You cannot copy content of this page.
. . .

Category: ಮೈಸೂರು

ವಂಚನೆ ಮಾಡಿದ್ದಕ್ಕೆ 40 ಸಾವಿರ ದಂಡ, 3 ವರ್ಷ ಜೈಲು ಶಿಕ್ಷೆ

 ಮೈಸೂರು: ವಿಶ್ವಾಸ ದ್ರೋಹ ಹಾಗೂ ವಂಚನೆಯ ಪ್ರಕರಣದಲ್ಲಿ ಓರಿಯಂಟಲ್ ಬ್ಯಾಂಕ್ ಆ ಕಾಮರ್ಸ್ ಮಾಜಿ ವ್ಯವಸ್ಥಾಪಕ ವಕೀಲ ಬೆಂಕಿ ಚಿದಾನಂದ್ ಅವರಿಗೆ ಮೈಸೂರಿನ ೧ನೇ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯವು 40,000 ರೂ. ದಂಡದೊಂದಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.  ವಕೀಲನೂ ಆಗಿರುವ ಬೆಂಕಿ ಚಿದಾನಂದ ಲಷ್ಕರ್ ಮೊಹಲ್ಲಾದ ಅಕ್ಬರ್ ರಸ್ತೆಯ ನಿವಾಸಿ ಕೆ. ರಾಘು ಅವರಿಂದ 2012ರಲ್ಲಿ 20 ಸಾವಿರ ರೂ. ಸಾಲವಾಗಿ ಪಡೆದಿದ್ದರು. […]

ಫೆ.೮ರಂದು ರಾಷ್ಟ್ರೀಯ ಲೋಕ ಅದಾಲತ್

 ಮೈಸೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಫೆ.೮ರಂದು ನಗರದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ಹೇಳಿದರು.  ಪ್ರಸ್ತುತ ಲೋಕ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಕ್ರಿಮಿನಲ್, ಸಿವಿಲ್, ಮೋಟಾರು ವಾಹನ ಅಪಘಾತ, ಕೌಟುಂಬಿಕ, ದೌರ್ಜನ್ಯ ತಡೆ ಕಾಯ್ದೆ, ಜೀವನಾಂಶ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ರಾಜೀ ಸಂಧಾನದ […]

ಸಂಪುಟ ವಿಸ್ತರಿಸಿದರೆ ಯಾವ ಸ್ಫೋಟವೂ ಆಗಲ್ಲ; ಸಿದ್ದು ಹೇಳಿಕೆಗೆ ಕಾರಜೊಳ ತಿರುಗೇಟು

  ಸಚಿವ ಸಂಪುಟ ವಿಸ್ತರಣೆಯಾದರೆ ಜಗತ್ತು ಪ್ರಳಯ ಆಗಿಬಿಡುವುದಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೆ ಡಿಸಿಎಂ ಗೋವಿಂದ ಎಂ.ಕಾರಜೋಳ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗುತ್ತೆ. ಆದರೆ ಸಿದ್ದರಾಮಯ್ಯ ಹೇಳುವಂತೆ ಸ್ಪೋಟವೂ ಆಗುವುದಿಲ್ಲ, ಏನು ಆಗುವುದಿಲ್ಲ ಎಂದರು.   ಸಿದ್ದರಾಮಯ್ಯ ಅವರು ಭ್ರಮೆಯಲ್ಲಿ ಇದ್ದಾರೆ. ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬುದನ್ನ ನಮ್ಮ‌ ನಾಯಕರು ನಿರ್ಧಾರ ಮಾಡುತ್ತಾರೆ. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಬೇಕು ಎಂಬುದು […]

ಇಂದಿನಿಂದ ಸುತ್ತೂರು ಜಾತ್ರೆ; ಹರಿದು ಬಂದ ಭಕ್ತಸಾಗರ

ಸುತ್ತೂರು ಕ್ಷೇತ್ರದಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಜನವರಿ 26ರವರೆಗೆ ಜಾತ್ರೆ ನಡೆಯಲಿದ್ದು, ಈಗಾಗಲೇ ಕ್ಷೇತ್ರ ಜಾತ್ರೆಗೆ ಅದ್ಭುತವಾಗಿ ಸಿದ್ಧಗೊಂಡಿದೆ. ಇಂದು ವೀರಭದ್ರೇಶ್ವರ ಕೊಂಡೋತ್ಸವ, 23ರಂದು ರಥೋತ್ಸವ, 24ರಂದು ಮಹದೇಶ್ವರ ಕೊಂಡೋತ್ಸವ, 25 ರಂದು ತೆಪ್ಪೋತ್ಸವ ಹಾಗೂ ಲಕ್ಷದೀಪೋತ್ಸವ, ಹಾಲ್ಹರವಿ ಉತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿವೆ.   ಬೆಳಗಿನಿಂದಲೇ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಭಕ್ತಾದಿಗಳಿಗಾಗಿ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. […]

