಯಿಂದ 40 ಸಾವಿರ ಕೋಟಿ ರೂಪಾಯಿ ನಿರೀಕ್ಷೆ ========== 5 ಲಕ್ಷದಿಂದ 7.5 ಲಕ್ಷ ದವರೆಗಿನ ಆದಾಯಕ್ಕೆ ಶೇ.10ರಷ್ಟು ತೆರಿಗೆ 7.5 ಲಕ್ಷದಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ.15 […]

ಹಾಲಿನ ದರ 2 ರೂ. ಹೆಚ್ಚಳ; ಫೆ.1ರಿಂದಲೇ ಜಾರಿ

  ಗ್ರಾಹಕರ ಜೇಬಿಗೆ ರಾಜ್ಯ ಸರ್ಕಾರ ಕತ್ತರಿ ಹಾಕಿದೆ. ನಂದಿನಿ ಹಾಲಿನ ದರ ಲೀಟರ್‍ ಗೆ 2 ರೂಪಾಯಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಫೆಬ್ರವರಿ 1 ರಿಂದಲೇ ಹೊಸ ದರ ಜಾರಿಗೆ ಬರಲಿದೆ.   ಲೀಟರ್‍ ಹಾಗೂ ಲೀಟರ್‍ ಮೊಸರಿಗೆ 2 ರೂಪಾಯಿ ಜಾಸ್ತಿಯಾಗಲಿದೆ. ಎಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಏರಿಕೆ ಮಾಡುವಂತೆ ಮನವಿ ಮಾಡಲಾಗಿತ್ತು. ಹೀಗಾಗಿ, ರಾಜ್ಯ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. […]

ನಾಳೆ, ನಾಡಿದ್ದು ಬ್ಯಾಂಕ್‍ ಬಂದ್

  ಬ್ಯಾಂಕ್‌ ಯೂನಿಯನ್‌ ಹಾಗೂ ವಿವಿಧ ಬ್ಯಾಂಕ್‍ ಸಂಘಟನೆಗಳು ನಾಳೆ ಹಾಗೂ ನಾಡಿದ್ದು ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರಕ್ಕೆ ಕರೆ ನೀಡಿವೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ಯೂನಿಯನ್‌ಗಳ ಒಕ್ಕೂಟ ಮುಷ್ಕರ ನಡೆಸುತ್ತಿದೆ.  ಹೀಗಾಗಿ, ನಾಳೆ, ನಾಡಿದ್ದು ಬಹುತೇಕ ಬ್ಯಾಂಕ್‍ ಗಳು ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೇ ಮಾರ್ಚ್‌ 11 ರಿಂದ 13ರವರೆಗೆ ಮೂರು ದಿನಗಳ ಕಾಲ ಪ್ರತಿಭಟನೆ ಕೂಡಾ ಹಮ್ಮಿಕೊಳ್ಳಲಾಗಿದೆ. ಜತೆಗೆ ಏಪ್ರಿಲ್‌ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಬ್ಯಾಂಕ್‍ ಯೂನಿಯನ್‍ ಹೇಳಿದೆ.

ದೇಶ ಸುತ್ತುವ ಪ್ರವಾಸಿಗರಿಗೆ ಕೇಂದ್ರದಿಂದ ಪ್ರಯಾಣ ವೆಚ್ಚ

  ವರ್ಷದಲ್ಲಿ ಕನಿಷ್ಠ 15 ಸ್ಥಳಗಳಿಗೆ ಭೇಟಿ ನೀಡಿರುವ ಪ್ರವಾಸಿಗರಿಗೆ ಕೇಂದ್ರ ಸರ್ಕಾರ ಪ್ರಯಾಣ ವೆಚ್ಚ ನೀಡಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಹೇಳಿದರು. ಕೋನಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರಾಷ್ಟ್ರೀಯ ಪ್ರವಾಸ ಸಮ್ಮೇಳನದ ಸಮಾರೋಪ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು.      2022 ರೊಳಗೆ ದೇಶದ 15 ಸ್ಥಳಗಳಲ್ಲಿ ಪ್ರವಾಸ ಕೈಗೊಂಡವರಿಗೆ ಪ್ರವಾಸೋದ್ಯಮ ಸಚಿವಾಲಯ ಪ್ರಯಾಣದ ಖರ್ಚು ನೀಡಲಿದೆ. ಸಚಿವಾಲಯದ ವೆಬ್‌ಸೈಟ್‌ಗೆ ಫೋಟೊ ಅಪ್‍ ಲೋಡ್‍ ಮೂಡುವ ಮೂಲಕ ಪ್ರೋತ್ಸಾಹ […]