You cannot copy content of this page.
. . .

Category: ಮೈಸೂರು ಸ್ಪೆಷಲ್

ಸಮಾಧಿಗೆ ಪುಷ್ಪ ನಮನ.. ಸ್ಮಶಾನದಲ್ಲಿ ಪುಸ್ತಕ ಬಿಡುಗಡೆ..!

  ಸ್ಮಶಾನದಲ್ಲಿ ಬಿಡುಗಡೆಯಾಯ್ತು ಪುಸ್ತಕ… ಸಮಾಧಿಗೆ ಸಲ್ಲಿಕೆಯಾಯ್ತು ಪುಷ್ಪ ನಮನ… ಹೌದು, ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಅಶೋಕಪುರಂ ರುದ್ರಭೂಮಿ ಇಂತಹದ್ದೊಂದು ವಿಶಿಷ್ಠ ಸಂದೇಶ ಸಾರುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಆಶೋಕಪುರಂ ಅಭಿಮಾನಿಗಳ ಬಳಗ, ದಲಿತ ವೆಲ್‌ಫೇರ್ ಟ್ರಸ್ಟ್ ಹಾಗೂ ಪ್ರಗತಿಪರ ಸಂಘಟನೆಗಳಿಂದ ಅಂಬೇಡ್ಕರ್‌ ಗೆ ಪುಷ್ಪ ನಮನ ಹಾಗೂ ಗತಿಸಿದ ಹಿರಿಯರ ಸಮಾಧಿಗೆ ಪುಷ್ಪಾರ್ಚನೆ, ದೀಪಗಳ ನಮನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು.   ಇದೇ ವೇಳೆ ಸಿದ್ದಸ್ವಾಮಿಯವರು ರಚಿಸಿದ ‘ಮೈಸೂರು ಆದಿಕರ್ನಾಟಕ ಪುರ’ ಪುಸ್ತಕವನ್ನು ಪ್ರೊ.ಕೆ.ಎಸ್ ಭಗವಾನ್ […]

ಮೈಸೂರಲ್ಲಿ ಮೊದಲ ಬಾರಿ ಅರಳಿಮರ ಸ್ಥಳಾಂತರ..

   ಖಾಸಗಿ ಜಾಗದಲ್ಲಿದ್ದ 4 ವರ್ಷದ ಅರಳಿ ಮರವನ್ನು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಸ್ಥಳಾಂತರ ಮಾಡಲಾಗಿದೆ. ಅಗ್ರಹಾರ ಸರ್ಕಲ್‍ ಬಳಿಯ ಖಾಸಗಿ ಜಾಗದಲ್ಲಿ ಅರಳಿ ಮರವಿತ್ತು. ಆ ಜಾಗದಲ್ಲಿ ಮಾಲೀಕರು ಕಟ್ಟಡ ಕಟ್ಟಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ, ಆರ್‍ಟಿಒ ಹಾಗೂ O2 ಎಂಬ ಸರ್ಕಾರೇತರ ಸಂಸ್ಥೆಯ ನೇತೃತ್ವದಲ್ಲಿ ಮರವನ್ನು ಸ್ಥಳಾಂತರ ಮಾಡಲಾಯಿತು.   ಜೆಸಿಬಿ ಮೂಲಕ ಸುತ್ತಲೂ ಅಗೆದು ನಂತರ ಬೇರುಗಳ ಸಮೇತ ಮರವನ್ನು ಉರುಳಿಸಲಾಯಿತು. ನಂತರ ಕ್ರೇನ್‍ ತರಿಸಿ ಅದರ […]

ಸಂಜೆ ಜ್ಞಾನಪೀಠ ಪ್ರಶಸ್ತಿ ಪ್ರಕಟ ; ಮೈಸೂರಿಗೆ ಸಿಗುತ್ತಾ ಗೌರವ..?

  ದೆಹಲಿಯಲ್ಲಿ ಇಂದು ಜ್ಞಾನಪೀಠ ಪ್ರಶಸ್ತಿಯ ಕೇಂದ್ರೀಯ ಆಯ್ಕೆ ಸಮಿತಿ ಸಭೆ ಸೇರಿದೆ. ಸಂಜೆ ವೇಳೆಗೆ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟವಾಗಲಿದೆ. ಕನ್ನಡ ಉಪ ಸಮಿತಿಯಿಂದ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಅದರಲ್ಲಿ ಮೈಸೂರಿನ ಸಾಹಿತಿ ಡಾ.ಲತಾ ರಾಜಶೇಖರ್‍ ಅವರೂ ಸೇರಿದ್ದಾರೆ.   ಹಿರಿಯ ಒಡಿಯಾ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರತಿಭಾ ರೇ ಅವರ ಅಧ್ಯಕ್ಷತೆಯ ಕೇಂದ್ರೀಯ ಆಯ್ಕೆ ಸಮಿತಿಯಲ್ಲಿ ದೇಶದ ನಾನಾ ಭಾಷೆಗಳ 23 ಸಾಹಿತಿಗಳಿದ್ದಾರೆ. ಕನ್ನಡದ ಪ್ರತಿನಿಧಿಯಾಗಿ ಜೆ.ಎನ್‍.ಯು ಕನ್ನಡ ಪೀಠದ ನಿರ್ದೇಶಕರಾದ ಡಾ.ಪುರುಷೋತ್ತಮ […]

