You cannot copy content of this page.
. . .

Category: ಮೈಸೂರು

ಮೈಸೂರು: ಬೋರ್‌ವೆಲ್‌ನಲ್ಲಿ ಬರುವ ನೀರಿನಲ್ಲಿ ಇದೆಯೇ ಪೆಟ್ರೋಲ್‌ ಅಂಶ?

 ಮೈಸೂರು ಜಿಲ್ಲೆಯ ಸಿದ್ದಲಿಂಗಪುರದಲ್ಲಿರುವ ಮನೆಯೊಂದರ ಬೋರ್‌ವೆಲ್‌ನಲ್ಲಿ ಬರುವ ನೀರಿನಲ್ಲಿ ಪೆಟ್ರೋಲ್‌ ಅಂಶ ಇದೆ ಎಂಬ ವದಂತಿ ಹರಡಿದೆ.  ಇಲ್ಲಿನ ನಿವಾಸಿ ಪ್ರಕಾಶ್‌ ಎಂಬವರ ಮನೆಯಲ್ಲಿ ನೀರಿನಲ್ಲಿ ಪೆಟ್ರೋಲ್‌ ಅಂಶವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸುಮಾರು ೫ ವರ್ಷಗಳ ಹಿಂದೆ ಇವರ ಮನೆಯಲ್ಲಿ ಬೋರ್‌ವೆಲ್‌ ತೆಗೆಸಲಾಗಿತ್ತು. ಇತ್ತೀಚಿಗೆ ಅದರಲ್ಲಿ ಬರುವ ನೀರು ಪೆಟ್ರೋಲ್‌ ರೀತಿ ವಾಸನೆ ಹೊಮ್ಮಿಸುತ್ತಿದೆ. ಇದರಿಂದ ಅಚ್ಚರಿಗೊಂಡ ಮನೆಯವರು ಬೆಂಕಿ ಹಚ್ಚಿ ಅದಕ್ಕೆ ನೀರನ್ನು ಹಾಕಿದರೆ ಉರಿಯುತ್ತದೆ ಎಂದು ಹೇಳುತ್ತಿದ್ದಾರೆ.  ಈ ಅಚ್ಚರಿದಾಯಕ ಬೆಳವಣಿಗೆಯಿಂದ ನೀರಿನಲ್ಲಿ […]

ʻಪಾರಂಪರಿಕ ಉಳಿವಿಗಾಗಿ ಓಟʼ ಮ್ಯಾರಾಥಾನ್ ಉದ್ಘಾಟನೆ

 ಮೈಸೂರು: ಸೋಷಿಯಲ್ ಸೋಲ್ಜರ್ಸ್‌ ಆಫ್ ಇಂಡಿಯಾ ಸಂಸ್ಥೆ ವತಿಯಿಂದ ʻಪಾರಂಪರ ಉಳಿವಿಗಾಗಿ ಓಟʼ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಆಯೋಜಿಸಲಾಗುತ್ತಿದ್ದು, ಅದರ ಅಂಗವಾಗಿ ಭಾನುವಾರ ಮ್ಯಾರಾಥಾನ್ ಓಟದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.  ಭಾನುವಾರ ಬೆಳಿಗ್ಗೆ ನಗರದ ಅರಮನೆ ಮುಂಭಾಗವಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಮ್ಯಾರಾಥಾನ್ ಕಾರ್ಯಕ್ರಮಕ್ಕೆ ಬೋರಿಂಗ್ ಆಸ್ಪತ್ರೆಯ ಡಾ.ಶಂಕರಸೋಮಶೇಖರ್, ಬಿಜೆಪಿ ಮುಖಂಡ ಕ್ರಾಂತಿರಾಜ್ ಚಾಲನೆ ನೀಡಿದರು.  ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿಷ್ಣುಭಗವಾನ್, ನಮ್ಮ ದೇಶದ ಪರಂಪರೆಯನ್ನು ಉಳಿಸಬೇಕು. […]

ಕುಮಠಳ್ಳಿ ವಿಚಾರವಾಗಿ ರಮೇಶ್‌ ಜಾರಕಿಹೊಳಿ ಭಾವುಕವಾಗಿ ನುಡಿದಿದ್ದಾರೆ: ಸಚಿವ ಜಗದೀಶ್‌ ಶೆಟ್ಟರ್

 ಮೈಸೂರು: ಮಹೇಶ್‌ ಕುಮಠಳ್ಳಿ ವಿಚಾರವಾಗಿ ರಮೇಶ್‌ ಜಾರಕಿಹೊಳಿ ಅವರು ಭಾವುಕವಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ನಮ್ಮ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲವೂ ಸರಿಯಾಗಿದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ಅಭಿಪ್ರಾಯಪಟ್ಟರು.  ಕುಮಠಳ್ಳಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ರಾಜೀನಾಮೆ ನೀಡುತ್ತೇನೆ ಎಂಬ ರಮೇಶ್‌ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೆಲ್ಲಾ ಪಾಸಿಂಗ್ ವರ್ಡ್ಸ್ ಮಾಧ್ಯಮಗಳಲ್ಲಿ ಬರುವ ವಿಚಾರ ಅಷ್ಟೇ. ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಕುಮಠಳ್ಳಿಯನ್ನು ನಾನು ಕರೆದುಕೊಂಡು ಬಂದಿದ್ದೆ. ಅವರಿಗೆ ಸರಿಯಾದ […]

ಸೋಸಲೆ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಅರ್ಧ ಮನೆಯೇ ಭಸ್ಮ

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ಬಿದ್ದಿರುವ ಘಟನೆ ಟಿ ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಅರ್ಧ ಮನೆ ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿವೆ.ಟಿ ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದ ದಿ.ಎಸ್.ಎಂ.ಬಸವರಾಜು ಅವರ ಪತ್ನಿ ಎನ್.ಶಾರದ ಅವರು ಇಬ್ಬರು ಮಕ್ಕಳೊಂದಿಗೆ ಈ ಮನೆಯಲ್ಲಿ ವಾಸವಿದ್ದರು. ಫೆ.೧೯ರಂದು ಬುಧವಾರ ಬೆಳಿಗ್ಗೆ ೧೦.೪೫ರ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಲುಗಿದೆ. ಬೆಂಕಿಯ ಕೆನ್ನಾಲಿಗೆಗೆ […]

ಈಜಲು ಹೋದ ನಾಲ್ವರು ಬಾಲಕರ ದುರ್ಮರಣ

ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಶಾಲಾ ಬಾಲಕರು ನೀರುಪಾಲಾಗಿರುವ ಘಟನೆ ಎಚ್‌.ಡಿ.ಕೋಟೆ ತಾಲ್ಲೂಕಿನ ಮಲ್ಬಾರ್‌ ಗ್ರಾಮದಲ್ಲಿ ನಡೆದಿದೆ. ಕಿರಣ್‌, ಕೆಂಡಗಣ್ಣ, ಸಹೋದರರಾದ ರೋಹಿತ್‌ ಹಾಗೂ ಯಶವಂತ ಮೃತಪಟ್ಟ ಬಾಲಕರು.ಶಿವರಾತ್ರಿ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆಗೆ ರಜೆ ಇತ್ತು. ಹೀಗಾಗಿ ನಾಲ್ವರೂ ವಿದ್ಯಾರ್ಥಿಗಳು ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದರು. ಇದಾದ ಮೇಲೆ ಕೆರೆ ಏರಿ ಮೇಲೆ ಬಾಲಕರ ಬಟ್ಟೆ ಹಾಗೂ ಬೈಸಿಕಲ್‌ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಮಸ್ಥರು ಕೆರೆಯಲ್ಲಿ ಹುಡುಕಾಟ ನಡೆಸಿದರು. ಆ ವೇಳೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ.