ಸಿಎಎ ವಿರೋಧಿಸಿ ನಗರದಲ್ಲಿ ಎರಡು ಕಡೆ ಪ್ರತ್ಯೇಕ ಪ್ರತಿಭಟನೆ

 ಸಿಎಎ, ಎನ್‍.ಆರ್.ಸಿ ವಿರೋಧಿಸಿ ಮೈಸೂರು ನಗರದಲ್ಲಿ ಇಂದು (ಮಂಗಳವಾರ) ಎರಡು ಕಡೆ ಪ್ರತ್ಯೇಕ ಪ್ರತಿಭಟನೆಗಳು ನಡೆಯಿತು.  ಬೆಳಿಗ್ಗೆ ಪುರಭವನದ ಎದುರಿನ ದೊಡ್ಡ ಗಡಿಯಾರದ ಬಳಿ ಜಮಾವಣೆಗೊಂಡ ವೀ ದಿ ಸ್ಟುಡೆಂಟ್‍ ಆಫ್,‍ ಮೈಸೂರು ಪ್ರತಿಭಟನಾಕಾರರು ಆಜಾದಿ ಘೋಷಣೆ ಕೂಗಿದರು. ಮತ್ತೊಂದು ಸಂಘಟನೆಯಾದ ಸಂವಿಧಾನ ರಕ್ಷಣಾ ಸಮಿತಿಯು ಮಿಲಾದ್ ಪಾರ್ಕ್‍ ಬಳಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಿದರು. ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವಿಚಾರಣೆಗೆ ಮೈಸೂರು ಐ.ಟಿ ಕಚೇರಿಗೆ ಆಗಮಿಸಿದ ನಟಿ ರಶ್ಮಿಕಾ ಕುಟುಂಬ

 ದಕ್ಷಿಣ ಭಾರತ ಚಿತ್ರರಂಗದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಕುಟುಂಬಸ್ಥರು ಇಂದು ಮೈಸೂರಿನ ಐ.ಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.  ಐ.ಟಿ ನಿರ್ದೇಶನದಂತೆಯೇ ಇಂದು ಬೆಳಿಗ್ಗೆ ನಜರಾಬಾದ್‍ನಲ್ಲಿರುವ ಆದಾಯ ತೆರಿಗೆ ಆಯುಕ್ತರ  ಕಚೇರಿಗೆ ವಿಚಾರಣೆಗೆ ರಶ್ಮಿಕಾ ಮತ್ತು ಕುಟುಂಸ್ಥರು ಹಾಜರಾಗಿದ್ದಾರೆ. ಪ್ರಾದೇಶಿಕ ಆಯುಕ್ತ ಸಂಜಯ್‍ ಗಾಂಧಿ ನೇತೃತ್ವದಲ್ಲಿ ರಶ್ಮಿಕಾ ವಿಚಾರಣೆ ನಡೆಯಲಿದೆ. ರಶ್ಮಿಕಾ ಜೊತೆಯಲ್ಲಿ 9 ಮಂದಿ ಆಗಮಿಸಿದ್ದಾರೆ. ಎರಡು ಬ್ಯಾಗ್‍, ಒಂದು ಕಿಟ್‍ ಜೊತೆಯಲ್ಲಿ ಸಂಗಡಿಗರು ಬಂದಿದ್ದಾರೆ.  ಇತ್ತೀಚೆಗೆ ಮಡಿಕೇರಿಯ ವಿರಾಜಪೇಟೆಯಲ್ಲಿರುವ ನಟಿ ರಶ್ಮಿಕಾ ಅವರ […]

ಫ್ರೀ ಕಾಶ್ಮೀರ ಫಲಕ ವಿವಾದ; ವಿಚಾರಣೆ ಜನವರಿ 24ಕ್ಕೆ ಮುಂದೂಡಿಕೆ

  ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಸತ್ರ ನ್ಯಾಯಾಲಯ ಜನವರಿ 24ಕ್ಕೆ ಮುಂದೂಡಿದೆ. ಸರ್ಕಾರಿ ವಕೀಲರು ಕಾಲಾವಕಾಶ ಕೇಳಿದ್ದರಿಂದಾಗಿ ವಿಚಾರಣೆಯನ್ನೂ ಮುಂದೂಡಲಾಗಿದೆ.   ಈ ಬಗ್ಗೆ ಮಾಹಿತಿ ನೀಡಿದ ನಳಿನಿ ಪರ ವಕೀಲ ಅನಿಸ್ ಪಾಷ, ನಾವು ನಮ್ಮ ವಾದ ಮಂಡನೆ ಮಾಡಿದ್ದೇವೆ. ನಳಿನಿ ಫ್ರೀ ಕಾಶ್ಮೀರ ನಾಮಫಲಕ ಹಿಡಿದಿದ್ದ ವೇಳೆ ಸ್ಥಳದಲ್ಲಿದ್ದ ಇಬ್ಬರು ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ‌. ಅವರ ಮೇಲೆ ಕಾನೂನು ಕ್ರಮ ಆಗುವ ಸಾಧ್ಯತೆ ಇದೆ. […]

ಕಳ್ಳನಿಗೆ ಥಳಿಸಿದ್ದಕ್ಕೆ ಸಾವು: ಅಪಘಾತವೆಂದು ಬಿಂಬಿಸುತ್ತಿದ್ದಾರಾ..?