ಗೋಕುಲಂನಲ್ಲೊಂದು ಆಮ್ಲಜನಕ ಮನೆ..!

 ಪರಿಸರ ಉಳಿಸಬೇಕು, ವಾತಾವರಣವನ್ನು ಹಸಿರಾಗಿಟ್ಟುಕೊಳ್ಳಬೇಕು ಎಂದು ಹೇಳುವವರು ಸಾಕಷ್ಟು ಜನ ಇದ್ದಾರೆ. ಆದರೆ ದುರದೃಷ್ಟವಶಾತ್ ಅದನ್ನು ಹೇಳುವವರ ಸಂಖ್ಯೆ ಪಾಲಿಸುವವರ ಸಂಖ್ಯೆಗಿಂತ ಹತ್ತು ಪಟ್ಟು ಅಧಿಕ. ಆದರೆ ಕೆಲವರು ಮಾತ್ರ ಹಸಿರು ಬೆಳೆಸಿ ಪರಿಸರ ಉಳಿಸುವ ಪಣತೊಟ್ಟು ಪ್ರಚಾರವಿಲ್ಲದೆ ಸಮಾಜಕ್ಕೆ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ.    ಮೈಸೂರಿನ ಗೋಕುಲಂನಲ್ಲಿರುವ `ವರ್ಟಿಕಲ್ ಗಾರ್ಡನ್’ ಹೆಸರಿನ ಬೆಂಜಮಿನ್ ವಾಸ್ ಅವರ ಮನೆಯನ್ನು ಸ್ವಲ್ಪ ದೂರದಿಂದ ನೋಡಿದರೆ ಯಾರೂ ಅದನ್ನು ಮನೆ ಎಂದು ಕಂಡುಹಿಡಿಯುವುದಿಲ್ಲ. ವಿವಿಧ ಗಿಡಗಳನ್ನು ಮಾರುವ ನರ್ಸರಿ […]

ಯಾರು ಈ ಎಡ್ವಿನ್ ವ್ಯಾನ್ ಇಂಗೇನ್..? ಆ 117 ಕೋಟಿ ರೂ. ಆಸ್ತಿಯ ಗುಟ್ಟೇನು..?

 ಮೈಸೂರಿನಲ್ಲಿ ನೆಲೆಸಿದ್ದ ಖ್ಯಾತ ವನ್ಯಜೀವಿ ಚರ್ಮ ಪ್ರಸಾದನ ತಜ್ಞ ಎಡ್ವಿನ್‌ ಜೋಬರ್ಟ್‌ ವ್ಯಾನ್‍ ಇಂಗೇನ್‍ ಅವರಿಗೆ ಸೇರಿದ್ದ 117.87 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮೈಕೆಲ್‍ ಫ್ಲಾಯ್ಡ್‍ ಈಶ್ವರ್‍ ಎಂಬಾತ ಕಬಳಿಸಿದ್ದ. ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಯ ಅಧೀನದಲ್ಲಿದ್ದ ಎಲ್ಲಾ ಆಸ್ತಿಯನ್ನೂ ವಶಪಡಿಸಿಕೊಂಡಿದ್ದಾರೆ. ಕೇರಳದ ವಯನಾಡಿನಲ್ಲಿರುವ 220.19 ಎಕರೆ ಕಾಫಿ ಪ್ಲಾಂಟೇಷನ್‍ ಹಾಗೂ ಮೈಸೂರಿನ ಹೈದರ್‌ ಅಲಿ ರಸ್ತೆಯಲ್ಲಿರುವ ‘ಬಿಸ್ಸಲ್‌ ಮುಂಟಿ‘ ವ್ಯಾನ್‍ ಇಂಗೇನ್‍ ಕಟ್ಟಡ ಮತ್ತು ರೋಸ್‌ವುಡ್‌ನಿಂದ ತಯಾರಿಸಿದ ಪಿಠೋಪಕರಣಗಳು, ಸತ್ತ ವನ್ಯಜೀವಿಗಳ ಚರ್ಮದಿಂದ ತಯಾರಿಸಿದ 70 ವಿವಿಧ […]

ಕಾಂಕ್ರೀಟ್ ಕಾಡಲ್ಲಿ ‘ಬಾಳೆ’ ಹಸಿರಾಯಿತು..

   ಮಳೆನೀರು ಕೊಯ್ಲು ಪದ್ಧತಿಯ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಆದರೆ ಬಿಸಿಲು ಕೊಯ್ಲಿನ ಬಗ್ಗೆ ಕೇಳಿರುವವರ ಸಂಖ್ಯೆ ಕಡಿಮೆ. ಸೂರ್ಯನಿಂದ ನೇರವಾಗಿ ಭೂಮಿಗೆ ಬೀಳುವ ಬಿಸಿಲು ಹಾನಿಕಾರಕ. ಅವುಗಳು ಪ್ರಖರವಾಗಿ ಭೂಮಿ ಮೇಲೆ ಬೀಳದಂತೆ ಎಲ್ಲೆಡೆ ಹಸಿರು ಬೆಳೆಸಿ ಉರಿ ಬಿಸಿಲನ್ನು ಒಳ್ಳೆಯ ಕೆಲಸಕ್ಕೆ ಉಪಯೋಗ ಮಾಡಿಕೊಳ್ಳುವ ಪದ್ಧತಿಯೇ ಬಿಸಿಲು ಕೊಯ್ಲು. ಬೆಳಕಿನ ಬೇಸಾಯ ಅಥವಾ ಬಿಸಿಲು ಕೊಯ್ಲು ಪದ್ಧತಿ ಬಗ್ಗೆ ಇನ್ನೂ ಹೆಚ್ಚು ಜನಕ್ಕೆ ತಿಳಿದಿಲ್ಲ. ಆದರೆ ಮೈಸೂರಿನ ಈ ನಿವೃತ್ತ ಕೃಷಿ ವಿಜ್ಞಾನಿಯೊಬ್ಬರು ನಗರದ […]

ದೇಶದ ಮೊದಲ ವಿಮಾನ ತಯಾರಕ & ಪೈಲಟ್ ಮೂಲ ಮೈಸೂರು..!

ದೇಶದ ಮೊದಲ ಪೈಲಟ್ ಯಾರು ಅಂದರೆ ನಮಗೆ ಸಿಗುವ ಉತ್ತರ ಜೆಆರ್‍ಡಿ ಟಾಟಾ. ಯಾಕೆಂದರೆ ಅಧಿಕೃತವಾಗಿ ಈಗಲೂ ಅವರೇ ದೇಶದ ಮೊದಲ ಪೈಲಟ್‍. ಉದ್ಯಮಿ ಜೆಆರ್‍ಡಿ ಟಾಟಾ ಅವರಿಗೆ 1929 ಫೆಬ್ರವರಿ 10ರಂದು ದೇಶದ ಮೊದಲ ಪೈಲಟ್ ಆಗಿ ಪರವಾನಗಿ ನೀಡಲಾಯಿತು. ಆದರೆ ಕುತೂಹಲದ ವಿಚಾರ ಏನಂದ್ರೆ ಜೆಆರ್‍ಡಿ ಟಾಟಾ ಅವರಿಗಿಂತ ಮೊದಲೇ ಭಾರತ ದೇಶದ ಪ್ರಜೆಯೊಬ್ಬರು ಸ್ವತಃ ವಿಮಾನವೊಂದನ್ನು ತಯಾರಿಸಿದ್ದಾರೆ. ಅವರೇ ವಿಮಾನವನ್ನು ಚಾಲನೆ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಸಾಕ್ಷ್ಯಗಳೂ ಸಿಕ್ಕಿವೆ. ಖುಷಿಯ ವಿಚಾರ ಅಂದ್ರೆ […]

ಅರಸರಿಗೆ ಬಲು ಪ್ರಿಯ ಗಂಜಾಂ ಅಂಜೂರ..

  ಗಂಜಾಂ.. ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡಂತಿರುವ ಒಂದು ಪುಟ್ಟ ಹಳ್ಳಿ.. ಈ ಗ್ರಾಮ ಚಿನ್ನ ಹಾಗೂ ಬೆಳ್ಳಿ ಆಭರಣ ತಯಾರಿಕೆಗೆ ಹೆಚ್ಚು ಪ್ರಸಿದ್ಧಿ. ಆದರೆ ರಾಜರ ಕಾಲದಲ್ಲಿ ಆಭರಣ ತಯಾರಿಕೆಗಿಂತ ಅಂಜೂರ ಹಣ್ಣಿಗೆ ಇದು ತುಂಬಾನೇ ಫೇಮಸ್ ಆಗಿತ್ತು. ಅಲ್ಲಿನ ಮಣ್ಣಿನ ಗುಣ ಹಾಗೂ ಕಾವೇರಿ ನೀರು ಎರಡೂ ಸೇರಿದ್ದರಿಂದಾಗಿ ಗಂಜಾಂನಲ್ಲಿ ಬೆಳೆಯುತ್ತಿದ್ದ ಅಂಜೂರ ಅತ್ಯಂತ ರುಚಿಕರವಾಗಿತ್ತು. ಅದರ ಸ್ವಾದ ವಿದೇಶಗಳಿಗೂ ಹಬ್ಬಿತ್ತು ಅಂದರೆ ನೀವು ನಂಬಲೇಬೇಕು.   ಗಂಜಾಂನಲ್ಲಿ ಈಗ ಕುರುಹಿಗಾಗಿ ಬೆರಳೆಣಿಕೆಯ ಅಂಜೂರದ ಗಿಡಗಳು ಸಿಗಬಹುದು. […]

ಇಲ್ಲಿ ಏನು ಕೊಂಡರೂ ಒಂದೂವರೆ ಆಣೆ..!

  ಈಗ ರೂಪಾಯಿಗೇ ಬೆಲೆ ಇಲ್ಲ. ಆದರೆ ಆ ಕಾಲವೊಂದಿತ್ತು. ಆಗ ಪೈಸೆ, ಆಣೆಗಳ ಲೆಕ್ಕದಲ್ಲಿ ವ್ಯಾಪಾರ ವ್ಯವಹಾರ ನಡೆಯುತ್ತಿತ್ತು. ಪೈಸೆಗಳಲ್ಲಿ ಲೆಕ್ಕ ಹಾಕಿದರೆ ಒಂದು ರೂಪಾಯಿಗೆ ನೂರು ಪೈಸೆಯಾಗುತ್ತದೆ. ಅದೇ ಆಣೆ ಲೆಕ್ಕ ಆದರೆ ರೂಪಾಯಿಗೆ ಎಂಟು ಆಣೆ. ಮೈಸೂರಿನಲ್ಲಿ ಒಂದು ಗಲ್ಲಿ ಇತ್ತು. ಆ ಗಲ್ಲಿಯಲ್ಲಿ ಏನು ಕೊಂಡರೂ ಬರೀ ಒಂದೂವರೆ ಆಣೆ. ಅಂದರೆ ಸುಮಾರು 8 ಪೈಸೆ. ಒಂದೂವರೆ ಆಣೆಗೆ ಒಂದು ವಸ್ತು ಸಿಗುತ್ತಿದ್ದರಿಂದ ಈ ಗಲ್ಲಿ ಒಂದೂವರೆ ಆಣೆ ಗಲ್ಲಿ ಎಂದೇ ಫೇಮಸ್ […]

ರಾಮಸ್ವಾಮಿ ಸರ್ಕಲ್ ಗೊತ್ತು.. ರಾಮಸ್ವಾಮಿ ಗೊತ್ತಾ..?

   ರಾಮಸ್ವಾಮಿ ಸರ್ಕಲ್. ಮೈಸೂರಿನ ಪ್ರಮುಖ ವೃತ್ತಗಳಲ್ಲೊಂದು. ನಗರದ ಬಹುತೇಕ ಭಾಗಗಳಿಗೆ ಹೋಗಬೇಕೆಂದರೆ ಈ ಸರ್ಕಲ್ ಮೂಲಕವೇ ಹಾದುಹೋಗಬೇಕು. ಹೀಗಾಗಿ ರಾಮಸ್ವಾಮಿ ಸರ್ಕಲ್ ಎಲ್ಲರಿಗೂ ಚಿರಪರಿಚಿತ. ಆದ್ರೆ ರಾಮಸ್ವಾಮಿ ಬಗ್ಗೆಯೇ ಹೆಚ್ಚು ಜನಕ್ಕೆ ಗೊತ್ತಿಲ್ಲ. ದಶಕಗಳಿಂದ ಈ ಸರ್ಕಲ್‍ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೂ ರಾಮಸ್ವಾಮಿ ಬಗ್ಗೆ ಅರಿವಿಲ್ಲ. ಹಾಗಾದರೆ ಈ ರಾಮಸ್ವಾಮಿ ಯಾರು..? ಈ ಸರ್ಕಲ್‍ಗೆ ಯಾಕೆ ಆ ಹೆಸರಿಟ್ಟರು..? ಅನ್ನೋದೇ ಕುತೂಹಲದ ಸಂಗತಿ.    ನಾಲ್ಕು ದಶಕಗಳ ಹಿಂದಿನ ತನಕ ಈ ಸರ್ಕಲ್‍ನ್ನು ಫೈವ್‍ ಲೈಟ್‍ […]