ಅಮೂಲ್ಯ ಗಡಿಪಾರಿಗೆ ಒತ್ತಾಯಿಸಿ ಮೈಸೂರಲ್ಲಿ ಪ್ರತಿಭಟನೆ

ಪಾಕಿಸ್ತಾನಕ್ಕೆ ಜಿಂದಾಬಾದ್‌ ಎಂದು ದೇಶದ್ರೋಹಿ ಘೋಷಣೆ ಕೂಗಿದ ಅಮೂಲ್ಯರನ್ನು ಗಡಿಪಾರು ಮಾಡುವಂತೆ ಮೈಸೂರಿನ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಮೈಸೂರಿನ ಗೌನ್ ಹೌಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಅಮೂಲ್ಯ ವಿರುದ್ಧ ಘೋಷಣೆ ಕೂಗಿದರು. ಇಂತಹ ದೇಶದ್ರೋಹಿ ಹೇಳಿಕೆ ನೀಡುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸೇನಾಪಡೆ ಅಧ್ಯಕ್ಷ ತೇಜೇಶ್, ಲೋಕೇಶ್ ಗೌಡ, ಶಾಂತರಾಜೇ ಅರಸ್ ಇನ್ನಿತರರು ಭಾಗವಹಿಸಿದ್ದರು.

ನಂದಿ ವಿಗ್ರಹ, ನಾಲ್ವಡಿ ಪ್ರತಿಮೆಯಲ್ಲಿ ಬಿರುಕು; ಮೇಯರ್‌, ಉಪಮೇಯರ್‌ ಭೇಟಿ ಪರಿಶೀಲನೆ

 ಚಾಮುಂಡಿಬೆಟ್ಟದ ನಂದಿ ವಿಗ್ರಹ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ತಸ್ನೀಂ ಹಾಗೂ ಉಪಮೇಯರ್‌ ಶ್ರೀಧರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.  ಗುರುವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂದಿ ನಗರಪಾಲಿಕೆಯ ಲಾಂಛನವಾಗಿದೆ. ಅಲ್ಲದೇ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆ ಪಾಲಿಕೆ ನಿರ್ವಹಣೆ ವ್ಯಾಪ್ತಿಗೆ ಬರುತ್ತದೆ. ಬಿರುಕು ಸರಿಪಡಿಸುವ ಸಂಬಂಧ ಮೇಯರ್‌ ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ ಎನ್ನಲಾಗಿದೆ.

ಬಸ್ ಕಂಡಕ್ಟರ್ ಬಳಿ ಇದ್ದ ಹಣ ದೋಚಲು ಯತ್ನ

(ಸಾಂದರ್ಭಿಕ ಚಿತ್ರ)  ರಾವಂದೂರು: ಬಸ್ಸಿನಲ್ಲಿ ಮಲಗಿದ್ದ ನಿರ್ವಾಹಕನ ಹಣ ಕದಿಯಲು ಹೋಗಿ ನಿರ್ವಾಹಕರ ಮೇಲೆ ಹಲ್ಲೆ ನಡೆದ ಘಟನೆ ಜರುಗಿದೆ.  ಪಿರಿಯಾಪಟ್ಟಣ ತಾಲ್ಲೂಕು ಕಿತ್ತೂರು ಬಸ್ ನಿಲ್ದಾಣದಲ್ಲಿ ಪಿರಿಯಾಪಟ್ಟಣ ಘಟಕಕ್ಕೆ ಸೇರಿದ ಮಾರ್ಗಸಂಖ್ಯೆ 27 ಎ.ಬಿ. ಮಾರ್ಗದ ಬಸ್ಸು ಪಿರಿಯಾಪಟ್ಟಣ ತಾಲ್ಲೂಕಿನ ಕಿತ್ತೂರಿನಲ್ಲಿ ಮಂಗಳವಾರ ರಾತ್ರಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ, ಮಲಗಿದ್ದ ನಿರ್ವಾಹಕರ ಬಳಿ ಇದ್ದ ಹಣವನ್ನು ದೋಚಲು ವ್ಯಕ್ತಿಯೊಬ್ಬ ಪ್ರಯತ್ನಿಸಿದ್ದಾನೆ.  ತಕ್ಷಣ ನಿರ್ವಾಹಕ ಲೋಕೇಶ್ ಎಚ್ಚರಗೊಂಡು, ಚಾಲಕ ಚಂದನ್‌ಕುಮಾರ್ ಅವರನ್ನು ಏಳಿಸಲು ಪ್ರಯತ್ನಿಸಿದಾಗ ಅವರ ಮೇಲೆ […]

ತಮ್ಮಿಂದ ರಂಗಕಲೆ ಕಲಿತ ನಾಲ್ಕು ಮಂದಿಯ ಹೆಸರು ಹೇಳಲಿ ಕಾರ್ಯಪ್ಪ: ಜನ್ನಿ ಸವಾಲು

 ಮೈಸೂರು: ರಂಗಭೂಮಿಯಲ್ಲಿ ನಲವತ್ತು ವರ್ಷ ದುಡಿದಿದ್ದೇನೆ ಎಂದು ಹೇಳಿಕೊಳ್ಳುವ ಅಡ್ಡಂಡ ಕಾರ್ಯಪ್ಪ ಅವರು ತಮ್ಮಿಂದ ರಂಗಕಲೆ ಕಲಿತ ನಾಲ್ಕು ಮಂದಿಯ ಹೆಸರು ಹೇಳಲಿ ಎಂದು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ) ಸವಾಲು ಹಾಕಿದರು.  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಭೂಮಿಯಲ್ಲಿ ನಲವತ್ತು ವರ್ಷಗಳಿಂದ 400ಕ್ಕೂ ಹೆಚ್ಚು ಮಂದಿಗೆ ನಾನು ರಂಗಕಲೆ ಕಲಿಸಿದ್ದು, ಅವರ ಹೆಸರಗಳನ್ನು ಹೇಳುತ್ತೇನೆ. ಆದರೆ, ಕಾರ್ಯಪ್ಪ ಅವರು 4 ಮಂದಿಗೆ ಹೆಸರು ಹೇಳಲಿ ಸಾಕು ಎಂದು ಪಂಥಾಹ್ವಾನ ನೀಡಿದರು.  ನನ್ನ ವೈಯಕ್ತಿಕ ಜೀವನದ […]

ಬಹುರೂಪಿಗೆ ಎಡಪಂಥೀಯರೇ ಹೆಚ್ಚು ಬಂದಿದ್ದು ಸಂತಸ ತಂದಿದೆ: ಅಡ್ಡಂಡ ಕಾರ್ಯಪ್ಪ

 ಮೈಸೂರು: ನಾನು ರಂಗಾಯಣಕ್ಕೆ ಸಂಘರ್ಷಕ್ಕಾಗಿ ಬಂದಿಲ್ಲ. ಸಮಾನತೆಗಾಗಿ ಬಂದಿದ್ದೇನೆ. ನನ್ನನ್ನು ಟೀಕಿಸಿರುವವರನ್ನೂ ನಾನು ಪ್ರೀತಿಸುತ್ತೇನೆ. ಬಹುರೂಪಿಗೆ ಎಡಪಂಥದವರೇ ಹೆಚ್ಚು ಬಂದಿದ್ದರು ಎಂದು ಹೇಳಿಕೊಳ್ಳುವುದಕ್ಕೆ ನನಗೆ ಸಂತಸವಾಗುತ್ತದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ನುಡಿದರು.  ಕಲಾಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು 40 ವರ್ಷದಿಂದ ರಂಗಭೂಮಿಗಾಗಿ ಕೆಲಸ ಮಾಡುತ್ತಿದ್ದೇನೆ. ಯಾವ ಬಾವುಟ ನೆಡುವುದಕ್ಕೆ ಇಲ್ಲಿ ಬಂದಿಲ್ಲ. ನಮ್ಮ ಮಧ್ಯೆ ಭಿನ್ನಾಭಿಪ್ರಾಯಗಳಿದ್ದರೂ, ಅದನ್ನು ಒಪ್ಪಿಕೊಂಡು ಮುಂದೆ ನಡೆಯಬೇಕು. ಇದೇ ಪ್ರಜಾಪ್ರಭುತ್ವ ಎಂದು ಹೇಳಿದರು.  ನನಗೆ ಯಾವ ಹಿಡನ್ […]