You cannot copy content of this page.
. . .

Category: ವಾಣಿಜ್ಯ

ಒಂದೇ ಬೆಳೆ; ಕೋಟಿ ಒಡೆಯನಾದ ರೈತ..!

10 Views    ಕೃಷಿ ಮಾಡಿ ಲಕ್ಷದಲ್ಲಿ ಇರಲಿ, ಸಾವಿರದಲ್ಲೂ ಸಂಪಾದನೆ ಮಾಡುವುದಕ್ಕೆ ಆಗುವುದಿಲ್ಲ ಎಂಬುದು ರೈತರ ಅಳಲು. ಆದರೆ ಇಲ್ಲೊಬ್ಬ ರೈತ ಲಕ್ಷ ಅಲ್ಲ, ಕೋಟಿ ಲೆಕ್ಕದಲ್ಲಿ ಸಂಪಾದನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಒಂದೇ ಬೆಳೆಗೆ ಬರೋಬ್ಬರಿ 1 ಕೋಟಿ ರೂಪಾಯಿ ಲಾಭ ಸಂಪಾದಿಸಿದ್ದಾನೆ.   ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ ಕೂಡಾ ಎಲ್ಲಾ ರೈತರಂತೆ ಹಲವಾರು ಬಾರಿ ಕೈಸುಟ್ಟುಕೊಂಡಿದ್ದಾರೆ. ಆದರೆ ಈ ಬಾರಿ ಮಲ್ಲಿಕಾರ್ಜುನ ಅವರಿಗೆ ಬಂಪರ್‍ ಲಾಟರಿ ಹೊಡೆದಿದೆ. 20 […]

LPG ದರ 4 ತಿಂಗಳಲ್ಲಿ 108 ರೂ. ಏರಿಕೆ..!

77 Views   ಈರುಳ್ಳಿ ದರ ಏರಿಕೆ ಬೆನ್ನಲ್ಲೇ ಅಡುಗೆ ಅನಿಲ ದರ ಸತತ ನಾಲ್ಕನೇ ತಿಂಗಳೂ ಏರಿಕೆಯಾಗಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಕರ್ನಾಟಕದಲ್ಲಿ ಕಳೆದ 4 ತಿಂಗಳಿಂದ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‍ ದರ 108 ರೂಪಾಯಿ ಏರಿಕೆಯಾಗಿದೆ. ಡಿಸೆಂಬರ್‍ 1ರಿಂದ 13.30ರೂಪಾಯಿ ಏರಿಕೆಯಾಗಿದ್ದು, ಸದ್ಯ ಬೆಂಗಳೂರು ಮತ್ತು ಮೈಸೂರಿನಲ್ಲಿ LPG ದರ 701 ರೂಪಾಯಿಯಾಗಿದೆ. ಡಿಸೆಂಬರ್‍ 1ರಿಂದಲೇ ಹೊಸ ದರ ಜಾರಿಯಾಗಿದೆ.   ದೇಶದ ವಿವಿಧ ರಾಜ್ಯಗಳಲ್ಲಿ LPG ದರ 13.20 ರೂಪಾಯಿಯಿಂದ 13.45 […]

ಮೈಸೂರಿನಿಂದ ಬೆಂಗಳೂರಿಗೆ ಚಿತ್ರನಗರಿ ಶಿಫ್ಟ್; ಹೋಟೆಲ್ ಮಾಲೀಕರ ಸಂಘ ಆಕ್ರೋಶ

59 Views  ಚಿತ್ರನಗರಿಯನ್ನು ಮೈಸೂರಿನಿಂದ ಬೆಂಗಳೂರಿಗೆ ಶಿಫ್ಟ್‍ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಮೈಸೂರು ಜಿಲ್ಲಾ ಹೋಟೆಲ್‍ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ.   ಮೈಸೂರು ಪ್ರೆಸ್‍ ಕ್ಲಬ್‍ ನಲ್ಲಿ ಸುದ್ದಿಗೋಷ್ಠಿ ನಡೆಸಿದ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ, ಮೈಸೂರಿನಲ್ಲಿ ಪ್ರವಾಸೋದ್ಯಮವನ್ನೇ ನಂಬಿಕೊಂಡು ಸಾವಿರಾರು ಕುಟುಂಬ ಬದುಕುತ್ತಿದೆ. ಈಗಾಗಲೇ ಮೈಸೂರಿನ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಬೇರೆಡೆಗೆ ಸ್ಥಳಾಂತರವಾಗಿವೆ. ಚಿತ್ರನಗರಿಯನ್ನೂ ಸ್ಥಳಾಂತರ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.   ಎರಡು ವರ್ಷಗಳ ಹಿಂದೆ […]

ಯಾರು ಈ ಎಡ್ವಿನ್ ವ್ಯಾನ್ ಇಂಗೇನ್..? ಆ 117 ಕೋಟಿ ರೂ. ಆಸ್ತಿಯ ಗುಟ್ಟೇನು..?

62 Views ಮೈಸೂರಿನಲ್ಲಿ ನೆಲೆಸಿದ್ದ ಖ್ಯಾತ ವನ್ಯಜೀವಿ ಚರ್ಮ ಪ್ರಸಾದನ ತಜ್ಞ ಎಡ್ವಿನ್‌ ಜೋಬರ್ಟ್‌ ವ್ಯಾನ್‍ ಇಂಗೇನ್‍ ಅವರಿಗೆ ಸೇರಿದ್ದ 117.87 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮೈಕೆಲ್‍ ಫ್ಲಾಯ್ಡ್‍ ಈಶ್ವರ್‍ ಎಂಬಾತ ಕಬಳಿಸಿದ್ದ. ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಯ ಅಧೀನದಲ್ಲಿದ್ದ ಎಲ್ಲಾ ಆಸ್ತಿಯನ್ನೂ ವಶಪಡಿಸಿಕೊಂಡಿದ್ದಾರೆ. ಕೇರಳದ ವಯನಾಡಿನಲ್ಲಿರುವ 220.19 ಎಕರೆ ಕಾಫಿ ಪ್ಲಾಂಟೇಷನ್‍ ಹಾಗೂ ಮೈಸೂರಿನ ಹೈದರ್‌ ಅಲಿ ರಸ್ತೆಯಲ್ಲಿರುವ ‘ಬಿಸ್ಸಲ್‌ ಮುಂಟಿ‘ ವ್ಯಾನ್‍ ಇಂಗೇನ್‍ ಕಟ್ಟಡ ಮತ್ತು ರೋಸ್‌ವುಡ್‌ನಿಂದ ತಯಾರಿಸಿದ ಪಿಠೋಪಕರಣಗಳು, ಸತ್ತ ವನ್ಯಜೀವಿಗಳ ಚರ್ಮದಿಂದ ತಯಾರಿಸಿದ 70 […]

ಸುವರ್ಣ ರಥ ರೈಲು ಪುನಾರಂಭ; ಮೈಸೂರಿಗೂ ಬರಲಿದೆ ಐಶಾರಾಮಿ ಟ್ರೇನ್..

70 Views    ನಷ್ಟದ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ದಕ್ಷಿಣ ಭಾರತದ ಏಕೈಕ ರೈಲು ಸುವರ್ಣ ರಥ (ಗೋಲ್ಡನ್‍ ಚಾರಿಯೆಟ್‍) ವನ್ನು ಪುನಾರಂಭ ಮಾಡಲು ರೈಲ್ವೆ ಇಲಾಖೆ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ಧಾರ ಮಾಡಿದೆ. ಕರ್ನಾಟಕ, ಕೇರಳ, ಪುದುಚೇರಿ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ 2020ರ ಮಾರ್ಚ್‌ನಿಂದ ಸುವರ್ಣ ರಥ ಓಡಾಟ ನಡೆಸಲಿದೆ. ಸಂತಸದ ಸುದ್ದಿ ಅಂದರೆ ಸುವರ್ಣ ರಥ ಮೈಸೂರಿಗೂ ಆಗಮಿಸಲಿದೆ. ಬಂಡೀಪುರ, ಮೈಸೂರು, ಹಳೇಬಿಡು, ಚಿಕ್ಕಮಗಳೂರು, ಹಂಪಿ, ಬಿಜಾಪುರಗಳಲ್ಲೂ ಸಂಚಾರ ನಡೆಸಲಿದೆ.   ಸುವರ್ಣ ರಥ […]

ಗಾಳಿಯಿಂದ ನೀರು ಉತ್ಪಾದನೆ; ಟೇಸ್ಟ್ ನೋಡಿ ಖುಷಿ ಪಟ್ಟ ಯಧುವೀರ್

84 Views    ವಾತಾವರಣದಲ್ಲಿ ತೇವಾಂಶವಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲ ಪ್ರಗತಿ ಪರ ರೈತರು ಗಾಳಿಯಲ್ಲಿನ ತೇವಾಂಶವನ್ನೇ ಬಳಸಿಕೊಂಡು ಬೆಳೆ ಬೆಳೆದು ತೋರಿಸಿದ್ದಾರೆ ಕೂಡಾ. ಆದರೆ ಸಂಶೋಧಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಗಾಳಿಯಲ್ಲಿನ ತೇವಾಂಶವನ್ನು ನೀರಾಗಿ ಪರಿವರ್ತಿಸಿ, ಕುಡಿಯುವುದಕ್ಕೆ ಬಳಸಬಹುದು ಅನ್ನೋದನ್ನು ಸಾಬೀತು ಮಾಡಿದ್ದಾರೆ. ಜರ್ಮನಿಯ ಗ್ರೀನ್‍ಟೆಕ್‍ ಆಕ್ವಾ ಎಂಬ ಕಂಪನಿ ಗಾಳಿಯಿಂದ ನೀರು ಉತ್ಪಾದಿಸುವ ಯಂತ್ರವನ್ನು ತಯಾರಿಸಿದ್ದು, ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಪ್ರದರ್ಶನಕ್ಕಿಟ್ಟಿತ್ತು.    ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್‍ 18 […]

ರಿಲಾಯನ್ಸ್ ಕಮ್ಯುನಿಕೇಷನ್ ದಿವಾಳಿ; ಅನಿಲ್‍ ಅಂಬಾನಿ ರಾಜಿನಾಮೆ

100 Views   ರಿಲಾಯನ್ಸ್ ಕಮ್ಯುನಿಕೇಷನ್‍ ನ ನಿರ್ಧೇಸಕ ಹುದ್ದೆಗೆ ಅನಿಲ್ ಅಂಬಾನಿ ರಾಜಿನಾಮೆ ನೀಡಿದ್ದಾರೆ. ಇವರ ಜೊತೆಗೆ ಛಾಯಾ ವಿರಾಣಿ, ರೀನಾ ಕರಾನಿ, ಮಂಜರಿ ಕಕ್ಕರ್ ಹಾಗೂ ಸುರೇಶ್ ರಾಘವಾಚಾರ್‍ ಕೂಡಾ ನಿರ್ದೇಶಕ ಮಂಡಳಿಯಿಂದ ಹೊರಬಂದಿದ್ದಾರೆ ಎಂದು ರಿಲಾಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆ ತಿಳಿಸಿದೆ.   ಅಕ್ಟೋಬರ್ 4 ರಂದು ಮಣಿಕಂಠನ್ . ವಿ ಅವರು ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನವನ್ನು ತ್ಯಜಿಸಿದ್ದರು. ಸುರೇಶ್‍ ರಾಘವಾಚಾರ್ ಅವರು ನವೆಂಬರ್‍ 13, ರೀನಾ ಕರಾನಿ ನವೆಂಬರ್ […]