  ಮೈಸೂರಿನಲ್ಲಿ ಮೇಕೆ ಕಳ್ಳನೋರ್ವನನ್ನು ಸಾರ್ವಜನಿಕರೇ ಥಳಿಸಿ ಹತ್ಯೆ ಮಾಡಿದ್ದಾರೆಂದು ಹೇಳಲಾಗುತ್ತಿದ್ದು, ಈ ಘಟನೆ ಮೇಟಗಳ್ಳಿ ಠಾಣೆ ವ್ಯಾಪ್ತಿಯ ಮೊಗರಳ್ಳಿ ಮಂಟಿಯಲ್ಲಿ ನಡೆದಿದೆ. ಇದೀಗ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆಂದು ಬಿಂಬಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.   ಕೇರಳ ನೋಂದಾಯಿತ ರಿಕ್ಷಾವೊಂದರಲ್ಲಿ ನಾಯ್ಡುನಗರದ ಜಹೀರ್ ಎಂಬಾತ ಮೇಕೆಯನ್ನು ಕದ್ದು ಕೊಂಡೊಯ್ಯುತ್ತಿದ್ದ. ಇದನ್ನು ನೋಡಿದ ಸಾರ್ವಜನಿಕರು ಈತನ ರಿಕ್ಷಾವನ್ನು ಅಡ್ಡಗಟ್ಟಿ ಚೆನ್ನಾಗಿ ಥಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಆತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಭಾಗದಲ್ಲಿ ಹಲವಾರು ಭಾರಿ ಮೇಕೆ ಕಳ್ಳತನಗಳು ನಡೆದಿದ್ದು, […]

ಫ್ರೀ ಕಾಶ್ಮೀರ ವಿವಾದ: ನಿರ್ಧಾರಕ್ಕೆ ಬದ್ಧ ಎಂದ ಮೈಸೂರು ವಕೀಲರು

 ನಳಿನಿ ಪರ ವಕಾಲತ್ತು ವಹಿಸದಿರಲು ನಿರ್ಧರಿಸಿದ್ದ ಮೈಸೂರು ವಕೀಲರ ಸಂಘ ಅದೇ ನಿರ್ಧಾರವನ್ನು ಮುಂದುವರೆಸಲು ತೀರ್ಮಾನಿಸಿದೆ. ಈ ಸಂಬಂಧ ಇಂದು ಸಭೆ ನಡೆಯಿತು. ಈ ಸಭೆಯಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾದವಾದರೂ, ಅಂತಿಮವಾಗಿ ವಕಾಲತ್ತು ವಹಿಸದಿರಲು ಮೈಸೂರು ವಕೀಲರ ಸಂಘ ತೀರ್ಮಾನ ಮಾಡಿದೆ.   ಈ ಬಗ್ಗೆ ಹೇಳಿಕೆ ನೀಡಿರುವ ಮೈಸೂರು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಶಿವಣ್ಣ, ಮೈಸೂರು ವಕೀಲ ಸಂಘ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. ಸಂಘದ ನಿರ್ಧಾರವನ್ನು ಉಲ್ಲಂಘಿಸಿದರೆ, ಅವರನ್ನು ದೇಶದ್ರೋಹಿಗಳಿಗೆ ನೆರವಾದವರು ಎಂದು ಪರಿಗಣಿಸಿ […]

ಫ್ರೀ ಕಾಶ್ಮೀರ ವಿವಾದ ವಿಚಾರ: ಮಧ್ಯಾಹ್ನ 3ಕ್ಕೆ ವಿಚಾರಣೆ

ಫ್ರೀ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ನಳಿನಿ ಮತ್ತು ಮರಿ ದೇವಯ್ಯ ಪರ 129 ವಕೀಲರು ವಕಾಲತ್ತು ವಹಿಸಿದ್ದಾರೆ. ಕೋರ್ಟ್‍ ಗೆ 129 ವಕೀಲರು ವಕಾಲತ್ತು ಅರ್ಜಿ ಸಲ್ಲಿಸಿದ್ದಾರೆ. 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಕಾಲತ್ತು ಸ್ವೀಕರಿಸಿದ್ದು, ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ.